More

    ಸೃಜನಶೀಲತೆ ಬೆಳೆಯಲು ಪ್ರೋತ್ಸಾಹ ಅಗತ್ಯ


    ಸಿರಗುಪ್ಪ: ಮಕ್ಕಳಲ್ಲಿನ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ ಎಂದು ಮುಖ್ಯಶಿಕ್ಷಕ ಶಿವಲಿಂಗಪ್ಪ ಹೇಳಿದರು.

    ನಗರದ 7, 8ನೇ ವಿಭಾಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಿರಗುಪ್ಪ ಕ್ಲಸ್ಟರ್ 5ನೇ ವಿಭಾಗದಿಂದ ಶುಕ್ರವಾರ ಹಮ್ಮಿಕೊಂಡಿದ್ದ 2022-23ನೇ ಸಾಲಿನ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳಲ್ಲಿ ಸೃಜನಶೀಲತೆ ಬೆಳೆಯಲು ಶಿಕ್ಷಕರು ಮತ್ತು ಪಾಲಕರು ನಿರಂತರ ಪ್ರೋತ್ಸಾಹ ನೀಡಬೇಕು ಎಂದರು.

    ಎಲ್ಲ ಮಕ್ಕಳಲ್ಲೂ ಒಂದಲ್ಲಾ ಒಂದು ಪ್ರತಿಭೆ ಇದ್ದೇ ಇರುತ್ತದೆ. ಇದನ್ನು ಹೊರಹಾಕಲು ಸೂಕ್ತ ವೇದಿಕೆ ಇಲ್ಲದೆ ಬಹುತೇಕ ಪ್ರತಿಭೆಗಳು ಅರಳು ಮುನ್ನವೇ ಬಾಡುತ್ತಿದ್ದವು. ಇದನ್ನರಿತ ಸರ್ಕಾರ, ಪ್ರಾಥಮಿಕ ಹಂತದಿಂದ ರಾಜ್ಯ ಮಟ್ಟದ ವರೆಗೆ ವಿದ್ಯಾರ್ಥಿಗಳ ಕೌಶಲ ಗುರುತಿಸುವುದಕ್ಕಾಗಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನಾರ್ಹ ಎಂದರು.

    ವಿವಿಧ ಶಾಲೆಗಳ ಮುಖ್ಯ ಶಿಕ್ಷಕರಾದ ಎಂ. ಬಸವನಗೌಡ, ಬಿ. ತಿಮ್ಮನಗೌಡ, ಜಿ. ಶಿವಲಿಂಗಪ್ಪ, ಬಿ.ಆರ್.ಸಿ. ಯೋಗಾನಂದಯ್ಯ, ಪಿಸಿಒ ಗಳಾದ ಪಂಪಾಪತಿ, ಎ. ಚನ್ನಬಸವನಗೌಡ, ಸಿಆರ್‌ಪಿ ಮಂಜುನಾಥ ಅಂಗಡಿ, ದೈಹಿಕ ಶಿಕ್ಷಕ ಈರಣ್ಣ, ಶಿಕ್ಷಕ ಧರ್ಮಣ್ಣ ಮತ್ತು ವಿವಿಧ ಶಾಲೆಗಳ ವಿದ್ಯಾರ್ಥಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts