More

    ಎಂಇಎಸ್, ಶಿವಸೇನೆ ನಿಷೇಧಿಸಿ; ತಾಲೂಕು ಕುರುಬರ ಸಂಘ ಒತ್ತಾಯ

    ಪುಂಡರ ಗಡಿಪಾರಿಗೆ ಆಗ್ರಹ

    ಸಿಂಧನೂರು: ಉದ್ಧಟತನ ತೋರುತ್ತಿರುವ ಎಂಇಎಸ್ ಹಾಗೂ ಶಿವಸೇನಾ ಸಂಘಟನೆಗಳನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ತಾಲೂಕು ಕುರುಬರ ಸಂಘ ಮಂಗಳವಾರ ಪ್ರತಿಭಟನೆ ನಡೆಸಿತು.

    ಬೆಳಗಾವಿಯಲ್ಲಿ ಡಿ.17 ರಂದು ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿ ಅಂದೇ ಮಧ್ಯರಾತ್ರಿ ಅಪ್ಪಟ ಸ್ವಾಂತಂತ್ರೃ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿಯನ್ನು ಧ್ವಂಸಗೊಳಿಸಿರುವುದು ಖಂಡನೀಯ. ಕನ್ನಡ ನಾಡಿನಲ್ಲಿದ್ದು ಕನ್ನಡ ನಾಡಿನ ಜಲ, ನೆಲೆ, ಭಾಷೆಯನ್ನು ಕೆಣಕಿ ನಾಡಿನ ಮತ್ತು ದೇಶಭಕ್ತರ ತಾಳ್ಮೆ ಪರೀಕ್ಷಿಸುತ್ತಿದ್ದಾರೆ. ಇಂಥ ನಾಡದ್ರೋಹ ಸಂಘಟನೆಯನ್ನು ಕಿತ್ತೊಗೆಯಬೇಕು. ಪುಂಡರನ್ನು ಗಡಿಪಾರು ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸುವರ್ಣ ಸೌಧದಲ್ಲಿ ವಿಧಾನ ಮಂಡಲ ಅಧಿವೇಶನ ನಡೆದಿರುವ ಸಂದರ್ಭದಲ್ಲಿ ಇಂಥ ಘಟನೆಗಳು ನಡೆದಿರುವುದು ದುರಂತವೇ ಸರಿ. ಕರ್ನಾಟಕದ ಹಲವು ಕಡೆ ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಅಪಮಾನ ಮಾಡುತ್ತಿರುವುದು ಇತ್ತೀಚೆಗೆ ಹೆಚ್ಚಾಗುತ್ತಿದೆ. ಈ ಬಗ್ಗೆ ಕ್ರಮಕೈಗೊಳ್ಳಬೇಕು. ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಬೇಕು. ಇಂಥ ಘಟನೆಗೆ ಕಾರಣರಾದ ಎಂಇಎಸ್ ಪುಂಡಾಟಿಕೆ ತಡೆದು ಶಾಂತಿ, ಸೌಹಾರ್ದತೆ ನಿರ್ಮಾಣ ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಯಿತು.

    ತಾಲೂಕು ಕುರುಬ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಶಂಬಣ್ಣ, ವೆಂಕಟೇಶ, ಲಿಂಗಪ್ಪ, ಅಮರೇಶಪ್ಪ ಮೈಲಾರ, ಫಕೀರಪ್ಪ ತಿಡಿಗೋಳ, ಭೀರಪ್ಪ, ಗಾದೆಪ್ಪ ಸುಕಾಲಪೇಟೆ, ಸುರೇಶ ಹಚ್ಚೊಳ್ಳಿ, ವೆಂಕಟೇಶ, ಹುಚ್ಚಪ್ಪ, ನಿರುಪಾದೆಪ್ಪ ಗುಡಿಹಾಳ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts