More

    ಸಾಹಿತ್ಯ ನೊಂದವರಿಗೆ ಊರುಗೋಲಾಗಲಿ, ಅತಿಥಿ ಸಹಾಯಕ ಪ್ರಾಧ್ಯಾಪಕ ಡಾ.ಅರುಣ್ ಜೋಳದಕೂಡ್ಲಿಗಿ ಆಶಯ

    ಸಿಂಧನೂರು: ಗ್ರಾಮೀಣ ಭಾಗದ ಅನುಭವದೊಂದಿಗೆ ವಾಸ್ತವ ಬದುಕಿಗೆ ಸಾಹಿತ್ಯ ಸದಾ ಪ್ರತಿಸ್ಪಂದಿಸಬೇಕು. ಕ್ಷೀಣಗೊಂಡ ಧ್ವನಿಗಳಿಗೆ ಶಕ್ತಿ ನೀಡಿ, ನೊಂದವರ ಪಾಲಿಗೆ ಊರುಗೋಲಾಗುವುದೇ ಸಾಹಿತ್ಯದ ಹಿರಿಮೆ ಎಂದು ಜಾನಪದ ವಿಶ್ವವಿದ್ಯಾಲಯದ ಅತಿಥಿ ಸಹಾಯಕ ಪ್ರಾಧ್ಯಾಪಕ ಡಾ.ಅರುಣ್ ಜೋಳದಕೂಡ್ಲಿಗಿ ಹೇಳಿದರು.

    ಪಟ್ಟಣದ ಅನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ಮನುಜಮತ ಬಳಗದಿಂದ ಭಾನುವಾರ ಕತೆಗಾರ ಅಮರೇಶ ಗಿಣಿವಾರರ ಬಾಂಗ್ಲಾ ಹಕ್ಕಿಗಳು ಕಥಾ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು. ಉತ್ತರ ಕರ್ನಾಟಕ ಸಂಸ್ಕೃತಿಯ ತವರು. ಇಲ್ಲಿ ವಚನ ಸಾಹಿತ್ಯ, ದಾಸ ಸಾಹಿತ್ಯ, ತತ್ವ ಪದ ಹೀಗೆ ಸಮೃದ್ಧ ಕಥಾ ಸಾಹಿತ್ಯ ಈ ಭಾಗದಲ್ಲಿ ಹುಟ್ಟಿಕೊಂಡಿದೆ ಎಂದರು.

    ಈ ಭಾಗದ ಜನರ ನೋವು, ನಲಿವು, ಸಂಕೀರ್ಣ, ಸಂಕಟಗಳನ್ನು ಕತೆಯಾಗಿಸುವ ಮೂಲಕ ಸಮಾಜಕ್ಕೆ ಬೆಳಕು ಚೆಲ್ಲಬೇಕು. ಸಮುದಾಯ ಪ್ರಜ್ಞೆ ಮೂಡಿಸುವ ಕತೆಗಳು, ನೆಲಮೂಲ ಸಂವೇದನೆಯ ಕತೆಗಳು ಜನರ ಮನಸ್ಸುಗಳನ್ನು ಕಾಡುತ್ತವೆ. ತಮ್ಮ ವಿಶಿಷ್ಟ ಶೈಲಿ ಮೂಲಕ ರಾಜ್ಯಮಟ್ಟದಲ್ಲಿ ಹೆಸರು ಮಾಡಿರುವ ಅಮರೇಶ ನುಗಡೋಣಿ, ಕುಂ.ವೀರಭದ್ರಪ್ಪ, ಚೆನ್ನಣ್ಣ ವಾಲೀಕಾರ ಅವರಂತಹ ಕತೆಗಾರರ ಹಾದಿಯಲ್ಲಿ ಯುವ ಕತೆಗಾರರು ಸಾಗಬೇಕಿದೆ ಎಂದು ಅರುಣ್ ಜೋಳದಕೂಡ್ಲಿಗಿ ಹೇಳಿದರು.

    ಪುಸ್ತಕ ಪರಿಚಯ ಮಾಡಿದ ಕನ್ನಡ ವಿವಿಯ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಸಂಶೋಧನಾರ್ಥಿ ದೊಡ್ಡ ಹನುಮಂತ ಜವಳಗೇರಾ ಮಾತನಾಡಿ, ಅಮರೇಶ ಗಿಣಿವಾರರು ಬಾಲ್ಯ ಅನುಭವದ ಜತೆಗೆ ವರ್ತಮಾನದ ತಲ್ಲಣಗಳನ್ನು ಸಮೀಕರಿಸಿ ಕಥೆಗಳನ್ನು ರಚಿಸಿದ್ದಾರೆ ಎಂದು ತಿಳಿಸಿದರು.

    ಸರ್ಕಾರಿ ಪದವಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಕೆ.ಖಾದರ್ ಬಾಷಾ ಮಾತನಾಡಿದರು. ಕತೆಗಾರ ಅಮರೇಶ ಗಿಣಿವಾರ ಮಾತನಾಡಿದರು. ಅಲಬನೂರು ಸರ್ಕಾರಿ ಪಪೂ ಕಾಲೇಜು ಪ್ರಾಚಾರ್ಯ ಮಹಿಬೂಬ್‌ಸಾಬ್, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಡಾ.ಎಸ್.ಶಿವರಾಜ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts