More

    ಸಿದ್ದಿವಿನಾಯಕ ದೇಗುಲ ನೆಲಸಮ: ತುಮಕೂರು ವಾರುಕಟ್ಟೆ ಆವರಣದಲ್ಲಿ ಪಾಲಿಕೆ ವಿರುದ್ಧ ಜನಾಕ್ರೋಶ

    ತುಮಕೂರು  : ನಗರದ ಬಾಳನಕಟ್ಟೆಯ ಸಿದ್ದಿವಿನಾಯಕ ವಾರುಕಟ್ಟೆ ಆವರಣದಲ್ಲಿರುವ ಸಿದ್ದಿವಿನಾಯಕ ದೇವಾಲಯವನ್ನು ಶನಿವಾರ ರಾತ್ರೋರಾತ್ರಿ ನೆಲಸಮಗೊಳಿಸಲಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
    ಮಾರುಕಟ್ಟೆ ಸ್ಥಳಾಂತರದ ನಂತರವೂ ದೇವಾಲಯದಲ್ಲಿ ನಿತ್ಯ ಪೂಜೆ ನಡೆಸಲಾಗುತ್ತಿತ್ತು. ಪಾಲಿಕೆ ಅಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡದೆ ರಾತ್ರಿ ನೆಲಸಮ ಮಾಡಿದ್ದಾರೆ, ಸಂಪ್ರದಾಯ ಬದ್ಧವಾಗಿ ದೇವರನ್ನು ಸ್ಥಳಾಂತರ ಮಾಡಲು ಅವಕಾಶವಿದ್ದರೂ ಅಧಿಕಾರಿಗಳು ಯಾರೊದೊ ಕುಮ್ಮಕ್ಕಿನಿಂದ ಅಚಾತುರ್ಯ ಮಾಡಿದ್ದಾರೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ದೂರಿದರು.

    ಮಹಾನಗರ ಪಾಲಿಕೆ ಆಯುಕ್ತರು ಯಾವುದೇ ಸಂಪ್ರದಾಯ ಪಾಲಿಸದೆ ಅರ್ಚಕರಿಗೂ ವಾಹಿತಿ ನೀಡದೆ ಏಕಾಏಕಿ ನೆಲಸಮ ಮಾಡಿಸಿದ್ದಾರೆ, ದೇವಾಲಯ ಇರುವ ಜಾಗ ಮಹಾನಗರ ಪಾಲಿಕೆ ಆಸ್ತಿಯೇ ಆಗಿದ್ದರೂ ಏಕಾಏಕಿ ದೇವಾಲಯ ಕೆಡವಿರುವ ಬಗ್ಗೆ ನಮ್ಮ ವಿರೋಧವಿದೆ, ಜನರ ಭಾವನೆಗಳಿಗೆ ದಕ್ಕೆಯಾಗದಂತೆ ನಡೆದುಕೊಳ್ಳಬೇಕಿತ್ತು ಎಂದರು.

    ಪಾಲಿಕೆ ಆಯುಕ್ತ ರೇಣುಕಾ ಅವರಿಗೆ ಖುದ್ದು ನಾನೇ ದೂರವಾಣಿಕರೆ ವಾಡಿ ನಾನು ಸ್ಥಳಕ್ಕೆ ಬರುತ್ತೇನೆ, ಆ ನಂತರ ಕೆಲಸ ಆರಂಭಿಸುವಂತೆ ಹೇಳಿದರೂ ಕೇಳದೆ ನಾನು ಬರುವಷ್ಟರಲ್ಲಿ ದೇವಾಲಯ ಒಡೆದು ಅಲ್ಲಿಂದು ತೆರೆಳಿದ್ದರು. ಸ್ಥಳಕ್ಕೆ ಬಂದು ನೋಡಿ, ಈ ಬಗ್ಗೆ ಚರ್ಚಿಸಲು ಜಿಲ್ಲಾಧಿಕಾರಿಗೆ ದೂರವಾಣಿಕರೆ ವಾಡಿದರೂ ಸ್ವೀಕರಿಸಲಿಲ್ಲ, ಈ ಕುರಿತು ಜಿಲ್ಲಾ ಸಚಿವರ ಜತೆ ಮಾತನಾಡಿದ್ದೇನೆ ಎಂದರು. ರಾತ್ರಿ ದೇವಾಲಯ ಒಡೆಯುವ ಬದಲು ಹಗಲಿನಲ್ಲಿ ಸಂಪ್ರದಾಯದ ಪ್ರಕಾರ ತೆರವು ಕಾರ್ಯಾಚರಣೆ ನಡೆಸಬಹುದಿತ್ತು ಎಂದು ಸ್ಥಳದಲ್ಲಿದ್ದ ವಿಎಚ್‌ಪಿ ಮುಖಂಡ ಜಿ.ಕೆ.ಶ್ರೀನಿವಾಸ್ ಹರಿಹಾಯ್ದರು.

     

    ಕಾನೂನು ಪ್ರಕಾರ ಕಾರ್ಯಾಚರಣೆ
    ಕಾನೂನು ಪ್ರಕಾರವೇ ದೇವಾಲಯ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಅರ್ಚಕರನ್ನು ಕರೆಸಿ ಪೂಜೆ ವಾಡಿಸಿದ ನಂತರ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಸ್ಪಷ್ಟಪಡಿಸಿದ್ದಾರೆ. ಸುವಾರು 20 ವರ್ಷಗಳಿಂದ ಈ ಜಾಗದ ವಿವಾದ ನ್ಯಾಯಲಯದಲ್ಲಿತ್ತು, ನಂತರ ನ್ಯಾಯಾಲಯದಲ್ಲಿ ಎಪಿಎಂಸಿ ಬದಲು ಈ ಜಾಗ ಮಹಾನಗರ ಪಾಲಿಕೆಗೆ ಸೇರತಕ್ಕದ್ದು ಎಂದು ಆದೇಶವಾದ ಬಳಿಕ ಈ ಜಾಗ ನಮ್ಮ ಸುಪರ್ದಿಗೆ ಬಂದಿದೆ ಎಂದರು. ಸ್ಮಾರ್ಟ್‌ಸಿಟಿ ಅಧಿಕಾರಿಗಳು, ತಹಸೀಲ್ದಾರರ ಸಮ್ಮುಖದಲ್ಲೇ ಕಾರ್ಯಾಚರಣೆ ನಡೆದಿದೆ, ದೇವಾಲಯ ತೆರವುಗೊಳಿಸಿದ್ದು, ದೇವಲ ವಿಗ್ರಹವನ್ನು ಬೇರೆಡೆ ಸ್ಥಳಾಂತರಗೊಳಿಸುವ ಕಾರ್ಯ ಬಾಕಿ ಇದೆ. ಆ ಕೆಲಸವನ್ನು ಸಂಪ್ರದಾಯದ ಪ್ರಕಾರವೇ ವಾಡಲಾಗುತ್ತದೆ ಎಂದರು.

    ದೇವಾಲ ಯವನ್ನು ಏಕಾಏಕಿ ತೆರವುಗೊಳಿ ಸಿರುವುದು ಜನರ ಭಾವನೆಗೆ ದಕ್ಕೆಯಾಗಿದೆ, ತೆರವುಗೊಳಿಸುವಾಗ ಅನುಸರಿಸಬೇಕಾದ ಕ್ರಮ ಗಾಳಿಗೆ ತೂರಲಾಗಿದೆ, ಸ್ಥಳೀಯರಿಗೂ ವಾಹಿತಿ ನೀಡದೆ ಏಕಪಕ್ಷನೀಯವಾಗಿ ನಡೆದುಕೊಂಡಿರುವುದು ಖಂಡನೀಯ. ಅಭಿವೃದ್ಧಿಯ ಹೆಸರನ್ನು ಸ್ಥಳೀಯರ ಭಾವನೆಗೆ ದಕ್ಕೆ ತರುವ ಅಗತ್ಯವಿಲ್ಲ.
    ಡಾ.ರಫೀಕ್ ಅಹ್ಮದ್ ಮಾಜಿ ಶಾಸಕ

     

    ಏಕಾಏಕಿ ದೇವಾಲಯ ತೆರವುಗೊಳಿಸಿಲ್ಲ, ಸ್ಥಳಕ್ಕೆ ತಹಸೀಲ್ದಾರ್ ಕರೆಸಿ ಮಹಜರ್ ವಾಡಿಸಿ, ಅರ್ಚಕರನ್ನು ಕರೆಸಿ ಸಂಪ್ರದಾಯದ ಪ್ರಕಾರವೇ ಕೆಲಸ ಆರಂಭಿಸಿದ್ದೇವೆ. ಸರ್ಕಾರದ ಜಾಗ ತೆರವುಗೊಳಿಸುವಂತೆ ಸುಪ್ರೀಂಕೋರ್ಟ್ ಸಹ ಹೇಳಿದೆ. ಕಾನೂನು ಬಾಹಿರವಾಗಿ ಯಾವುದೇ ಕಾರ್ಯ ವಾಡಿಲ್ಲ.
    ರೇಣುಕಾ ಪಾಲಿಕೆ ಆಯುಕ್ತೆ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts