More

    ಸಿದ್ದರಾಮೇಶ್ವರರ ಕೊಡುಗೆ ಅನನ್ಯ

    ಬೆಳಗಾವಿ: ಶಿವಯೋಗಿ ಸಿದ್ದರಾಮೇಶ್ವರರು ಕೇವಲ ಶಿವಯೋಗಿ ಮಾತ್ರವಲ್ಲ, ಕಾಯಕ ಯೋಗಿಯಾಗಿ ಕಾಯಕದಿಂದ ಬಂದಿದ್ದನ್ನು ಸ್ವೀಕರಿಸಿ ಉಳಿದಿದ್ದನ್ನು ದಾಸೋಹ ಮಾಡುವಂತೆ ಕರೆ ಕೊಟ್ಟವರು. ಸಿದ್ದರಾಮೇಶ್ವರರು ಸಮಾಜದ ಒಳಿತಿಗೆ ನಿರಂತರ ಶ್ರಮಿಸಿದರು ಎಂದು ಸಾಹಿತಿ ಡಾ.ಸುಬ್ಬರಾವ್ ಎಂಟೆತ್ತಿನವರ ಹೇಳಿದರು. ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸಿದ್ದರಾಮೇಶ್ವರರು ಶರಣ ಸಂಸ್ಕೃತಿಯ ಪಂಚ ಹರಿಕಾರರೆಂದೇ ಹೆಸರಾದವರು. ಕಾಯಕಯೋಗಿ, ಶಿವಯೋಗಿ, ಕರ್ಮಯೋಗಿಯಾಗಿ ಸಮಾಜದಲ್ಲಿ ಪ್ರಸಿದ್ಧಿಯಾದವರು ಎಂದರು. ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಹೆಚ್ಚುವರಿ ಎಸ್ಪಿ ವೇಣುಗೋಪಾಲ್, ಜಿಪಂ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಮುಖಂಡರಾದ ಎಲ್.ಜಿ ಗಾಡಿವಡ್ಡರ, ಕೆ.ಎಸ್ ಮಮದಾಪುರ, ಪರಶುರಾಮ ಕಲಘಟಗಿ, ಆರ್.ಬಿ. ಬಂಡಿವಡ್ಡರ, ಗಂಗಾರಾಮ್, ಶಿವಾಜಿ ವಡ್ಡರ, ಚೌಡಪ್ಪ ವಡ್ಡರ, ಶಿವಾಜಿ ಹಿಂಡಲಗೇಕರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts