More

    ಪಟ್ಟಣದ ಅಭಿವೃದ್ಧಿಗೆ ಸದಸ್ಯೆರೆಲ್ಲರೂ ಪ್ರೋತ್ಸಾಹಿಸಿ

    ಸಿಂದಗಿ: ಹೊಸ ಅಭಿವೃದ್ಧಿಯ ನನ್ನ ಚಿಂತನೆಗೆ ಸದಸ್ಯರಾದ ತಮ್ಮೆಲ್ಲರ ಪ್ರೋತ್ಸಾಹ ಹಾಗೂ ಸಹಕಾರ ಅಗತ್ಯವಾಗಿದೆ ಎಂದು ನೂತನ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಹೇಳಿದರು.
    ಪಟ್ಟಣದ ಪುರಸಭೆ ಸಭಾಭವನದಲ್ಲಿ ಗುರುವಾರ ನಡೆದ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸೇರಿ 23 ಸದಸ್ಯರ ಪದಗ್ರಹಣ ಕಾರ್ಯಕ್ರಮದಲ್ಲಿ ಅಧಿಕಾರ ವಹಿಸಿಕೊಂಡು ಮಾತನಾಡಿ, ಒಂದು ಆಡಳಿತಕ್ಕೆ ಸರ್ವರ ಸಮಪಾಲು ಬೇಕು. ಅಲ್ಲದೆ, ಅಭಿವೃದ್ಧಿಪರವಾದ ಸಲಹೆ ಮತ್ತು ಸೂಚನೆಗಳನ್ನು ಸದಸ್ಯರೆಲ್ಲರೂ ನೀಡಬೇಕು ಎಂದರು.
    ಸದಸ್ಯ ರಾಜಣ್ಣಿ ನಾರಾಯಣಕರ ಮತ್ತು ಶರಣಗೌಡ ಪಾಟೀಲ ಮಾತನಾಡಿ, ಎಲ್ಲ ಸದಸ್ಯರ ಸಹಕಾರ ಅಭಿವೃದ್ಧಿಪರವಾಗಿಯೇ ಇರುತ್ತದೆ. ನಗರದಲ್ಲಿನ ಸಮಸ್ಯೆಗಳ ಬಗ್ಗೆ ಆಡಳಿತ ವರ್ಗ ಮತ್ತು ಅಧಿಕಾರಾಸ್ಥರು ಕಣ್ಣುಹರಿಸಿ, ಸೂಕ್ತವಾದ ಪರಿಹಾರ ಕಂಡುಕೊಳ್ಳಲು ನಾವುಗಳೆಲ್ಲರೂ ಶ್ರಮಿಸೋಣ ಎಂದರು.
    ಅಧಿಕಾರಿ ವರ್ಗದ ಪರವಾಗಿ ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ ಹಾಗೂ ಸಿಬ್ಬಂದಿ ವರ್ಗದವರು ಅಧ್ಯಕ್ಷ ಶಾಂತವೀರ ಮನಗೂಳಿ ಹಾಗೂ ಉಪಾಧ್ಯಕ್ಷ ಹಾಸಿಂಪೀರ್ ಆಳಂದ ಗೌರವಿಸಿದರು.

    ಅಧ್ಯಕ್ಷರ ಖಡಕ್ ವಾರ್ನಿಂಗ್

    ಕಚೇರಿಯ ಮಾಳಿಗೆಯಲ್ಲಿನ ಅವ್ಯವಸ್ಥೆಯನ್ನು ಪುರಸಭೆ ಸದಸ್ಯ ಸಂದೀಪ ಚೌರ ಅಧ್ಯಕ್ಷ ಮನಗೂಳಿ ಗಮನಕ್ಕೆ ತರುತ್ತಲೇ, ಗರಂ ಆದ ಅಧ್ಯಕ್ಷ ತಕ್ಷಣವೇ ಮುಖ್ಯಧಿಕಾರಿ ಹಾಗೂ ಸ್ವಚ್ಛತೆ ಕೆಲಸ ನಿರ್ವಹಿಸುವ ಇಬ್ಬರು ಸಿಬ್ಬಂದಿ ಕರೆದು, ಇದೇನು ಅವ್ಯವಸ್ಥೆ, ಇಲ್ಲೇನು ನಿಮ್ಮ ಕೆಲಸ, ಇಸ್ಪೇಟ್ ಆಡುವವರು ಯಾರು ಎಂದು ಪ್ರಶ್ನಿಸಿದಾಗ, ಸರ್ ಇಲ್ಲಿ ಹೊರಗಿನ ಹುಡುಗರು ಇಸ್ಪೇಟ್ ಆಡುತ್ತಾರೆ ಎಂದು ಸಮಜಾಯಿಸಿ ನೀಡಲು ಬಂದಾಗ, ಸ್ವಚ್ಛತೆ ಎಂದರೆ ಹೀಗೆ ಏನು? ಇನ್ನು ಮುಂದೆ ಇಂತಹದ್ದೆಲ್ಲ ನಡೆಯಲ್ಲ. ಕೂಡಲೇ ಮಾಳಿಗೆ ಮೇಲಿನ ಅವ್ಯವಸ್ಥೆ ಸರಿಪಡಿಸಿ ಇಲ್ಲವಾದರೆ ನಿಮ್ಮ ಮೇಲೆ ಕ್ರಮ ಜರುಗಿಸುವೆ ಎಂದು ಖಡಕ್ಕಾಗಿ ವಾರ್ನ್ ಮಾಡಿದರು.
    ಮುಖ್ಯಧಿಕಾರಿ ಮತ್ತು ನೀವು ಕಾರ್ಯಾಲಯದ ಮುಂದೆ ನಿಲ್ಲುವ ವಾಹನಗಳನ್ನು ಕಚೇರಿ ಪಕ್ಕದ ಆವರಣದಲ್ಲಿ ನಿಲ್ಲಿಸುವಂತೆ ಗಮನ ಹರಿಸಬೇಕು. ಕಚೇರಿಯಲ್ಲಿ ಎಲ್ಲವೂ ಸ್ವಚ್ಛವಾಗಿಡಬೇಕು ಎಂದು ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts