More

    ಹೃದಯ ಶ್ರೀಮಂತಿಕೆ ಅಳವಡಿಸಿಕೊಳ್ಳಿ: ಸಿದ್ದೇಶ್ವರ ಶ್ರೀ

    ವಿಜಯಪುರ : ಜೀವನದಲ್ಲಿ ಸತ್ಯ, ಶಕ್ತಿ , ಆನಂದಗಳ ರಹಸ್ಯ ಅಧ್ಯಾತ್ಮ ಜ್ಞಾನದಿಂದಲೇ ಅರಿವಾಗುವುದು. ಅಧ್ಯಾತ್ಮದ ಜ್ಞಾನ ತಿಳಿದರೆ ನಿಜವಾದ ಭೌತಿಕ ವಿಷಯಗಳಿಂದ ಸುಖ-ಶಾಂತಿ ಸಿಗುವುದೆಂದು ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಹೇಳಿದರು.

    ತಾಲೂಕಿನ ನಾಗಠಾಣ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪರಮಾನಂದ ಪತ್ತಿನ ಸಹಕಾರ ಸಂಘದ 5ನೇ ವಾರ್ಷಿಕೋತ್ಸವ ಹಾಗೂ ಸಾಧಕರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

    ಜಗತ್ತಿನ ಎಲ್ಲ ಜೀವಿಗಳಲ್ಲಿ ಶ್ರೇಷ್ಠವೆನಿಸಿದ ಮಾನವನ ಜನ್ಮವು ಕೇವಲ ವ್ಯಾಪಾರ, ವ್ಯವಹಾರ, ನೌಕರಿ, ಸಂಪಾದನೆಗಾಗಿ ಅಲ್ಲ. ಬದಲಾಗಿ ಹೃದಯ ಶ್ರೀಮಂತಿಕೆಯನ್ನು ಅಳವಡಿಸಿಕೊಳ್ಳಬೇಕು. ಆ ಮೂಲಕ ಪರಮಾತ್ಮನ ಮನೆಯಿಂದ ಬಂದ ನಾವು ಆಧ್ಯಾತ್ಮಿಕ ಸಾಧನೆ ಮಾಡಿ ನಿರಾತಂಕವಾಗಿ ಪರಮಾತ್ಮನ ಮನೆಗೇ ಹಿಂದಿರುಗಬೇಕೆಂಬುದು ನಮ್ಮ ಸೃಷ್ಟಿಕರ್ತನ ಸಂಕಲ್ಪವಾಗಿದೆ ಎಂದರು.

    ಬಸವನ ಬಾಗೇವಾಡಿ ಶಾಸಕರಾದ ಶಿವಾನಂದ ಪಾಟೀಲ ಮಾತನಾಡಿ, ಜ್ಞಾನ, ಬುದ್ಧಿವಂತಿಕೆ ಬದುಕನ್ನು ಎತ್ತರಿಸಬಲ್ಲ ಸ್ತಂಭಗಳಾಗಿವೆ. ಆದರೆ, ಇವೆರಡಕ್ಕಿಂತಲೂ ಮುಖ್ಯವಾದದ್ದು ವಿವೇಕ. ಇದು ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಸರಿಯಾದ ದಾರಿಯಲ್ಲಿ ನಡೆಸಬಲ್ಲ ಶಕ್ತಿಯಾಗಿದೆ ಎಂದು ಹೇಳಿದರು.

    ಕಾತ್ರಾಳದ ಅಮೃತಾನಂದ ಸ್ವಾಮೀಜಿ, ನಾಗಠಾಣದ ಉದಯೆಶ್ವರ ಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಕಲ್ಲಯಾರೂಢ ಆಶ್ರಮದ ಅಧ್ಯಕ್ಷ ಪ್ರಜ್ಞಾನಂದ ಸ್ವಾಮೀಜಿ, ಡಾ ಶ್ರದ್ದಾನಂದ ಸ್ವಾಮೀಜಿ, ಹುಬ್ಬಳ್ಳಿಯ ಶಿವಶಂಕರ ಸ್ವಾಮೀಜಿ, ಈಶಪ್ರಸಾದ ಸ್ವಾಮೀಜಿ, ತ್ಯಾಗಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

    ಬ್ಯಾಂಕ್‌ನ ಅಧ್ಯಕ್ಷ ಪ್ರಭುಲಿಂಗ ಹಂಡಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ, ಚಿದಾನಂದ ನಿಂಬಾಳ, ಶಿವಪ್ಪ ಕುಂಬಾರ, ಸಿದ್ಧರಾಮ ಪೂಜಾರಿ, ಸುರೇಶಗೌಡ ಪಾಟೀಲ, ಮಾಮರೇಶ ಬೆನಕನಹಳ್ಳಿ, ಗಣಪತಿ ಧನವಡೆ, ಸುವರ್ಣ ಗಂಗನಳ್ಳಿ, ಕವಿತಾ ಕರಾಳೆ, ಮಲ್ಲಪ್ಪ ವಾಲೀಕಾರ, ಮಲಕಣ್ಣ ಹೊಸಮನಿ, ಹನುಮಂತ ಮಾದರ, ಪ್ರಕಾಶ ಹಂಡಿ, ಮಡಿವಾಳ ತಿಲ್ಲಿಹಾಳ, ಸೋಮನಾಥ ಹಂಡಿ, ವಿಶ್ವನಾಥ ಹಂಡಿ, ಶಂಕರ ಲೋಣಿ, ಚಂದ್ರಶೇಖರ ಹತ್ತರಕಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts