More

    ಎಸ್ಸೆಸ್ಸೆಲ್ಸಿ ಪರೀಕ್ಷೆ ಮಹತ್ವದ ಘಟ್ಟ- ತಹಸೀಲ್ದಾರ್ ಎನ್.ಆರ್.ಮಂಜುನಾಥ ಸ್ವಾಮಿ ಅಭಿಮತ

    ಸಿರಗುಪ್ಪ: ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಂದಿನ ಉನ್ನತ ವಿದ್ಯಾಭ್ಯಾಸಕ್ಕೆ ಮಹತ್ವದಾಗಿದ್ದು, ಈ ಪರೀಕ್ಷೆಯನ್ನು ಭಯದಿಂದ ಎದುರಿಸದೇ ನಿರಂತರ ಅಭ್ಯಾಸ ಮಾಡಿ ನಿಖರವಾದ ಉತ್ತರಗಳನ್ನು ಬರೆಯುವ ಮೂಲಕ ಒಳ್ಳೆಯ ಅಂಕಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ತಹಸೀಲ್ದಾರ್ ಎನ್.ಆರ್.ಮಂಜುನಾಥ ಸ್ವಾಮಿ ತಿಳಿಸಿದರು.

    ನಗರದ ಗುರುಭವನದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ವಸತಿ ನಿಯದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಎರಡು ದಿನಗಳ ಪರೀಕ್ಷಾ ಪೂರ್ವ ಸಿದ್ಧತಾ ಕಾರ್ಯಾಗಾರದಲ್ಲಿ ಮಾತನಾಡಿದರು. ತರಗತಿಯಲ್ಲಿ ಶಿಕ್ಷಕರು ಹೇಳಿದ ಪಾಠವನ್ನು ತರಗತಿ ಮುಗಿದ ನಂತರ ಮನೆಯಲ್ಲಿ ಅಭ್ಯಾಸ ನಡೆಸಬೇಕು. ಪ್ರಶ್ನೆ ಪತ್ರಿಯಲ್ಲಿ ಕೇಳಿದ ಪ್ರಶ್ನೆಗಳನ್ನು ಮೊದಲು ಓದಿಕೊಂಡು ಅದನ್ನು ಅರ್ಥೈಸಿಕೊಂಡು ಆ ಪ್ರಶ್ನೆಗೆ ತಕ್ಕ ಉತ್ತರವನ್ನು ಬರೆಯಬೇಕು. ಉತ್ತರ ಬರೆಯುವಾಗ ಭಯಪಡದೆ ಸರಿಯಾಗಿ ವಿವರಣೆ ಬರೆಯಬೇಕು ಎಂದರು.

    ಬಿಸಿಎಂ ಇಲಾಖೆಯ ವಿಸ್ತಾರಣಾಧಿಕಾರಿ ಎ.ಗಾದಿಲಿಂಗಪ್ಪ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿದೇರ್ಶಕ ಎಂ.ಸಿದ್ದಯ್ಯ, ನಿವೃತ್ತ ಮುಖ್ಯಶಿಕ್ಷ ಎ.ಸಕ್ರಪ್ಪ, ಬಿಆರ್‌ಸಿ ಯೋಗನಂದಯ್ಯ, ನಿಲಯ ಮೇಲ್ವಿಚಾರಕರಾದ ಮುದಿಯಪ್ಪ, ಮಲ್ಲಿಕಾರ್ಜುನ, ಕೆ.ವೆಂಕಟೇಶ, ನಾಗರಾಜ, ರಾಘವೇಂದ್ರ, ಶಾಂತಮ್ಮ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts