More

    ಮಹಿಳೆಯರ ಆರ್ಥಿಕ ಪ್ರಗತಿ ಸಾಧಿಸಲಿ; ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಲಕ್ಷ್ಮೀ ಯಂಕಪ್ಪ ಭಂಗಿ

    ಸಿಂಧನೂರು: ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾದ ಸಮಾಜದಲ್ಲಿ ಸಮಾನತೆ ಬರಲಿದೆ ಎಂದು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಲಕ್ಷ್ಮೀ ಯಂಕಪ್ಪ ಭಂಗಿ ಹೇಳಿದರು.


    ಇಲ್ಲಿನ ನಗರಸಭೆ ಸಭಾಭವನದಲ್ಲಿ ಶನಿವಾರ ಡೇ ನಲ್ಮ್ ಯೋಜನೆಯಡಿ ಸಾಮಾಜಿಕ ಕ್ರೂಢೀಕರಣ ಹಾಗೂ ಸಾಂಸ್ಥಿಕ ಅಭಿವೃದ್ದಿ ಉಪಘಟಕದಡಿ ರಚಿಸಲಾದ ಸ್ವ-ಸಹಾಯ ಗುಂಪುಗಳಿಗೆ ದಶಸೂತ್ರ ಸಾಮರ್ಥ್ಯ ಅಭಿವೃದ್ದಿ ತರಬೇತಿಗೆ ಚಾಲನೆ ನೀಡಿ ಮಾತನಾಡಿದರು.


    ಮಹಿಳೆಯರ ಆರ್ಥಿಕ ಪ್ರಗತಿಗೆ ಸರಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಉದ್ಯೋಗ ತರಬೇತಿ, ಸ್ವಯಂ ಉದ್ಯೋಗ ಪಡೆದುಕೊಳ್ಳಲು ಸಹಾಯಧನ ನೀಡುತ್ತದೆ. ಸರಕಾರದ ಯೋಜನೆಗಳ ಲಾಭ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ತಿಳಿಸಿದರು.


    ನಗರಸಭೆ ಸಿಎಒ ದುರುಗಪ್ಪ ಹಸಮಕಲ್ ಅವರು ಸ್ವ-ಸಹಾಯ ಗುಂಪುಗಳಿಗೆ ದಶಸೂತ್ರಗಳ ಕುರಿತು ಮಾಹಿತಿ ನೀಡಿದರು. ನಗರಸಭೆ ವ್ಯವಸ್ಥಾಪಕಿ ರೇಖಾ, ಎಎಲ್‌ಎಫ್ ಅಧ್ಯಕ್ಷ ಮಂಗಮ್ಮ, ಅಮೃತ, ಪಾರ್ವತಮ್ಮ, ತರಬೇತಿ ಸಂಪನ್ಮೂಲ ವ್ಯಕ್ತಿಗಳಾದ ಗಿರಿಜಾರಾಮ್, ಯುಎನ್‌ಡಿಪಿ ಮತ್ತು ಸಿಆರ್‌ಪಿಗಳಾದ ಬಸಮ್ಮ, ಅಂಬಿಕ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts