More

    ಸರಳವಾಗಿ ಬಾಯ್ಲರ್ ಪ್ರದೀಪನ

    ಅಥಣಿ: ಇಲ್ಲಿಯ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಪ್ರಸಕ್ತ ಹಂಗಾಮಿನ 19ನೇ ಬಾಯ್ಲರ್ ಪ್ರದೀಪನ ಕಾರ್ಯಕ್ರಮ ಗುರುವಾರ ಸರಳವಾಗಿ ಜರುಗಿತು.

    ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ನಿಧನದ ಹಿನ್ನೆಲೆಯಲ್ಲಿ ಕೇವಲ ಬಾಯ್ಲರ್‌ನ ಪ್ರದೀಪನವಷ್ಟನ್ನೆ ಮಾಡಲಾಯಿತು. ಸಾನ್ನಿದ್ಯ ವಹಿಸಿದ್ದ ಹಲ್ಯಾಳದ ಅಭಿನವ ಗುರುಸಿದ್ದ ಸ್ವಾಮೀಜಿ, ಅಥಣಿ ಶೆಟ್ಟರ್‌ಮಠದ ಮರುಳಸಿದ್ದ ಸ್ವಾಮೀಜಿ, ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ ಬಾಯ್ಲರ್ ಪ್ರದೀಪನ ಮಾಡಿದರು. ಬಳಿಕ ಅಗಲಿದ ಸುರೇಶ ಅಂಗಡಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

    ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ ಮಾತನಾಡಿ, ಸುರೇಶ ಅಂಗಡಿ ಅವರು ಸರಳ, ಸಜ್ಜನ ರಾಜಕಾರಣಿ. ಕೇಂದ್ರ ಸಚಿವರಾಗುವ ಮೂಲಕ ಜಿಲ್ಲೆಗೆ ಹೆಗ್ಗಳಿಕೆ ತಂದರು. ಅವರ ಅಕಾಲಿಕ ನಿಧನ ನಮಗೆ ಆಘಾತವನ್ನುಂಟು ಮಾಡಿದೆ. ಈ ಭಾಗದ ಬಹುಬೇಡಿಕೆಯಾಗಿದ್ದ ಶೇಡಬಾಳ-ವಿಜಯಪುರ ರೈಲ್ವೆ ಮಾರ್ಗ ಸೇರಿ ಹತ್ತು, ಹಲವು ಯೋಜನೆಗಳನ್ನ ರೂಪಿಸಿದ್ದಾರೆ. ದೂರದೃಷ್ಟಿಯುಳ್ಳ ನಾಯಕನನ್ನು ಕಳೆದುಕೊಂಡಿದ್ದರಿಂದ ಜಿಲ್ಲೆಗೆ ತುಂಬಲಾರದ ನಷ್ಟವಾಗಿದೆ ಎಂದರು.

    ಕಾರ್ಖಾನೆ ನಿರ್ದೇಶಕ ಜಿ.ಎಂ. ತೆವರಮನಿ, ಜಿ.ಎಂ. ಜತ್ತಿ, ಎಸ್.ಡಿ. ನಂದೇಶ್ವರ, ಸಿ.ಎಚ್. ಪಾಟೀಲ, ಎ.ಎಂ. ಕೊಬ್ರಿ, ವಿಶ್ವನಾಥ ಪಾಟೀಲ್, ರಮೇಶ ಪಟ್ಟಣ, ಕಾರ್ಖಾನೆ ಅಧೀಕ್ಷಕ ಸುರೇಶ ಠಕ್ಕಣವರ, ಅಭಿಯಂತರ ರವಿ ಕುಂಬಾರ, ವಿನಾಯಕ ಮನಗೂಳಿ ಹಾಗೂ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಜಿ.ಎಂ. ಪಾಟೀಲ ಹಾಗೂ ಆಡಳಿತ ಮಂಡಳಿ ಸದಸ್ಯರು, ಕಾರ್ಮಿಕರು, ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts