More

    ಸ್ವಾಮಿ ವಿವೇಕಾನಂದರು ಯುವ ಜನತೆಗೆ ಸ್ಪೂರ್ತಿ

    ಸಿಂಧನೂರು: ಸ್ವಾಮಿ ವಿವೇಕಾನಂದರು ಯುವ ಜನತೆಗೆ ಸ್ಪೂರ್ತಿಯಾಗಿದ್ದು ಅವರ ಆದರ್ಶಗಳನ್ನು ನಾವೆಲ್ಲ ಮೈಗೂಡಿಸಿಕೊಳ್ಳಬೇಕು ಎಂದು ಪ್ರಿಯಾ ಪೋಟೊ ಸ್ಟುಡಿಯೋ ಮಾಲೀಕ ಹಾಗೂ ಯುವ ಮುಖಂಡ ಪ್ರಲ್ಹಾದ ಕೆಂಗಲ್ ಹೇಳಿದರು.

    ನಗರದ ಕುಷ್ಟಗಿ ರಸ್ತೆಯಲ್ಲಿರುವ ಸರ್ಕಾರಿ ಮಹಾವಿದ್ಯಾಲಯ ಸ್ನಾತಕ ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿವಿಧ ದೇಶಗಳು ಕ್ರೌರ್ಯದಿಂದ ಆಳ್ವಿಕೆ ನಡೆಸುತ್ತಿದ್ದರೆ, ಭಾರತ ಜ್ಞಾನದಿಂದ ದೇಶ ಆಳುತ್ತಿದೆ. ಭಾರತೀಯ ಸನಾತನ ಸಂಸ್ಕೃತಿ ವಿಶ್ವಕ್ಕೆ ಗುರುವಾಗಿದೆ. ವೈಜ್ಞಾನಿಕವಾಗಿ ಅತ್ಯಂತ ಹಿಂದುಳಿದ ಭಾರತವನ್ನು ವಿಶ್ವ ಮಟ್ಟದಲ್ಲಿ ನಿಲ್ಲುವಂತೆ ಮಾಡಿದ್ದು ಮಾತ್ರ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಅಣು ವಿಜ್ಞಾನಿ ಎ.ಪಿ.ಜೆ.ಅಬ್ದುಲ್ ಕಲಾಂ ಎಂದರು.

    ಪ್ರಾಚಾರ್ಯ ಸಿ.ಬಿ.ಚಿಲ್ಕರಾಗಿ, ಸಹಾಯಕ ಪ್ರಾಧ್ಯಾಕರರಾದ ಕೆ.ಖಾದರ್‌ಬಾಷಾ, ವೆಂಕಟ ನಾರಾಯಣ, ವೆಂಕಟ ರಮಣ, ನಾಗಾರಾಜ, ರಾಮಣ್ಣ, ಸಂಗನಗೌಡ ಪಾಟೀಲ್, ನಾಗರಾಜ್ ವಿ., ಜಯಶ್ರೀ ಪಾಟೀಲ್, ಶೀತಲ್ ಉದಗಿರಿ, ಗ್ರಂಥಪಾಲಕ ಯಲ್ಲಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts