More

    ಹೆತ್ತವರನ್ನು ಗೌರವದಿಂದ ಕಾಣಿ

    ಸಿಂಧನೂರು: ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಹಿರಿಯರಿಗೆ ಗೌರವಿಸುವ ಮನೋಭಾವ ನಾವೆಲ್ಲ ಬೆಳೆಸಿಕೊಳ್ಳಬೇಕೆಂದು ಮುಖ್ಯ ಶಿಕ್ಷಕ ಸಂಗಮೇಶ ಕೋಟೆ ಹೇಳಿದರು.

    ವಿದ್ಯಾರ್ಥಿಗಳಿಗೆ ಶಿಕ್ಷಣ ಜತೆಗೆ ಸಂಸ್ಕಾರ ಅಗತ್ಯ

    ತಾಲೂಕಿನ ಮಲ್ಕಾಪುರ ಪ್ರೌಢಶಾಲೆಯಲ್ಲಿ ಮಂಗಳವಾರ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮ, ಶಾಲಾ ಮೇಲುಸ್ತುವಾರಿ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರ ಸೇವಾ ತಿಳುವಳಿಕೆ ಅಭಿಯಾನ ಅರಿವು-ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.

    ಇದನ್ನೂ ಓದಿ: ರಣವೀರ್​ ಸಿಂಗ್​, ಪೋರ್ನ್​ ಸ್ಟಾರ್​ ಜಾನಿ ಸಿನ್ಸ್​ ಜಾಹೀರಾತು! ಟಿವಿ ಇಂಡಸ್ಟ್ರಿಗೆ ಮಾಡಿದ ಅವಮಾನವೆಂದು ಆಕ್ರೋಶ

    ಸಮಾಜ ಕಟ್ಟಲು ಕೇವಲ ಬುದ್ಧಿವಂತಿಕೆ ಮಾತ್ರ ಸಾಲದು ಹೃದಯವಂತಿಕೆಯು ಅವಶ್ಯಕ. ಹೆತ್ತವರನ್ನು ರಕ್ಷಣೆ ಮಾಡಿ, ವಿದ್ಯೆ ಕಲಿಸಿದ ಗುರುಗಳನ್ನು ಗೌರವಿಸಿದಾಗ ಮಾತ್ರ ಸುಂದರ ಸಮಾಜ ಕಾಣಲು ಸಾಧ್ಯ. ಜೀವನದ ಯಶಸ್ಸಿನ ಕನಸು ಕಾಣುವ ಪಾಲಕರಿಗೆ ಉತ್ತಮ ಮಕ್ಕಳಾಗಿ ಬಾಳಬೇಕು ಎಂದರು.
    ಕಾರುಣ್ಯ ಆಶ್ರಮದ ಆಡಳಿತಾಧಿಕಾರಿ ಡಾ. ಚನ್ನಬಸವಸ್ವಾಮಿ ಹಿರೇಮಠ ಮಾತನಾಡಿ, ಶರಣರ ಆದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮಗೆಲ್ಲ ಉತ್ತಮ ಬದುಕುಕೊಟ್ಟ ತಂದೆ-ತಾಯಿಗಳನ್ನು ಬೀದಿಗೆ ತಳ್ಳದೆ, ಅವರನ್ನು ಬಾಳಿನ ಬೆಳಕಾಗಿ ಕಾಣುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು. ಎಸ್ಡಿಎಂಸಿ ಅಧ್ಯಕ್ಷ ಅಂಬಣ್ಣ, ಶಿಕ್ಷಕರಾದ ಮಲ್ಲಿಕಾರ್ಜುನಸ್ವಾಮಿ, ರಾಜಶೇಖರ, ನಾಗರಾಜ, ವೀರೇಶ, ರಾಜೇಶ್ವರಿ, ಶೈನಾಜ, ಸುನೀತಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts