More

    ಸಿಕ್ಕಿ ರೆಡ್ಡಿ-ಕಿರಣ್ 2ನೇ ಕೋವಿಡ್-19 ವರದಿ ನೆಗೆಟಿವ್

    ನವದೆಹಲಿ: ಷಟ್ಲರ್ ಎನ್.ಸಿಕ್ಕಿ ರೆಡ್ಡಿ ಹಾಗೂ ಫಿಸಿಯೋಥೆರಪಿಸ್ಟ್ ಕಿರಣ್.ಸಿ ಅವರ ಎರಡನೇ ಕೋವಿಡ್-19 ವರದಿಯಲ್ಲಿ ನೆಗೆಟಿವ್ ವರದಿ ಬಂದಿದೆ. ಇದರೊಂದಿಗೆ ಹೈದರಾಬಾದ್‌ನಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ಬ್ಯಾಡ್ಮಿಂಟನ್ ತರಬೇತಿ ಶಿಬಿರಕ್ಕಿದ್ದ ಆತಂಕ ದೂರವಾಗಿದ್ದು, ಸೋಮವಾರದಿಂದ ಶಿಬಿರ ಪುನರಾರಂಭಗೊಳ್ಳಲಿದೆ. 26 ವರ್ಷದ ಸಿಕ್ಕಿ ರೆಡ್ಡಿ ಹಾಗೂ ಕಿರಣ್ ಅವರಿಗೆ ಗುರುವಾರ ನಡೆಸಿದ ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿತ್ತು. ಇದರಿಂದಾಗಿ ಗೋಪಿಚಂದ್ ಅಕಾಡೆಮಿಯಲ್ಲಿ ನಡೆಯುತ್ತಿದ್ದ ತರಬೇತಿ ಶಿಬಿರವನ್ನು ಸ್ಥಗಿತಗೊಳಿಸಿ, ಸ್ಯಾನಿಟೈಸ್ ಮಾಡಲಾಗಿತ್ತು. ಸಿಕ್ಕಿ ಹಾಗೂ ಕಿರಣ್ ಶುಕ್ರವಾರ ಎರಡನೇ ಬಾರಿಗೆ ಕೋವಿಡ್-19ರ ಪರೀಕ್ಷೆಗೆ ಒಳಾಗಿದ್ದರು. ಇದೀಗ ಇಬ್ಬರ ವರದಿಯೂ ನೆಗೆಟಿವ್ ಬಂದಿದೆ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್) ಮೂಲಗಳು ತಿಳಿಸಿವೆ. ‘ಗೋಪಿಚಂದ್ ಅಕಾಡೆಮಿಯಲ್ಲಿ ನಡೆಯುತ್ತಿದ್ದ ತರಬೇತಿ ಶಿಬಿರದ ವೇಳೆ ನಡೆದ ಕೋವಿಡ್-19 ಪರೀಕ್ಷೆಯಲ್ಲಿ ಷಟ್ಲರ್ ಸಿಕ್ಕಿ ರೆಡ್ಡಿ ಹಾಗೂ ಫಿಸಿಯೋ ಕಿರಣ್ ಸಿ ಅವರ ವರದಿಯಲ್ಲಿ ಪಾಸಿಟಿವ್ ಕಾಣಿಸಿಕೊಂಡಿತ್ತು. ಶುಕ್ರವಾರ ನಡೆದ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ ಎಂದು ಸಾಯ್ ಪ್ರಕಟಣೆಯಲ್ಲಿ ತಿಳಿಸಿದೆ.

    ಕೋವಿಡ್-19 ಪಾಸಿಟಿವ್ ಬಂದಿರುವ ವಿಷಯ ಕೇಳಿ, ನನಗೆ ಅಚ್ಚರಿಯಾಯಿತು. ಕಳೆದ 48 ಗಂಟೆಗಳ ಕಾಲ ಸಾಕಷ್ಟು ತ್ರಾಸವಾಯಿತು. ಈ ವೇಳೆಗೆ ನನಗೆ ಏನು ತೋಚದಂತಾಯಿತು. ಇದರಿಂದಾಗಿ ಶುಕ್ರವಾರವೇ 2ನೇ ಬಾರಿಗೆ ಪರೀಕ್ಷೆಗೆ ಒಳಗಾದೆ. – ಸಿಕ್ಕಿ ರೆಡ್ಡಿ, ಷಟ್ಲರ್

    ಭಾರತೀಯ ಈಜುಪಟುಗಳಿಗೆ ದುಬೈನಲ್ಲಿ 2 ತಿಂಗಳು ತರಬೇತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts