More

    ಶಿಕ್ಷಣದಿಂದ ಅಜ್ಞಾನ ನಿವಾರಣೆ; ಉಪನ್ಯಾಸಕ ನಾಗರಾಜ ವಲ್ಕಂದಿನ್ನಿ ಅನಿಸಿಕೆ

    ಸಿಂಧನೂರು: ಸಮಾಜದಲ್ಲಿರುವ ಅಸಮಾನತೆ, ಅಜ್ಞಾನ, ಅಂಧಕಾರ, ಮೌಢ್ಯತೆ ನಿವಾರಣೆಗೆ ಶಿಕ್ಷಣವೊಂದೇ ಪರಿಹಾರ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಉಪನ್ಯಾಸಕ ನಾಗರಾಜ ವಲ್ಕಂದಿನ್ನಿ ಹೇಳಿದರು.

    ನಗರದ ಸುಕಾಲಪೇಟೆಯ ಮರಿಯಪ್ಪ ಕುರುಕುಂದಿ ಮನೆಯಲ್ಲಿ ದಲಿತ ಸಾಹಿತ್ಯ ಪರಿಷತ್ತಿನಿಂದ ಭಾನುವಾರ ಆಯೋಜಿಸಿದ್ದ ಮನೆಮನೆಗೆ ಮಹಾನಾಯಕ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಸ್ಪಶ್ಯತೆಯಂಥ ಸಮಸ್ಯೆ ಇನ್ನೂ ಬೆನ್ನು ಬಿದ್ದು ಕಾಡುತ್ತಿದೆ. ಈ ಸಮಸ್ಯೆಗಳಿಗೆ ಮಂಗಳವಾಡಲು ಶಿಕ್ಷಣವನ್ನು ಅಸ್ತ್ರವಾಗಿ ಮಾಡಿಕೊಳ್ಳಬೇಕೆಂದರು.

    ಪರಿಷತ್ತಿನ ತಾಲೂಕು ಉಪಾಧ್ಯಕ್ಷ ಡಾ.ಅರುಣಕುಮಾರ ಮಾತನಾಡಿ, ಪ್ರತಿಯೊಂದು ಮನೆ ಮತ್ತು ಮನಕ್ಕೆ ದಲಿತ ಪರಂಪರೆ ಹಾಗೂ ಅಂಬೇಡ್ಕರ್ ವಾದದ ಆಶಯಗಳನ್ನು ಬಿತ್ತುವುದೇ ದಲಿತ ಸಾಹಿತ್ಯದ ಮೂಲ ಉದ್ದೇಶ ಎಂದರು. ಮರಿಯಪ್ಪ ಕುರುಕುಂದಿ ಕಾರ್ಯಕ್ರಮ ಉದ್ಘಾಟಿಸಿದರು. ಪರಿಷತ್ತಿನ ಸಲಹೆಗಾರ ನಾರಾಯಣಪ್ಪ ಮಾಡಸಿರವಾರ, ಹನುಮಂತ ಸುಕಾಲಪೇಟೆ, ನಿರುಪಾದಿ ನಾಗಲಾಪುರ ಇದ್ದರು. ಬಸವರಾಜ ಬಾದರ್ಲಿ ಸಮತಾಗೀತೆ ಹಾಡಿದರು. ಶರಣಪ್ಪ ಹೊಸಳ್ಳಿ ಸ್ವಾಗತಿಸಿದರು. ರಮೇಶ ಹಲಗಿ ನಿರೂಪಿಸಿದರು. ಅಯ್ಯಪ್ಪ ಹರಟೆನೂರು ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts