More

    ಸಿಗಂದೂರು ವಿವಾದ: ಚಂಡಿಕಾ ಹೋಮಕ್ಕೆ ಅವಕಾಶ ನೀಡದ ಕಾರಣ ಮೌನವ್ರತ ಕುಳಿತ ಪ್ರಧಾನ ಅರ್ಚಕ ಕುಟುಂಬ

    ಸಿಗಂದೂರು: ಶ್ರೀಕ್ಷೇತ್ರ ಸಿಗಂದೂರಿನಲ್ಲಿ ಆದಾಯಕ್ಕೆ ಸಂಬಂಧಿಸಿ ಆಡಳಿತ ಮಂಡಳಿಯೊಳಗೆ ವಿವಾದ ಏರ್ಪಟ್ಟಿದೆ. ಆಡಳಿತ ಮಂಡಳಿ ಧರ್ಮದರ್ಶಿ ಮತ್ತು ಪ್ರಧಾನ ಅರ್ಚಕರ ನಡುವಿನ ಶೀತಲ ಸಮರ ಮುಂದುವರಿದಿದ್ದು, ಇದೀಗ ನವರಾತ್ರಿ ಸಂದರ್ಭದ ಚಂಡಿಕಾ ಹೋಮ ಮಾಡುವುದಕ್ಕೆ ಅವಕಾಶ ನೀಡಿಲ್ಲ ಎಂದು ಪ್ರಧಾನ ಅರ್ಚಕರು ಕುಟುಂಬ ಸಮೇತರಾಗಿ ಸಿಗಂದೂರು ಚೌಡೇಶ್ವರಿ ದೇವಿಯ ಎದುರು ಮೌನ ವ್ರತ ಕುಳಿತಿದ್ದಾರೆ.

    ನಾಳೆಯಿಂದ ನವರಾತ್ರಿ ಆಚರಣೆ ಆರಂಭವಾಗುತ್ತಿದ್ದು, ಚೌಡೇಶ್ವರಿ ದೇವಿಯ ಕ್ಷೇತ್ರದಲ್ಲಿ ವಿವಾದದ ಕಾವು ಹೆಚ್ಚಾಗಿದೆ. ನವರಾತ್ರಿ ಆರಂಭದ ಮುನ್ನಾದಿನವಾದ ಇಂದು ಚಂಡಿಕಾ ಹೋಮ ಮಾಡುವುದಕ್ಕೆ ಸಿದ್ಧತೆ ನಡೆದಿತ್ತು. ನಿನ್ನೆ ಚಂಡಿಕಾ ಹೋಮದ ಸ್ಥಳಕ್ಕೆ ಪ್ರಧಾನ ಅರ್ಚಕರು ಹೋದಾಗ, ಇಲ್ಲಿ ಚಂಡಿಕಾ ಹೋಮ ಮಾಡುವಂತಿಲ್ಲ ಎಂದು ಧರ್ಮದರ್ಶಿಗಳು ಸೂಚಿಸಿದ್ದರಿಂದ ವಿವಾದ ಧಾರ್ಮಿಕ ಕಾರ್ಯಗಳ ಮೇಲೂ ಪರಿಣಾಮ ಬೀರುತ್ತಿರುವುದು ಕಂಡುಬಂದಿದೆ.

    ಇದನ್ನೂ ಓದಿ: ಪತ್ನಿಯ ತಲೆ ಕಡಿದು, ಟೂ ವೀಲ್ಹರ್​ನಲ್ಲಿಟ್ಟು 5 ಕಿ.ಮೀ. ದೂರ ಕೊಂಡೊಯ್ದು ಆತ ಮಾಡಿದ್ದೇನು?!

    ಈ ನಿಟ್ಟಿನಲ್ಲಿ ಪ್ರಧಾನ ಅರ್ಚಕರಾದ ಶೇಷಗಿರಿ ಭಟ್ ಅವರು ವಿಡಿಯೋ ಸಂದೇಶ ಬಿಡುಗಡೆ ಮಾಡಿದ್ದು, ಇಂದು ತಾವು ಮತ್ತು ಕುಟುಂಬದವರು ದೇವಿಯ ಸನ್ನಿಧಿಯಲ್ಲಿ ಮೌನವ್ರತ ಮಾಡುವುದಾಗಿ ಹೇಳಿದ್ದಾರೆ. ಅವರ ಹೇಳಿಕೆಯ ಪೂರ್ಣ ಪಾಠ ಕೆಳಗಿನ ವಿಡಿಯೋದಲ್ಲಿದೆ.

    ಸಿಗಂದೂರು ಕ್ಷೇತ್ರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ

    ಶ್ರೀಕ್ಷೇತ್ರ ಸಿಗಂದೂರು ಆಂತರಿಕ ಸಂಘರ್ಷ ಬಗೆಹರಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts