More

  ರಾಯರ ಬೆಳ್ಳಿ ಬೃಂದಾವನದ ಮೆರವಣಿಗೆ

  ಕವಿತಾಳ: ಪಟ್ಟಣದ ಕನ್ಯಕಾ ಪರಮೇಶ್ವರಿ ದೇವಿ ದೇವಸ್ಥಾನದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಬೆಳ್ಳಿ ಬೃಂದಾವನ ಪ್ರತಿಷ್ಠಾಪನೆ ಕಾರ್ಯಕ್ರಮ ಭಾನುವಾರ ನಡೆಯಿತು.

  ಲಕ್ಷ್ಮೀ ದೇವಸ್ಥಾನದಿಂದ ಕನ್ಯಕಾ ಪರಮೇಶ್ವರಿ ದೇವಸ್ಥಾನದವರೆಗೆ ಭಜನೆ ಮೂಲಕ ಬೃಂದಾವನದ ಮೆರವಣಿಗೆ ನಡೆಸಲಾಯಿತು. ಪ್ರಧಾನ ಅರ್ಚಕ ಜಯಚಾರ್ಯ ಆಚಾರ್ಯ ಪೂಜೆ ಮಾಡಿದರು. ಆರ್ಯವೈಶ್ಯ ಸಮಾಜದ ಸ್ಥಳೀಯ ಘಟಕದ ಅಧ್ಯಕ್ಷ ಉದಯಕುಮಾರ ಇಲ್ಲೂರು ಮಾತನಾಡಿ, ಭಕ್ತರ ಬಹುದಿನದ ಬೇಡಿಕೆಯಂತೆ 2 ಕಿಲೋ ಬೆಳ್ಳಿಯ ರಾಘವೇಂದ್ರ ಸ್ವಾಮಿಗಳ ಬೃಂದಾವನ ಮತ್ತು 1 ಕೆಜಿ ಬೆಳ್ಳಿಯ ಪಾದುಕೆಗಳನ್ನು ನಿರ್ಮಿಸಲಾಗಿದೆ. ಭಕ್ತರು ಪೂಜೆಗಾಗಿ ಬೃಂದಾವನವನ್ನು ಮನೆಗೆ ತೆಗೆದುಕೊಂಡು ಹೋಗಬಹುದು. ಆ ಬಳಿಕ ಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ತಂದು ಇರಿಸಬೇಕೆಂದು ಉದಯಕುಮಾರ ಇಲ್ಲೂರು ತಿಳಿಸಿದರು.

  ರಾಜ್ಯೋತ್ಸವ ರಸಪ್ರಶ್ನೆ - 24

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts