More

    ಒಯಾಸಿಸ್ ಸ್ಕೂಲ್‌ನಲ್ಲಿ ವಿಜ್ಞಾನ ದಿನಾಚರಣೆ

    ಸಿಂಧನೂರು: ಗಂಗಾನಗರದಲ್ಲಿರುವ ಒಯಾಸಿಸ್ ಸ್ಕೂಲ್‌ನಲ್ಲಿ ಶನಿವಾರ ವಿಜ್ಞಾನ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಮಕ್ಕಳು ನಿರುಪಯುಕ್ತ ವಸ್ತುಗಳನ್ನು ಬಳಸಿಕೊಂಡು ವಿಜ್ಞಾನಕ್ಕೆ ಸಂಬಂಧಿಸಿದ ತುಂಗಭದ್ರಾ ಡ್ಯಾಂ, ಮನುಷ್ಯನ ದೇಹದ ಅಂಗಾಂಗಗಳು, ಹೈಡ್ರೋ ಎಲೆಕ್ಟ್ರಿಕ್ ಪವರ್ ಜನರೇಶನ್, ಬಯೋ ಗ್ಯಾಸ್ ಪ್ಲಾಂಟ್, ವೇಸ್ಟ್ ವಾಟರ್ ಟ್ರೀಟ್‌ಮೆಂಟ್, ಡಿಪ್ಕೆಸ್ ಆಫ್ ಐಸ್ ಆ್ಯಂಡ್ ಕರೆಕ್ಷನ್, ಡಬಲ್ ಸರ‌್ಕಿಲೇಷನ್, ಡೆವಲಪ್‌ಮೆಂಟ್ ಆಫ್ ಎಂಪ್‌ರಿಯೋ, ಗ್ಲೋಬಲ್ ವಾರ‌್ಮಿಂಗ್, ಮಾಡಲ್ ಆಫ್ ಮಮ್ಮಿ, ಹ್ಯೂಮನ್ ಡೈಜೆಸ್ಟೆ ಸಿಸ್ಟಮ್ ತಯಾರಿಸಿ ಪ್ರದರ್ಶಿಸಲಾಯಿತು.

    ಶಾಸಕ ವೆಂಕಟರಾವ ನಾಡಗೌಡ ಭೇಟಿ, ನೀಡಿ ವಿಜ್ಞಾನಕ್ಕೆ ಸಂಬಂಧಿಸಿದ ವಸ್ತುಗಳನ್ನು ವೀಕ್ಷಿಸಿ ಮಕ್ಕಳ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸ್ಥೆಯ ಅಧ್ಯಕ್ಷ ನಸಿರುದ್ದೀನ್ ಖಾದ್ರಿ, ಕೋ ಆರ್ಡಿನೇಟರ್ ಅರಕಾಂ ಖಾನ್ ಬೆಳಗಾಮಿ, ಪ್ರಾಚಾರ್ಯೆ ಆಯೀಶಾ ಬೆಗಳಾಮಿ, ಶಿಕ್ಷಕರಾದ ಬಸವರಾಜ, ನಾಗರಾಜ, ಸಂಗೀತಾ, ಗೌಸಿಯಾ, ಸಮ್ರೀನ್, ಸನಾ, ಸಂಧ್ಯಾ, ಸುರೇಖಾ, ಮುಸ್ಕಾನ್, ಮುನವರಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts