More

    ಸಿಂಧನೂರಿನಲ್ಲಿ ಜಿಟಿಜಿಟಿ ಮಳೆ, ರಸ್ತೆಗಳು ಕೊಳೆ

    ಸಿಂಧನೂರು: ನಗರ ಹಾಗೂ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆಯಿಂದ ಜಿಟಿಜಿಟಿ ಮಳೆಯಾಗುತ್ತಿದ್ದು, ಇದರಿಂದ ರಸ್ತೆಗಳೆಲ್ಲ ಕೆಸರುಮಯವಾಗಿ ಸಂಚಾರಕ್ಕೆ ತೊಂದರೆ ಉಂಟಾಗಿದೆ.

    ಕಳೆದ ತಿಂಗಳಿಂದ ಆಗಾಗ ಸಣ್ಣ ಪ್ರಮಾಣದ ಮಳೆ ಬಿದ್ದಿದ್ದು ಬಿಟ್ಟರೆ ಇದೇ ಮೊದಲ ಬಾರಿಗೆ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣದೊಂದಿಗೆ ನಿರಂತರ ಮಳೆ ಸುರಿಯುತ್ತಿದೆ.

    ಇದನ್ನೂ ಓದಿ: ತ್ರಾಸಿ ರಸ್ತೆಯಲ್ಲಿ ತ್ರಾಸ

    ಇದರಿಂದ ನಗರದ ವಿವಿಧ ವಾರ್ಡ್ ಹಾಗೂ ಗ್ರಾಮೀಣ ಭಾಗದ ರಸ್ತೆಗಳೆಲ್ಲ ಕೆಸರು ಗದ್ದೆಯಾಗಿವೆ. ನಗರದ ವಾಲ್ಮೀಕಿ ಸರ್ಕಲ್, ಗಂಗಾನಗರ, ಪಿಡಬ್ಲ್ಯುಡಿ ಕ್ಯಾಂಪ್, ಎನ್‌ಜಿಒ ಕಾಲನಿ, ಏಳುರಾಗಿ ಕ್ಯಾಂಪ್ ಇತರೆಡೆಯ ರಸ್ತೆಗಳಲ್ಲಿ ಸಂಚಾರಕ್ಕೆ ಹರಸಾಹಸ ಪಡುವಂತಾಗಿದೆ.

    ಜಾರಿ ಬಿದ್ದೀರಿ ಜೋಕೆ ಎನ್ನುವ ಎಚ್ಚರಿಕೆ ಫಲಕ ಅಳವಡಿಸುವುದಷ್ಟೇ ಬಾಕಿ ಇದೆ. ಕೆಲಸ ಕಾರ್ಯಕ್ಕೂ ಮೋಡ ಕವಿದ ವಾತಾವರಣ-ಜಿಟಿಜಿಟಿ ಮಳೆ ತೊಂದರೆ ಉಂಟು ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts