More

    ಸಿಗಂದೂರು ಕ್ಷೇತ್ರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ

    ಸಾಗರ: ಕೆಲವರು ದುರುದ್ದೇಶದಿಂದ ಶ್ರೀಕ್ಷೇತ್ರ ಸಿಗಂದೂರು ಚೌಡೇಶ್ವರಿ ಕ್ಷೇತ್ರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡುತ್ತಿದ್ದು ಇದನ್ನು ಗ್ರಾಮಸ್ಥರು ಖಂಡಿಸುವುದಾಗಿ ಮುಖಂಡ ರವಿ ಹೇಳಿದರು.

    ಉಪವಿಭಾಗಾಧಿಕಾರಿ ಕಚೇರಿ ಎದುರು ಸೋಮವಾರ ಕರೂರು ಹೋಬಳಿ ಗ್ರಾಮಸ್ಥರು ಶ್ರೀ ಕ್ಷೇತ್ರ ಸಿಗಂದೂರು ಹಾಗೂ ಧರ್ಮದರ್ಶಿ ಡಾ. ರಾಮಪ್ಪ ಅವರ ಮೇಲೆ ಸುಳ್ಳು ಆರೋಪ ಹೊರಿಸುತ್ತಿರುವುದಕ್ಕೆ ಕಿವಿಗೊಡದಂತೆ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

    ಸಿಗಂದೂರು ದೇವಸ್ಥಾನಕ್ಕೆ ರಾಜ್ಯ ಮತ್ತು ಹೊರರಾಜ್ಯಗಳಿಂದ ಭಕ್ತರು ಬರುತ್ತಿದ್ದಾರೆ. ಇದು ನಾಡಿನ ಶ್ರದ್ಧಾಭಕ್ತಿಯ ಕೇಂದ್ರವಾಗಿ ಹೊರಹೊಮ್ಮಿದೆ. ಇದನ್ನು ಸಹಿಸದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ದೇವಸ್ಥಾನದ ವರ್ಚಸ್ಸಿಗೆ ಕಳಂಕ ತರುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ದೂರಿದರು.

    ದೇವಸ್ಥಾನದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಹಾಲಿ ದೇವಸ್ಥಾನದ ಧರ್ಮದರ್ಶಿ ಡಾ. ರಾಮಪ್ಪ ಅವರು ಎಲ್ಲ ಜಾತಿ ಜನಾಂಗದವರನ್ನು ದೇವಸ್ಥಾನ ನಿರ್ವಹಣೆಯ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಕೆಲವರು ದೇವಸ್ಥಾನದಲ್ಲಿ ಅಹಿತಕರ ಘಟನೆ ನಡೆದಿದೆ ಎಂದು ಸುಳ್ಳುಸುದ್ದಿ ಹಬ್ಬಿಸುತ್ತಿದ್ದಾರೆ. ಇದನ್ನು ಕರೂರು ಹೋಬಳಿ ನಾಗರೀಕರು ಖಂಡಿಸುತ್ತೇವೆ. ದೇವಸ್ಥಾನದ ಪ್ರಧಾನ ಅರ್ಚಕ ಶೇಷಗಿರಿ ಭಟ್ ಅವರ ನಡೆನುಡಿಗಳನ್ನು ತಿದ್ದಿಕೊಳ್ಳುವಂತೆ ಟ್ರಸ್ಟ್ ಸೂಚಿಸಿದ್ದೇ ಅಪರಾಧ ಎನ್ನುವಂತೆ ಕೆಲವರು ಧರ್ಮದರ್ಶಿಗಳು ಹಾಗೂ ದೇವಸ್ಥಾನದ ವಿರá-ದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ. ಉಪವಿಭಾಗಾಧಿಕಾರಿಗಳು ಇದ್ಯಾವುದಕ್ಕೂ ಕಿವಿಗೊಡಬಾರದು. ದೇವಸ್ಥಾನದ ವಿರá-ದ್ಧ ನಡೆಯುತ್ತಿರುವ ಪೂರ್ವನಿಯೋಜಿತ ಶಕ್ತಿಗಳ ಕುತಂತ್ರಕ್ಕೆ ಮಣಿಯಬಾರದು ಎಂದು ಒತ್ತಾಯಿಸಿದರು.

    ಗ್ರಾಮಸ್ಥ ವಿಜಯಕುಮಾರ್ ಹೆರಬೆಟ್ಟು ಮಾತನಾಡಿ, ಸಿಗಂದೂರು ದೇವಸ್ಥಾನಕ್ಕೆ 300 ವರ್ಷಗಳ ಇತಿಹಾಸವಿದೆ. ಇತ್ತೀಚೆಗೆ ದೇವಸ್ಥಾನ ಅಭಿವೃದ್ಧಿ ಹೊಂದುತ್ತಿರುವುದನ್ನು ಸಹಿಸಲಾಗದೆ ಕೆಲ ಕಿಡಿಗೇಡಿಗಳು ಅನಗತ್ಯ ವಿವಾದ ಸೃಷ್ಟಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಸಿಗಂದೂರು ಕ್ಷೇತ್ರವನ್ನು ಡಾ. ರಾಮಪ್ಪ ಅವರ ಕುಟುಂಬದವರು ವಂಶಪಾರಂಪರ್ಯವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ದೇವಸ್ಥಾನ ಅಭಿವೃದ್ಧಿ ಕೆಲಸ ಸಹ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಕೆಲವರು ದೇವಸ್ಥಾನಕ್ಕೆ ಹಾಗೂ ಧರ್ಮರ್ದಗೆ ಅನಗತ್ಯ ಸಮಸ್ಯೆ ಉಂಟು ಮಾಡುವ ಪ್ರಯತ್ನ ನಡೆಸುತ್ತಿರುವುದು ಖಂಡನೀಯ ಎಂದರು.

    ಗ್ರಾಮಸ್ಥರಾದ ಕೃಷ್ಣಪ್ಪ ತೇಕಲೆ, ಮಂಜುನಾಥ್, ಮಂಜು ಬೇಸೂರು, ಸತೀಶ್, ಲೋಕೇಶ್, ಅಣ್ಣಪ್ಪ ತುಮರಿ, ಮಂಜುಳಾ ಕರೂರು, ಆನಂದ್, ಮುಕುಂದ, ತಿಮ್ಮಪ್ಪ ಇತರರು ನೇತೃತ್ವ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts