More

    ಜಮದಗ್ನಿ ಕೊಲೆ ಪ್ರಕರಣದ ಸಮರ್ಪಕ ತನಿಖೆಯಾಗಲಿ

    ಸಿಂಧನೂರು: ನ್ನಟಗಿ ಗ್ರಾಮದಲ್ಲಿ ಮಾ.23 ರಂದು ನಡೆದ ಜಮದಗ್ನಿ ಚಲವಾದಿ ಕೊಲೆ, ಜಾತಿ ದ್ವೇಷದ ಕಾರಣಕ್ಕೆ ಪೂರ್ವನಿಯೋಜಿತವಾಗಿದ್ದು, ತನಿಖೆ ನಡೆಸಬೇಕೆಂದು ಒತ್ತಾಯಿಸಿ ದಲಿತ ಪರ ಸಂಘಟನೆಗಳ ಒಕ್ಕೂಟ ಮಂಗಳವಾರ ಪ್ರತಿಭಟನೆ ನಡೆಸಿತು.

    ಡಿವೈಎಸ್ಪಿ ತನಿಖೆಯನ್ನು ಪಾರದರ್ಶಕವಾಗಿ ನಡೆಸಿಲ್ಲ. ಮುಖ್ಯ ಅಪರಾಧಿ ಹಾಗೂ ಇತರರನ್ನು ಆರೋಪ ಪಟ್ಟಿಯಿಂದ ಕೈ ಬಿಡಲಾಗಿದೆ. ಆರೋಪಿಗಳು ನ್ಯಾಯಾಂಗ ಬಂಧನದಿಂದ ಹೊರ ಬರಲು ಸಹಾಯ ಮಾಡಿದ್ದು, ಸಂತ್ರಸ್ತರ ದೂರನ್ನು ತಡವಾಗಿ ದಾಖಲಿಸಿಕೊಳ್ಳಲಾಗಿದೆ ಎಂದು ದೂರಿದರು.
    ಜಮದಗ್ನಿ ಕುಟುಂಬದವರ ಮೇಲೆಯೆ ಪ್ರಕರಣ ದಾಖಲಿಸಿ, 42 ದಿನ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಇದರಿಂದಾಗಿ ಕುನ್ನಟಗಿ ಗ್ರಾಮದಲ್ಲಿನ ದಲಿತರು ಭಯದ ನೆರಳಿನಲ್ಲಿ ಜೀವಿಸುವಂತಾಗಿದೆ ಎಂದು ಹೇಳಿದರು. ಪ್ರಮುಖರಾದ ಆರ್.ಮಾನ್ಸಯ್ಯ, ಶ್ರೀಕಾಂತ ಗೋನಾಳ, ವಿನೋದಕುಮಾರ, ಹನುಮಂತಪ್ಪ ಮಲ್ಲಾಪೂರ, ಲಿಂಗರಾಜ ಮಲ್ಲಾಪೂರ, ಶ್ಯಾಮಣ್ಣ ಸಾಸಲಮರಿ, ವಿನೋದ ಕುನ್ನಟಗಿ, ರಂಗಪ್ಪ ಪಗಡದಿನ್ನಿ, ಹನುಮಂತ, ಜಮದಗ್ನಿ ಪತ್ನಿ ಚನ್ನಮ್ಮ ಕುನ್ನಟಗಿ, ದೇವಮ್ಮ ದುರುಗಪ್ಪ, ಅನ್ನಪೂರ್ಣ ರಾಮಣ್ಣ, ಪಾರ್ವತೆಮ್ಮ ಹುಲುಗಪ್ಪ ಇದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts