More

    ಮಕ್ಕಳಿಗೂ ಲಸಿಕೆ ! ಸಿಂಗಾಪೂರ್​, ಯುಎಇಯಲ್ಲಿ 12 ವರ್ಷ ಮೇಲ್ಪಟ್ಟವರಿಗೆ ಲಭ್ಯ

    ನವದೆಹಲಿ : ಕರೊನಾ ಎರಡನೇ ಅಲೆಯಲ್ಲಿ ಮಕ್ಕಳಲ್ಲಿ ಕರೊನಾ ಸೋಂಕಿನ ಏರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಮಕ್ಕಳಿಗಾಗಿ ವಿಶೇಷ ಚಿಕಿತ್ಸಾ ಪ್ರೊಟೊಕಾಲ್​ಅನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಈ ನಡುವೆ ಕರೊನಾ ಮೂರನೇ ಅಲೆಯಲ್ಲಿ ಹೆಚ್ಚು ಹರಡುವ ಕರೊನಾ ರೂಪಾಂತರಿಗಳಿಂದ ಮಕ್ಕಳಿಗೆ ಸೋಂಕು ಹೆಚ್ಚುವ ಆತಂಕವನ್ನು ಹಲವು ತಜ್ಞರು ವ್ಯಕ್ತಪಡಿಸಿದ್ದಾರೆ.

    ಕರೊನಾದ ವಿರುದ್ಧ ಲಸಿಕೆಯೇ ಪ್ರಮುಖ ಅಸ್ತ್ರವೆಂಬ ಬಗ್ಗೆ ತಜ್ಞರು ಅರಿವು ಮೂಡಿಸುತ್ತಿರುವ ಹಿನ್ನೆಲೆಯಲ್ಲಿ ವಿವಿಧ ರಾಷ್ಟ್ರಗಳು ಮಕ್ಕಳಿಗೆ ಕರೊನಾ ಲಸಿಕೆ ನೀಡಲು ಮುಂದಾಗಿವೆ. ಅಮೆರಿಕ ಮತ್ತು ಕೆನಡಾದ ನಂತರ ಇದೀಗ ಸಿಂಗಾಪೂರ್ ಮತ್ತು ಯುಎಇ 12-15 ವರ್ಷ ವಯಸ್ಸಿನ ಮಕ್ಕಳಿಗೆ ಫೈಜರ್ ಬಯೋಎನ್​ಟೆಕ್​ನ ಕರೊನಾ ಲಸಿಕೆಯನ್ನು ಅನುಮೋದಿಸಿದೆ. ಯುರೋಪಿಯನ್ ಮೆಡಿಕಲ್ ಏಜೆನ್ಸಿ ಸಹ ಮಕ್ಕಳಿಗೆ ಫೈಜರ್​ ಲಸಿಕೆಯನ್ನು ನೀಡುವ ಬಗ್ಗೆ ಪರಾಮರ್ಶಿಸುತ್ತಿದೆ.

    ಇದನ್ನೂ ಓದಿ: ಕರೊನಾ ನಿಯಮ ಗಾಳಿಗೆ ತೂರಿ ಅಂದರ್​ ಬಾಹರ್ ! 27 ಜನರ ಬಂಧನ

    ಸಿಂಗಾಪೂರ್​ನಲ್ಲಿ ಈವರೆಗೆ ಫೈಜರ್​ನ ಲಸಿಕೆಯನ್ನು 16 ವರ್ಷ ಮತ್ತು ಮೇಲ್ಪಟ್ಟವರಿಗೆ ನೀಡಲಾಗುತ್ತಿತ್ತು. ಆದರೆ ಕಳೆದ ಕೆಲವು ವಾರಗಳಲ್ಲಿ ಅನೇಕ ಶಾಲಾ ಮಕ್ಕಳು ಕರೊನಾ ಪಾಸಿಟಿವ್ ಬಂದಿದ್ದು, ಸಿಂಗಾಪೂರ್​ ಸರ್ಕಾರ ಶಾಲೆಗಳನ್ನು ಮುಚ್ಚಿದೆ. ಜೊತೆಗೆ ಸಿಂಗಾಪೂರ್​ ಹೆಲ್ತ್​​ ಸೈನ್ಸಸ್ ಅಥಾರಿಟಿ ಲಸಿಕೆಯನ್ನು 12 ರಿಂದ 15 ವರ್ಷದ ಮಕ್ಕಳಿಗೆ ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಮತ್ತೊಂದೆಡೆ, ಮಕ್ಕಳನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಮತ್ತೆ ಶಾಲೆಗೆ ಕಳುಹಿಸುವ ಯೋಜನೆಯಿರುವ ಯುನೈಟೆಡ್ ಅರಬ್​ ಎಮರೈಟ್ಸ್​(ಯುಎಇ) ಕೂಡ ಫೈಜರ್​ನ ಕರೊನಾ ಲಸಿಕೆಯನ್ನು 12-15 ವರ್ಷದವರಿಗೆ ಅನುಮೋದಿಸಿದೆ.

    ಭಾರತದಲ್ಲಿ ಭಾರತ್​ ಬಯೋಟೆಕ್​ನ ಕೋವಾಕ್ಸಿನ್​ಅನ್ನು 2 ರಿಂದ 18 ವರ್ಷದ ವಯೋಮಾನದವರಲ್ಲಿ ಬಳಕೆಗೆ ಪರೀಕ್ಷಿಸಲು 2ನೇ ಮತ್ತು 3ನೇ ಹಂತದ ಟ್ರಯಲ್​ ನಡೆಸಲು ಡ್ರಗ್ಸ್​ ಕಂಟ್ರೋಲರ್ ಜನರಲ್​ ಆಫ್​ ಇಂಡಿಯಾ (ಡಿಜಿಸಿಐ) ಅನುಮತಿ ನೀಡಿದೆ. ಈ ಟ್ರಯಲ್​ಗಳು ಮುಂದಿನ 10-12 ದಿನಗಳಲ್ಲಿ ಆರಂಭವಾಗಲಿದೆ ಎನ್ನಲಾಗಿದೆ. (ಏಜೆನ್ಸೀಸ್)

    250 ರೂ.ಗೆ ಮನೆಯಲ್ಲೇ ಕರೊನಾ ಪರೀಕ್ಷೆ ! ರಾಪಿಡ್ ಆ್ಯಂಟಿಜನ್ ಹೋಂ ಟೆಸ್ಟ್​ ಕಿಟ್ ಬಳಕೆ​ಗೆ ಹಸಿರು ನಿಶಾನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts