More

    ಸ್ವಸಹಾಯ ಗುಂಪುಗಳಿಗಾಗಿ ಮುಕ್ತ ಮಾರುಕಟ್ಟೆ

    ಸಿಂಧನೂರು: ಸ್ವಸಹಾಯ ಸಂಘಗಳ ಗುಂಪುಗಳಿಂದ ತಯಾರಿಸುವ ಆಹಾರ ಪದಾರ್ಥ ಹಾಗೂ ಇತರ ವಸ್ತುಗಳ ಮಾರಾಟಕ್ಕೆ ಮುಕ್ತ ಮಾರುಕಟ್ಟೆ ನಿರ್ಮಾಣ ಮಾಡುವುದಕ್ಕಾಗಿ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ. ಈ ವಿಷಯವನ್ನು ನಾನು ಸದನದಲ್ಲಿ ಪ್ರಸ್ತಾಪಿಸಿದ್ದೆ ಎಂದು ಶಾಸಕ ವೆಂಕಟರಾವ ನಾಡಗೌಡ ಹೇಳಿದರು.

    ನಗರದ ಸ್ತ್ರೀಶಕ್ತಿ ಭವನದಲ್ಲಿ ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ತಾಲೂಕು ಇಂದಿರಾಗಾಂಧಿ ಸ್ವಸಹಾಯ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಅಮೃತ ಯೋಜನೆಯಡಿ ಬೀಜಧನ ಸಹಾಯಧನದ ಚೆಕ್‌ಗಳನ್ನು ಫಲಾನುಭವಿಗಳಿಗೆ ವಿತರಿಸಿ ಬುಧವಾರ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಸ್ವಸಹಾಯ ಗುಂಪುಗಳು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮುಂದಾಗಿರುವುದು ಸ್ವಾಗತಾರ್ಹವಾಗಿದೆ. ಆರ್ಥಿಕ ಬಲವರ್ಧನೆಗೂ ಅನಕೂಲವಾಗಿದೆ. ಆದರೆ, ಸ್ವಸಹಾಯ ಸಂಘಗಳು ತಯಾರಿಸುತ್ತಿರುವ ಆಹಾರ ಹಾಗೂ ಇತರ ವಸ್ತುಗಳ ಮಾರಾಟಕ್ಕೆ ಸರಿಯಾದ ಮಾರುಕಟ್ಟೆ ಇಲ್ಲ. ಸ್ಥಳೀಯವಾಗಿ ಮಾರಾಟ ಮಾಡುವುದರೊಂದಿಗೆ ಬೇರೆ ಕಡೆಗೂ ರಫ್ತು ಮಾಡಬಹುದಾಗಿದೆ ಎಂದರು.

    ಇಂದಿರಾಗಾಂಧಿ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ ಮಾತನಾಡಿ, ಅಮೃತ ಯೋಜನೆಯಡಿ ತಾಲೂಕಿನ 40 ಸ್ವಸಹಾಯ ಗುಂಪುಗಳಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಾಯ ಧನ ನೀಡಲಾಗಿದೆ ಎಂದರು. ಸಿಡಿಪಿಒ ಸುದೀಪ ಕುಮಾರ ಯೋಜನೆಯ ಮಾಹಿತಿ ನೀಡಿದರು. ತುರ್ವಿಹಾಳ ಸಿಡಿಪಿಒ ಅಶೋಕ, ಜೆಡಿಎಸ್ ಮುಖಂಡ ಧರ್ಮನಗೌಡ ಮಲ್ಕಾಪುರ, ಸ್ವಸಹಾಯ ಸಂಘಗಳ ಗುಂಪುಗಳ ಅಧ್ಯಕ್ಷರು, ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts