More

    ಮುಂದಿನ ಹಂಗಾಮಿಗೆ ವಾರದಲ್ಲಿಯೇ ಬಿಲ್ ಪಾವತಿ

    ಸಿಂದಗಿ: ಪ್ರಸಕ್ತ ಹಂಗಾಮಿನಲ್ಲಿ 3188 ಮೆಟ್ರಿಕ್ ಟನ್ ಕಬ್ಬನ್ನು ನುರಿಸಲಾಗಿದ್ದು, ಕಬ್ಬು ಪೂರೈಕೆ ಮಾಡಿದ ಎಲ್ಲ ರೈತರ ಖಾತೆಗೆ ಕಬ್ಬಿನ ಬಿಲ್ಲನ್ನು ಪಾವತಿಸಲಾಗಿದ್ದು, ಮುಂಬರುವ ಹಂಗಾಮಿನಲ್ಲಿ ಕೇವಲ ಎಂಟು ದಿನಗಳಲ್ಲಿಯೇ ರೈತರಿಗೆ ಹಣ ಪಾವತಿಸಲಾಗುವುದೆಂದು ಕಾರ್ಖಾನೆ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ ಕಬಾಡೆ ಭರವಸೆ ನೀಡಿದರು.

    ತಾಲೂಕಿನ ಯರಗಲ್ಲ ಬಿ.ಕೆ. ಗ್ರಾಮದ ಸಂಗಮನಾಥ ಶುಗರ್ಸ್‌ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ 2020-2021ನೇ ಸಾಲಿನ ಪ್ರಾಯೋಗಿಕ ಹಂಗಾಮಿನ ಮುಕ್ತಾಯ ಸಮಾರಂಭದಲ್ಲಿ ಕಬ್ಬು ಪೂರೈಸಿದ ರೈತರಿಗೆ ಮತ್ತು ಕಬ್ಬು ಕಟಾವು ಹಾಗೂ ಸಾರಿಗೆ ವ್ಯವಸ್ಥೆ ಕಲ್ಪಿಸಿದ ಮುಕ್ತೇದಾರರ ಅಭಿನಂದನಾ ಹಾಗೂ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡುವ ರೈತರೇ ಜೀವಾಳವಾಗಿದ್ದು, ಈ ರೈತ ಬಾಂಧವರಿಗೆ ಮುಂದಿನ ದಿನಗಳಲ್ಲಿ ಕಬ್ಬಿನ ಹೆಚ್ಚಿನ ಇಳುವರಿ ಯೋಜನೆ ಕುರಿತು ತಿಳಿವಳಿಕೆಯ ಜತೆಗೆ ವ್ಯವಸಾಯದ ಅಭಿವೃದ್ಧಿಪರ ಚರ್ಚೆ ಮತ್ತು ಪೂರಕ ಮಾಹಿತಿ ಒದಗಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

    ಕಾರ್ಖಾನೆ ನಿರ್ದೇಶಕ ವಿನಾಯಕ ಕಬಾಡೆ, ಶ್ರೀನಿವಾಸ ಕಬಾಡೆ, ಪ್ರಧಾನ ವ್ಯವಸ್ಥಾಪಕ ಶಶಿಕಾಂತ ಪಾಟೀಲ, ಕಬ್ಬು ವಿಭಾಗದ ಸಹಾಯಕ ವ್ಯವಸ್ಥಾಪಕ ಅನೀಲಕುಮಾರ ವಾಲಿಕಾರ, ಗದುಗಿನ ಉದ್ದಮೆದಾರ ಪಂಕಜ ಭಾಶಣ, ನಾರಾಯಣ ಪವಾರ, ಲಿಂಗರಾಜಗೌಡ ಪಾಟೀಲ, ತಾಲೂಕು ಗಾಣಿಗ ಸಮಾಜದ ಅಧ್ಯಕ್ಷ ಮಲ್ಲಣ್ಣ ಮನಗೂಳಿ, ಮೇಲನಗೌಡ ಪಾಟೀಲ ಮತ್ತು ಸುತ್ತಮುತ್ತಲಿನ ಗ್ರಾಮದ ರೈತರು ಹಾಗೂ ಕಾರ್ಖಾನೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

    ನಿಂಗನಗೌಡ ಬಿರಾದಾರ ನಿರೂಪಿಸಿದರು. ತಿಪ್ಪಣ್ಣ ತಳಕೇರಿ ಸ್ವಾಗತಿಸಿ, ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts