More

    ಸ್ತ್ರೀಯರು ಸಾಹಿತ್ಯದ ಒಲವು ತೋರಲಿ

    ಸಿಂಧನೂರು: ಕೃತಿಗಳ ರಚನೆಗಾಗಿ ಸ್ತ್ರೀಯರು ಸಾಹಿತ್ಯದ ಕೆಡ ಒಲವು ತೋರಲಿ ಎಂದು ಸಂಶೋಧಕ ಶಾಶ್ವತಸ್ವಾಮಿ ಮುಕ್ಕುಂದಿಮಠ ಹೇಳಿದರು.

    ನಗರದಲ್ಲಿ ವಚನ ಸಾಹಿತ್ಯ ಪರಿಷತ್ ಮಹಿಳಾ ಘಟಕ, ಬಸವ ಕೇಂದ್ರ ಹಾಗೂ ಶ್ರೀನಿಧಿ ಪ್ರಕಾಶನದ ಆಶ್ರಯದಲ್ಲಿ ಕವಯಿತ್ರಿ ಬಸಮ್ಮ ಸಂಗಮೇಶ ತಾಳಿಕೋಟಿ ಅವರ ಚೊಚ್ಚಲ ಕೃತಿ ಹಾಗೂ ಶ್ರೀನಿಧಿ ಪ್ರಕಾಶನದ 18ನೇ ಕೃತಿ ವಚನ ದೀಪ್ತಿ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.

    ವಚನ ದೀಪ್ತಿ ಕವನ ಸಂಕಲನ 29 ವಚನಗಳು 33 ಭಾವಗೀತೆ ಒಳಗೊಂಡಿವೆ. ಕವಯಿತ್ರಿ ಬಸಮ್ಮಗೆ ಶರಣರ ಮತ್ತು ವಚನಗಳ ಮೇಲೆ ಅಪಾರ ಶ್ರದ್ಧೆ, ಅಭಿಮಾನವಿದೆ. ಗೃಹಿಣಿಯಾಗಿ ಸಾಹಿತ್ಯದ ಕಡೆ ಒಲವು ಹೊಂದಿರುವುದು ಒಳ್ಳೆಯ ವಿಚಾರ ಎಂದರು.

    ಬಸವ ಕೇಂದ್ರದ ಜಿಲ್ಲಾಧ್ಯಕ್ಷ ವೀರಭದ್ರಪ್ಪ ಕುರಕುಂದಿ ಮಾತನಾಡಿ, ಕನ್ನಡಕ್ಕೆ ವಚನ ಸಾಹಿತ್ಯ ಉತ್ತಮ ಮೌಲ್ಯಗಳನ್ನು ನೀಡಿದೆ ಎಂದರು. ವಚನ ಸಾಹಿತ್ಯ ಪರಿಷತ್ ಮಹಿಳಾ ಘಟಕ ಜಿಲ್ಲಾ ಅಧ್ಯಕ್ಷೆ ರಮಾದೇವಿ ಶಂಭೋಜಿ ಅಧ್ಯಕ್ಷತೆ ವಹಿಸಿದ್ದರು. ಸಿಂಧನೂರಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಬಿ.ಕೆ. ಪಾರ್ವತಿ ಅಕ್ಕ, ಸ್ಮಿತಾ ಅಕ್ಕ, ಗುಡೂರಿನ ಮುಖ್ಯಶಿಕ್ಷಕ ಶರಣಕುಮಾರ, ಪಿ. ಬಸವರಾಜ ಕುರಕುಂದಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ, ಯೋಗಗುರು ಎಂ.ಭಾಸ್ಕರ್, ಬಸವ ಕೇಂದ್ರ ಅಧ್ಯಕ್ಷ ನಾಗಭೂಷಣ ನವಲಿ, ಮಹಿಳಾ ಬಸವ ಕೇಂದ್ರದ ಅಧ್ಯಕ್ಷೆ ಸುಮಂಗಲಾ ಶಾಂತಪ್ಪ ಚಿಂಚರಕಿ, ತಾಲೂಕು ಕಸಾಪ ಮಾಜಿ ಅಧ್ಯಕ್ಷ ವೆಂಕನಗೌಡ ವಟಗಲ್, ವಚನ ಸಾಹಿತ್ಯ ಪರಿಷತ್ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಜಿ.ಜೆ.ದೇವಿರಮ್ಮ, ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ವೀರಭದ್ರಗೌಡ ಅಮರಾಪುರ, ರಾಷ್ಟ್ರೀಯ ಬಸವ ದಳ ಸಿಂಧನೂರು ತಾಲೂಕು ಅಧ್ಯಕ್ಷ ಕೃಷ್ಣ ಇದ್ದರು. ಬಸವಲಿಂಗಪ್ಪ ಬಾದರ್ಲಿ ಕಾರ್ಯಕ್ರಮ ನಿರೂಪಿಸಿದರು, ವಿಜಯಕುಮಾರ ತಾಳಿಕೋಟಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts