More

    ರಂಗ ಕಲಾವಿದರಿಗೆ ವೇದಿಕೆ ಕಲ್ಪಿಸಿ- ರಂಗ ನಿರ್ದೇಶಕ ವಿ.ರಾಮಲಿಂಗಪ್ಪ ಮನವಿ

    ಸಿರಗುಪ್ಪ: ಗಡಿಭಾಗದ ಪ್ರದೇಶಗಳಲ್ಲಿ ಕನ್ನಡ ರಂಗಭೂಮಿ ಕಲಾವಿದರು ಎಲೆವರಿಕಾಯಿಯಂತೆ ಇದ್ದು, ಸರ್ಕಾರ ಅವರಿಗೆ ವೇದಿಕೆ ಕಲ್ಪಿಸಿದಲ್ಲಿ ಕನ್ನಡ ಭಾಷೆ ಹೆಚ್ಚು ಪ್ರಚಾರವಾಗಲು ಸಾಧ್ಯ ಎಂದು ರಂಗ ನಿರ್ದೇಶಕ ಮತ್ತು ನಾಟಕಕಾರ ವಿ.ರಾಮಲಿಂಗಪ್ಪ ಹೇಳಿದರು.

    ಬೈರಾಗಾಮದಿನ್ನೆ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತ ಇಲಾಖೆ, ಕಾರಂತ ರಂಗಲೋಕ ಕಲಾತ್ಮಕ ಮನಸ್ಸುಗಳ ತಾಣ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಮ್ಮೂರ ನಾಟಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಗಡಿಭಾಗದಲ್ಲಿ ಕನ್ನಡ ಬೆಳವಣಿಗೆಯ ಕೈಂಕರ್ಯಗಳು ಅವ್ಯಾಹತವಾಗಿವೆ. ಕನ್ನಡ ಸಾಹಿತ್ಯ ಪರಿಷತ್ ಹೆಚ್ಚು ಕಾರ್ಯಕ್ರಮ ನಡೆಸಿ ಜನರ ಬೌಧ್ದಿಕ ಪರಿರ್ವತನೆಗೆ ಸಹಕಾರಿ ಆಗಬೇಕಿದೆ ಎಂದರು.

    ಭಾಷವಾರು ಪ್ರದೇಶಗಳ ವಿಂಗಡಣೆಯಾಗಿ ಸುಮಾರು ವರ್ಷಗಳು ಕಳೆದರೂ ಅಲ್ಲಿ ಕನ್ನಡದ ಕಂಪು ಉತ್ತಂಗದಲ್ಲಿ ಇರುವುದು ಹೆಮ್ಮೆಯ ಸಂಗತಿಯಾಗಿದೆ.ಕನ್ನಡ ಭಾಷೆ ಹಾಗೂ ರಂಗಭೂಮಿ ಕಲಾವಿದರನ್ನು ಬೆಳಸುವುದು ನಮ್ಮ ಕರ್ತವ್ಯವಾಗಿದೆ ಎಂದರು. ಕೆ.ಸಂತೋಷ ಮತ್ತು ತಂಡ ಅಕ್ಕ ನಾಗಲಾಂಬಿಕೆ ನಾಟಕ ಪ್ರದರ್ಶನವಾಯಿತು. ಕೆ.ಪುರುಷೋತ್ತಮ ತಂಡದವರ ಕಿತ್ತೂರ ಕ್ರಾಂತಿ ನಾಟಕ ಹಾಗೂ ವೈ.ಮಂಜುನಾಥ್ ನೇತೃತ್ವದಲ್ಲಿ ಮಕ್ಕಳ ಸಾಮೂಹಿಕ ನೃತ್ಯ ನಡೆದವು. ರಂಗ ಕಲಾವಿದರಾದ ಮಂಜು ಸಿರಿಗೇರಿ, ವೆಂಕಟೇಶ್ ಹಾಗೂ ಸಂಸ್ಥೆಯ ಕಾರ್ಯದರ್ಶಿ ಆರ್.ಪಿ.ಮಂಜುನಾಥ್. ಮುಖಂಡರಾದ ಕೆ.ಪುರುಷೋತ್ತಮ, ಸತ್ಯನಾರಾಯಣ ರೆಡ್ಡಿ, ನಾಗನಗೌಡ, ಮಲ್ಲನಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts