More

    ಮದ್ಯದ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಿ

    ಸಿಂಧನೂರು: ತಾಲೂಕಿನಲ್ಲಿ ಮದ್ಯದ ಅಕ್ರಮ ಮಾರಾಟ, ಮರಳು ಮಾಫಿಯಾ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕೆಂದು ಉಪತಹಸೀಲ್ದಾರ್ ಚಂದ್ರಶೇಖರಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದಿಂದ ಸೋಮವಾರ ಮನವಿ ಸಲ್ಲಿಸಲಾಯಿತು.

    ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಲೆ ನೀಡಬೇಕು. ರೈತರ ಟ್ರಾೃಕ್ಟರ್ ಜಪ್ತಿ ಮಾಡುವುದನ್ನು ಬಿಡಬೇಕು. ಸರ್ಕಾರಿ ಇಲಾಖೆಗಳಲ್ಲಿನ ಭ್ರಷ್ಟಾಚಾರ ತಡಬೇಕು. ಕಂದಾಯ ಇಲಾಖೆಯಲ್ಲಿನ ರೈತರ ಸಮಸ್ಯೆ ಪರಿಹಾರ ಮಾಡಬೇಕು. ಮರಳು ನೀತಿ ರಾಷ್ಟ್ರೀಕರಣಗೊಳಿಸಿರುವುದು ಸರಿಯಲ್ಲ. ಈ ಮರಳು ನೀತಿ ಹಿಂಪಡೆದು ಬಡವರಿಗೆ ಅನಕೂಲವಾಗುವ ರೀತಿಯಲ್ಲಿ ಕ್ರಮಕೈಗೊಳ್ಳಬೇಕು.

    ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು. ಪೋಡಿ ಮುಕ್ತವೆಂದು ಘೋಷಿಸಿದ್ದನ್ನು ಕಾರ್ಯರೂಪಕ್ಕೆ ತರಬೇಕು. ರೈತರ ಜಮೀನುಗಳಿಗೆ ಹೋಗುವ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು. ಎಪಿಎಂಸಿಯಲ್ಲಿ ಕೃಷಿ ಉತ್ಪನ್ನಳಿಗೆ 2 ರಿಂದ 10 ಕೆಜಿ ಸೂಟ್ ತೆಗೆಯುವುದು ನಿಲ್ಲಿಸಬೇಕು. ಜಾನುವಾರುಗಳ ಆಸ್ಪತ್ರೆ ನಿರ್ಮಾಣ ಮಾಡಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಸಬೇಕು. ರೈತರಿಗೆ ವಿದ್ಯುತ್ ಪರಿವರ್ತಕ ಸೇರಿ ಇತರ ಸಲಕರಣೆಗಳನ್ನು ಇಲಾಖೆಯಿಂದ ಉಚಿತವಾಗಿ ನೀಡಬೇಕೆಂದು ಒತ್ತಾಯಿಸಲಾಯಿತು.

    ಪ್ರಮುಖರಾದ ಅಯ್ಯಪ್ಪ ಮಾನೇಗರ, ಹುಲಿಗೆಯ್ಯ ಗೊಣ್ಣಿಗನೂರು, ರಮಣರೆಡ್ಡಿ ಹೊಸಳ್ಳಿಕ್ಯಾಂಪ್, ಸೋಮಣ್ಣ ಜವಳಗೇರಾ, ಅಮರೇಶ ಮುಕ್ಕುಂದಾ, ಚಿದಾನಂದಪ್ಪ ಮಾರುತಿನಗರ, ಬಸವರಾಜ ಉಪ್ಪಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts