More

    ಭಕ್ತಿ ಮಾರ್ಗದಲ್ಲಿ ನಡೆದರೆ ಶಾಶ್ವತ ಸುಖ-ಮಂತ್ರಾಲಯ ಶ್ರೀ

    ಸಿಂಧನೂರು: ಶಾಶ್ವತವಾದ ಸುಖ, ಸಂತೋಷ, ಶಾಂತಿ ಸಿಗಬೇಕಾದರೆ ನಾವು ಭಕ್ತಿ ಮಾರ್ಗದಲ್ಲಿ ನಡೆಯಬೇಕು ಎಂದು ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಹೇಳಿದರು.

    ಉಪ್ಪರವಾಡಿ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಪೂಜೆ

    ನಗರದ ಉಪ್ಪರವಾಡಿಯ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಭಾನುವಾರ ಸಂಜೆ ಪೂಜೆ ಸಲ್ಲಿಸಿ ಆಶೀರ್ವಚನ ನೀಡಿದರು. ಹಣ, ಮನೆ, ಮಡದಿ, ಮಗ, ಕುಡಿತ, ಜೂಜಾಟದಿಂದ ಸುಖ ಸಿಗುತ್ತದೆ ಎಂದು ಕೆಲವರು ಅಂದುಕೊಂಡಿದ್ದಾರೆ. ಆದರೆ, ಇದು ಶಾಶ್ವತ ಸುಖವಲ್ಲ. ಭಕ್ತಿಯಿಂದ ಆರಾಧನೆ ಮಾಡಿದರೆ ನಾವು ಶಾಶ್ವತ ಸುಖ ಪಡೆಯಲು ಸಾಧ್ಯ ಎಂದರು.

    ಇದನ್ನೂ ಓದಿ: ಮಂತ್ರಾಲಯ ಶ್ರೀ ರಾಘವೇಂದ್ರ ರಾಯರ ಮಠದ ಹುಂಡಿಯಲ್ಲಿ 2.11 ಕೋಟಿ ರೂಪಾಯಿಗಳು ಸಂಗ್ರಹ

    ರಾಯಚೂರು ಜಿಲ್ಲೆ ದಾಸರ ಬೀಡು ಆಗಿದ್ದು, ಶಾಂತಿ, ಸೌಹಾರ್ದ, ಸಾಮರಸ್ಯಕ್ಕೆ ಹೆಸರುವಾಸಿಯಾಗಿದೆ. ಆರಾಧ್ಯ ದೈವರಾದ ಶ್ರೀನಿವಾಸ, ರಾಘವೇಂದ್ರ ಸ್ವಾಮಿಗಳು, ಶಿವ, ಆಂಜನೇಯ ಅವರ ಆರಾಧನೆ ಮಾಡಬೇಕಿದೆ. ಧಾರ್ಮಿಕ ಶ್ರದ್ಧೆ, ಭಕ್ತಿ ಮಾರ್ಗದಲ್ಲಿ ನಡೆದಾಗ ದುಃಖ, ಕಷ್ಟ ಪರಿಹಾರವಾಗಿ ನಮ್ಮ ಇಷ್ಟಾರ್ಥಗಳು ಈಡೇರುತ್ತವೆ ಎಂದು ಸುಬುಧೇಂದ್ರ ತೀರ್ಥರು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts