More

    ದಾಖಲೆ ಲಸಿಕೀಕರಣ: ಒಂದೇ ದಿನದಲ್ಲಿ ಆಸ್ಟ್ರೇಲಿಯಾ ಜನಸಂಖ್ಯೆಗೆ ಸಮಾನ ಡೋಸ್​ಗಳು!

    ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಸಂದರ್ಭಕ್ಕೆ ಶುಕ್ರವಾರ ಒಂದೇ ದಿನದಲ್ಲಿ ಎರಡೂವರೆ ಕೋಟಿಗೂ ಹೆಚ್ಚು ಡೋಸ್​ಗಳ ದಾಖಲೆ ಲಸಿಕೀಕರಣ ನೆರವೇರಿತು. ಈ ದಾಖಲೆ ಸಂಖ್ಯೆಯು ಆಸ್ಟ್ರೇಲಿಯಾದ ಇಡೀ ಜನಸಂಖ್ಯೆಗೆ ಸಮನಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

    ಸರ್ಕಾರದ ಅಧಿಕೃತ ಟ್ವಿಟರ್​ ಖಾತೆ ಮೈಗವ್​ಇಂಡಿಯಾದಲ್ಲಿ ನೀಡಿರುವ ಚಿತ್ರಸಹಿತ ವರದಿಯ ಪ್ರಕಾರ ಭಾರತದಲ್ಲಿ ಸೆ. 17 ರಂದು ನೀಡಲಾದ ಒಟ್ಟು ಕರೊನಾ ಲಸಿಕೆ ಡೋಸ್​ಗಳ ಸಂಖ್ಯೆಯು ಆಸ್ಟ್ರೇಲಿಯಾದ ಒಟ್ಟು 2.54 ಕೋಟಿಯಷ್ಟು ಜನಸಂಖ್ಯೆಗೆ ಸಮನಾಗಿದೆ. ಇದು ಕೆನಡಾದ 3.77 ಕೋಟಿ ಜನಸಂಖ್ಯೆಯ ಮೂರನೇ ಎರಡು ಭಾಗದಷ್ಟು ಹಾಗೂ ನ್ಯೂಜಿಲೆಂಡಿನ 48 ಲಕ್ಷ ಜನಸಂಖ್ಯೆಯ ಐದು ಪಟ್ಟಾಗಿದೆ ಎಂದು ಸರ್ಕಾರ ಹೇಳಿದೆ.

    ಭಾರತದ ಒಂದು ದಿನದ ದಾಖಲೆ ಡೋಸ್​ಗಳ ಸಂಖ್ಯೆಯು ಆಸ್ಟ್ರೇಲಿಯಾದಲ್ಲಿ ಈವರೆಗೆ ನೀಡಲಾಗಿರುವ ಡೋಸ್​ಗಳಿಗಿಂತ (2.38 ಕೋಟಿ) ಹೆಚ್ಚಾಗಿದೆ. ಈಜಿಪ್ಟ್​ನಲ್ಲಿ ನೀಡಲಾಗಿರುವ 1.22 ಡೋಸ್​ಗಳಿಗೆ ದುಪ್ಪಟ್ಟಾಗಿದೆ ಮತ್ತು ನ್ಯೂಜಿಲೆಂಡಿನಲ್ಲಿ ನೀಡಲಾಗಿರುವ 46 ಲಕ್ಷ ಡೋಸ್​ಗಳಿಗೆ ಐದು ಪಟ್ಟು ಹೆಚ್ಚಾಗಿದೆ ಎಂದು ಸರ್ಕಾರ ಹೇಳಿದೆ.(ಏಜೆನ್ಸೀಸ್)

    ಓಲಾ ಎಲೆಕ್ಟ್ರಿಕ್​ ಸ್ಕೂಟರ್​​ನ ಹೊಸ ದಾಖಲೆ: 2 ದಿನಗಳಲ್ಲಿ 1100 ಕೋಟಿ ರೂ. ಮೊತ್ತದ ಮಾರಾಟ

    ನಟ ಸೋನು ಸೂದ್​​ಗೆ ಐಟಿ ಕಂಟಕ: 20 ಕೋಟಿ ರೂ. ತೆರಿಗೆ ವಂಚನೆ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts