More

    ಮಾದಿಗ ಸಮುದಾಯದವರು ಶೈಕ್ಷಣಿಕ ಅಭಿವೃದ್ಧಿ ಸಾಧಿಸಿ – ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎ.ವಸಂತ ಕುಮಾರ ಕಿವಿಮಾತು

    ಸಿಂಧನೂರು: ಮಾದಿಗ ಸಮುದಾಯ ಶೈಕ್ಷಣಿಕ ಅಭಿವೃದ್ಧಿ ಸಾಧಿಸಿ, ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಎ.ವಸಂತ ಕುಮಾರ ಹೇಳಿದರು.

    ಕನಕದಾಸ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಮಾದಿಗ ಮಹಾಸಭಾ ಮಂಗಳವಾರ ಏರ್ಪಡಿಸಿದ್ದ ಮಾದಿಗ ಸಮುದಾಯದ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾದಿ ಮಾದಿಗರ ತೀರಾ ಹಿಂದುಳಿದ್ದಾರೆ. ಇದರಿಂದ ಹೊರಬರಲು ಶಿಕ್ಷಣ ಪ್ರಬಲ ಅಸ್ತ್ರ. ಆರ್ಥಿಕವಾಗಿ, ರಾಜಕೀಯವಾಗಿ ಪ್ರಬಲರಾದರೆ ಸದಾಶಿವ ಆಯೋಗದ ವರದಿ ಅನುಷ್ಠಾನವಾಗಲು ಸಾಧ್ಯ ಎಂದರು.

    ಸಾನಿಧ್ಯ ವಹಿಸಿದ್ದ ರಂಭಾಪುರಿ ಶಾಖಾಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನ ಎಲ್ಲ ಧಾರ್ಮಿಕ ಸಿದ್ಧಾಂತ ಮೀರಿದ್ದು. ತುಳಿತಕ್ಕೊಳಗಾದವರಿಗೆ ಸಂವಿಧಾನ ಆಶಾಕಿರಣ ಎಂದರು. ಜಿಪಂ ಸದಸ್ಯ ಎನ್.ಶಿವನಗೌಡ ಗೊರೇಬಾಳ ಮಾತನಾಡಿ, ಕೆಳ ಸಮುದಾಯಕ್ಕೆ ಅಧಿಕಾರ ಒದಗಿಸುವ ಕೊಡುವ ಕೆಲಸವನ್ನು ಜನಪ್ರತಿನಿಧಿಗಳಾದ ನಾವು ಮಾಡಬೇಕು ಎಂದರು. ರೌಡಕುಂದ ಜಿಪಂ ಅಧ್ಯಕ್ಷ ಬಸವರಾಜ ಹಿರೇಗೌಡ, ಜೆಡಿಎಸ್ ವಕ್ತಾರ ಬಸವರಾಜ ನಾಡಗೌಡ ಮಾತನಾಡಿದರು.

    ಮಾದಿಗ ಮಹಾಸಭಾ ಜಿಲ್ಲಾಧ್ಯಕ್ಷ ಬಾಲಸ್ವಾಮಿ ಕೊಡ್ಲಿ ಅಧ್ಯಕ್ಷತೆ ವಹಿಸಿದ್ದರು. ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮುದ್ದಾಪುರ, ದಲಿತ ಮುಖಂಡರಾದ ಎಚ್.ಎನ್.ಬಡಿಗೇರ, ಆರ್.ಅಂಬ್ರೂಸ್, ಶ್ರೀಶಕ್ತಿ ರಕ್ತ ಭಂಡಾರ ವ್ಯವಸ್ಥಾಪಕ ಸೋಮನಗೌಡ ಬಾದರ್ಲಿ ಮಾತನಾಡಿದರು. ಇದೇ ವೇಳೆ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರನ್ನು ಸನ್ಮಾನಿಸಲಾಯಿತು.

    ಸಂಘಟನೆ ತಾಲೂಕು ಅಧ್ಯಕ್ಷ ಅಮರೇಶ ಗಿರಿಜಾಲಿ, ದುರುಗಪ್ಪ ದಢೇಸುಗೂರು, ಮಾದಿಗ ಮಹಾಸಭಾದ ರವೀಂದ್ರ ಬಿಲ್ದಾರ, ನಗರಸಭೆ ಸದಸ್ಯ ಶರಣಪ್ಪ ಉಪ್ಪಲದೊಡ್ಡಿ, ಎಪಿಎಂಸಿ ಮಾಜಿ ನಿರ್ದೇಶಕ ಹುಲುಗಪ್ಪ, ಆರ್.ಬೋನವೆಂಚರ್, ಖಾಜಿ ಮಲ್ಲಿಕ್ ವಕೀಲ್, ಶ್ರೀನಿವಾಸ ವೈ., ಎಚ್.ಜಗದೀಶ, ವೈ.ಅನಿಲಕುಮಾರ, ಹುಸೇನಪ್ಪ ಸೂಲಂಗಿ, ಅಲ್ಲಮಪ್ರಭು ಪೂಜಾರ, ಸುಭಾಷ್, ಶ್ರೀಧರಸ್ವಾಮಿ, ಖಲೀಲ್ ಖುರೇಷಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts