More

    ಯೋಗದಿಂದ ಆಯುಷ್ಯ ವೃದ್ಧಿ

    ಸಿಂಧನೂರು: ದೈಹಿಕ ಸದೃಢ ಹೊಂದಲು ದೈನಂದಿನ ಯೋಗವೆ ರಾಮಬಾಣ ಎಂದು ಉಪನ್ಯಾಸಕ ಡಾ.ತಿಮ್ಮಪ್ಪ ಹೇಳಿದರು.

    ತುರ್ವಿಹಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ನವದೆಹಲಿಯ ಭಾರತೀಯ ತತ್ವಶಾಸ್ತ್ರೀಯ ಸಂಶೋಧನಾ ಪರಿಷತ್ತು, ಐಕ್ಯೂಎಸಿ ಮತ್ತು ಎನ್ನೆಸ್ಸೆಸ್ ಶುಕ್ರವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದರು. ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಎಲ್ಲ ವಿಜ್ಞಾನಗಳ ತಾಯಿಯಾಗಿ ಯೋಗವು ಇಂದಿನ ಬದುಕಿಗೆ ಮಹತ್ವದಾಗಿದೆ. ಯೋಗವು ಮನಸ್ಸು ಮತ್ತು ದೇಹವನ್ನು ಒಗ್ಗೂಡಿಸುತ್ತದೆ. ಮನುಷ್ಯ ಮತ್ತು ಪ್ರಕೃತಿಯ ನಡುವೆ ಸಾಮರಸ್ಯ ಮಾಡುತ್ತದೆ. ದೇಹದಲ್ಲಿ ರೋಗ-ನಿರೋಧಕ ಶಕ್ತಿ, ರಕ್ತಪರಿಚಲನೆ ಹೆಚ್ಚಿಸುವುದು, ಸ್ನಾಯುಗಳಿಗೆ ಚೈತನ್ಯ ನೀಡುವುದರ ಮೂಲಕ ಆಯುಷ್ಯವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts