More

    ನೋಟರಿ ಕಾಯ್ದೆ ತಿದ್ದುಪಡಿ ಕೈಬಿಡಿ; ಸಿಂಧನೂರಿನಲ್ಲಿ ಸಂಸದ ಸಂಗಣ್ಣ ಕರಡಿಗೆ ಮನವಿ

    ಸಿಂಧನೂರು: ಕೇಂದ್ರ ಸರ್ಕಾರ ನೋಟರಿ ಕಾಯ್ದೆ ತಿದ್ದುಪಡಿ ಮಾಡಿ ನೋಟರಿಗಳಿಗೆ ಅವಧಿ ನಿಗದಿ ಪಡಿಸಲು ಹೊರಟಿರುವುದು ಸರಿಯಲ್ಲ. ಈ ಕಾಯ್ದೆ ಜಾರಿಯಾದರೆ ನೋಟರಿಗಳ ಬದುಕು ಅತಂತ್ರವಾಗುತ್ತದೆ. ಈ ಹಿಂದೆ ಇದ್ದ ಕಾಯ್ದೆಯನ್ನೇ ಮುಂದುವರಿಸುವಂತೆ ಮತ್ತು ಕಾಯ್ದೆ ತಿದ್ದುಪಡಿ ಮಾಡದಂತೆ ಸಂಸತ್ ಅಧಿವೇಶನದಲ್ಲಿ ಕಾನೂನು ಸಚಿವರಿಗೆ ಒತ್ತಾಯ ಮಾಡಬೇಕು ಎಂದು ನೋಟರಿಗಳ ಸಂಘ, ಸಂಸದ ಸಂಗಣ್ಣ ಕರಡಿಗೆ ಶ್ರೀಪುರಂಜಂಕ್ಷನ್‌ನಲ್ಲಿ ಮನವಿ ಸಲ್ಲಿಸಿತು.

    1952ರ ಕಾಯ್ದೆ ಅನ್ವಯ ವಕೀಲಿ ವೃತ್ತಿಯಲ್ಲಿರುವವರು ಹತ್ತು ವರ್ಷಗಳ ನಂತರ ನೋಟರಿಗಳಾಗಲು ಅರ್ಹರು. ತಿದ್ದುಪಡಿ ಕಾಯ್ದೆಯಲ್ಲಿ ನೋಟರಿಯಾಗಿ ನೇಮಕವಾದವರು 5 ವರ್ಷಕ್ಕೊಮ್ಮೆ ಗರಿಷ್ಠ ಎರಡು ಬಾರಿ ನವೀಕರಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಇದು ವೃತ್ತಿ ನಿರತ ನೋಟರಿಗಳ ಪಾಲಿಗೆ ಕರಾಳ ಕಾಯ್ದೆಯಾಗಲಿದೆ. ಸಾಮಾನ್ಯವಾಗಿ ನೋಟರಿಗಳು 33 ವಯಸ್ಸಿನ ನಂತರ ಆಗುತ್ತಾರೆ. ಅಲ್ಲಿಂದ 15 ವರ್ಷಕ್ಕೆ ಅವರ ಅವಧಿ ಮುಗಿದರೆ ಜೀವನ ನಡೆಸುವುದು ಕಷ್ಟವಾಗುತ್ತದೆ. ಸಾಮಾನ್ಯವಾಗಿ ನೋಟರಿಗಳು ವಕಾಲತ್ತು ವಹಿಸುವುದನ್ನು ಕಡಿಮೆ ಮಾಡುತ್ತಾರೆ. ಮಧ್ಯ ವಯಸ್ಸಿನಲ್ಲಿ ನೋಟರಿ ಅಧಿಕಾರ ಕಳೆದುಕೊಂಡರೆ ಅತಂತ್ರರಾಗುತ್ತಾರೆ. ದೇಶದಲ್ಲಿ ಹತ್ತು ಸಾವಿರ ಹಾಗೂ ರಾಜ್ಯದಲ್ಲಿ 750ಕ್ಕೂ ಹೆಚ್ಚು ನೋಟರಿಗಳಿದ್ದು, ಅವರೆಲ್ಲ ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ ಎಂದರು.

    ರಾಜ್ಯ ನೋಟರಿಗಳ ಸಂಘದ ಅಧ್ಯಕ್ಷ ಎನ್.ಕೋಟೇಶ್ವರರಾವ, ಈರೇಶ ಇಲ್ಲೂರು ವಕೀಲ, ನೋಟರಿಗಳಾದ ಮಲ್ಲಿಕಾರ್ಜುನ ಮೈಲಾಪುರ, ಬಾಬರಪಾಷಾ ಎಚ್.ಪಂಪಾಪತಿ, ಟಿ.ಮಲ್ಲಯ್ಯ, ಸುನೀಲ್‌ಕುಮಾರ, ಪ್ರಹ್ಲಾದಗುಡಿ, ಮಹಮ್ಮದ್‌ಅಲಿ, ಬಸವರಾಜ ಅಮರಾಪುರ, ಶರಣಬಸವರಾಜ ವಳಬಳ್ಳಾರಿ, ಅಮರೇಗೌಡ ಗದ್ರಟಗಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts