More

    ಸಿಂದಗಿಯಲ್ಲಿ ಕಂಡ ಹಳದಿ ಕಪ್ಪೆ

    ಸಿಂದಗಿ: ಪಶ್ಚಿಮ ಘಟ್ಟಗಳಲ್ಲಿ ಕಾಣಸಿಗುವ ಅಪರೂಪದ ಕಪ್ಪೆ ತಳಿಯೊಂದು ಪಟ್ಟಣದಲ್ಲೂ ಕಂಡು ಆಶ್ಚರ್ಯ ಮೂಡಿಸಿದೆ.

    ಪಟ್ಟಣದಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಇಲ್ಲಿನ ಮನಗೂಳಿ ಲೇಔಟ್‌ನಲ್ಲಿನ ಕೊಚ್ಚೆ ಪ್ರದೇಶದಲ್ಲಿ ಹಳದಿ ಬಣ್ಣದ ಮೇಲ್ಮೈ ಹೊಂದಿದ ಕಪ್ಪೆಗಳ ಹಿಂಡು ಇತ್ತೀಚೆಗೆ ಕಂಡುಬಂದಿದೆ.

    ಈ ಕಪ್ಪೆಗಳು ಮುಂಗಾರು ಮಳೆ ಸಂದರ್ಬದಲ್ಲಿ ತನ್ನ ಮೈಬಣ್ಣವನ್ನು ಹಳದಿಯಾಗಿ ಬದಲಿಸಿ ಸಂತಾನೋತ್ಪತ್ತಿಗಾಗಿ ಹೆಣ್ಣು ಕಪ್ಪೆಗಳನ್ನು ಆಕರ್ಷಿಸುತ್ತವೆ. ವಿಚಿತ್ರವಾಗಿ ಒಟಗುಟ್ಟುತ್ತವೆ ಎಂಬುದು ವಿಜ್ಞಾನದಿಂದ ತಿಳಿದುಬರುತ್ತದೆ. ಈ ಗಂಡು ಕಪ್ಪೆಗಳನ್ನು ಇಂಡಿಯನ್ ಬುಲ್ ಫ್ರಾಗ್ ಎಂದು ಕರೆಯಲಾಗುತ್ತಿದೆ. ಇವು ಸೋನಾ ಕಪ್ಪೆಯ ಪ್ರಜಾತಿಗೆ ಸೇರುತ್ತವೆ.

    ಒರಟು ಮೈಮಾಟ ಹೊಂದಿದ ಈ ಕಪ್ಪೆ ಗಂಟಲನ್ನು ನೀಲಿ ಬಣ್ಣಕ್ಕೆ ತಿರುಗಿಸುತ್ತವೆ. ಇದರಿಂದ ಬಡಾವಣೆಯ ಸುತ್ತಮುತ್ತಲಿನ ಜನತೆಯನ್ನು ಆಕರ್ಷಿಸುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts