More

    ಮಾರಾಟವಾಗದ ರೈತರು ತಂದ ಧಾನ್ಯ

    ಸಿಂಧನೂರು: ಲಾಕ್‌ಡೌನ್‌ದಿಂದಾಗಿ ಎಪಿಎಂಸಿಯಲ್ಲಿ ವಹಿವಾಟಿನಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ವಿವಿಧ ಹಳ್ಳಿಗಳ ರೈತರು ವಿವಿಧ ಧಾನ್ಯಗಳನ್ನು ತುಂಬಿಕೊಂಡು ತಂದಿದ್ದ ಲಾರಿಗಳು, ಟ್ರ್ಯಾಕ್ಟರ್‌ಗಳು ಮುಖ್ಯ ರಸ್ತೆಯಲ್ಲೇ ಸಾಲಾಗಿ ನಿಲ್ಲುವಂತಾಗಿದೆ.

    ನಗರದ ಎಪಿಎಂಸಿ ಮಾರುಕಟ್ಟೆ ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ವಿವಿಧ ತಾಲೂಕುಗಳಿಗೆ ಮುಖ್ಯ ಮಾರುಕಟ್ಟೆಯಾಗಿದೆ. ನಿತ್ಯ ನೂರಾರು ವಾಹನಗಳಲ್ಲಿ ರೈತರು ತಾವು ಬೆಳೆದ ಧಾನ್ಯಗಳನ್ನು ತಂದು ಇಲ್ಲಿ ಮಾರುತ್ತಾರೆ. ಈ ಬಾರಿ ಕರೊನಾದಿಂದಾಗಿ ಎಪಿಎಂಸಿ ಮಾರುಕಟ್ಟೆಯಲ್ಲಿ ಒಂದು ವಾರದಿಂದ ವಹಿವಾಟು ಸಂಪೂರ್ಣ ನೆಲಕಚ್ಚಿದೆ. ತಂದ ದಾಸ್ತಾನು ಮಾರಾಟವಾಗದೆ, ಮತ್ತೇ ತಮ್ಮೂರಿಗೆ ಹೊತ್ತೊಯ್ಯುವ ಸ್ಥಿತಿ ರೈತರದ್ದಾಗಿದೆ.

    ಕಳೆದ ವಾರದಿಂದ ಈ ಸಮಸ್ಯೆ ಹೆಚ್ಚಾಗಿದೆ. ಆರಂಭದಲ್ಲಿ ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಇದರಿಂದ ಬೆಳಗ್ಗೆ 4 ಗಂಟೆಯಿಂದಲೇ ಬಹುತೇಕ ರೈತರು ಬಂದು ಪಾಳೆ ಹಚ್ಚುತ್ತಿದ್ದರು. ಬಹಳಷ್ಟು ರೈತರು ಒಂದೇ ಸಲ ಬಂದಿದ್ದರಿಂದ ಬೆಳಗ್ಗೆ 10 ಗಂಟೆಯೊಳಗೆ ಎಲ್ಲ ಧಾನ್ಯಗಳ ಖರೀದಿ ನಡೆಯುತ್ತಿಲ್ಲ. ಹೀಗಾಗಿ ಮುಖ್ಯರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸುವ ಸ್ಥಿತಿ ಎದುರಾಗಿದೆ. ಇದರಿಂದ ಟ್ರಾಫಿಕ್ ಸಮಸ್ಯೆ ಕಾಡತೊಡಗಿದೆ.

    ಧಾನ್ಯಗಳನ್ನು ಪರಿಶೀಲಿಸಿ, ನಿಗದಿತ ಬೆಲೆಗೆ ಖರೀದಿಸುವ ಪ್ರಕ್ರಿಯೆ ಮುಗಿಸುಷ್ಟರಲ್ಲಿ ಸರ್ಕಾರ ನಿಗದಿಗೊಳಿಸಿದ ಸಮಯ ಮುಗಿಯುತ್ತಿದೆ. ನಂತರ ಬರುವ ಪೊಲೀಸರು ಸಮಯ ಮೀರಿದ ಮೇಲೂ ಇಲ್ಲೇ ಉಳಿಯುವ ರೈತರು ದಂಡ ವಿಧಿಸುತ್ತಾರೆ. ಆದ್ದರಿಂದ ಬಂದ ದಾರಿ ಸುಂಕವಿಲ್ಲವೆಂದು ರೈತರು ಮರಳಿ ತಮ್ಮೂರಿಗೆ ಹೋಗುವ ಅನಿವಾರ್ಯತೆ ಎದುರಾಗಿದೆ. ಅಲ್ಲದೇ ಲಾರಿ, ಟ್ರ್ಯಾಕ್ಟರ್‌ಗಳಿಗೆ ಬಾಡಿಗೆ ನೀಡಿ ಕೈಸುಟ್ಟುಕೊಳ್ಳುವಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts