More

    ಮುಸ್ಲಿಮರ ಮೀಸಲಾತಿ ದ್ವೇಷ ರಾಜಕೀಯದ ದುರುದ್ದೇಶ ಹೊರತು, ಪ್ರಾಮಾಣಿಕತೆ ಇರಲಿಲ್ಲ: ಸಿದ್ದರಾಮಯ್ಯ

    ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಈ ಮಧ್ಯೆ ಪಕ್ಷಗಳ ನಾಯಕರು ಆರೋಪ ಪ್ರತ್ಯರೋಪಗಳಲ್ಲಿ ತೊಡಗಿದ್ದಾರೆ.

    ಇನ್ನು ಮುಸ್ಲಿಮರಿಗೆ EWS ಅಡಿ ನೀಡಿದ್ದ ಮೀಸಲಾತಿಯನ್ನು ಸುಪ್ರೀಂ ಕೋರ್ಟ್​ ರದ್ದುಪಡಿಸಿರುವ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಸರಣಿ ಟ್ವೀಟ್​ ಮಾಡುವ ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಇದನ್ನೂ ಓದಿ: ಹೋಟೆಲ್​ಗೆ ಪ್ರವೇಶ ನಿರಾಕರಣೆ; ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ ಉರ್ಫಿ

    ಸಹಜ ಸಾವಿಗೀಡಾಗುವುದು ಖಂಡಿತ

    ಮುಸ್ಲಿಂ ಮೀಸಲಾತಿ ರದ್ದತಿಗೆ ತಡೆಯಾಜ್ಞೆ ನೀಡಿರುವುದು ರಾಜ್ಯ ಬಿಜೆಪಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮಾಡಿರುವ ಕಪಾಳ‌ಮೋಕ್ಷವಾಗಿದೆ.ಈ ತಡೆಯಾಜ್ಞೆ ತಾತ್ಕಾಲಿಕವಾಗಿದ್ದರೂ ಇದೇ ಖಾಯಂ‌ ಆದೇಶ ಆಗುವುದು ಖಂಡಿತ ಎಂದು ಹೇಳಿದ್ದಾರೆ.

    ಭಾರತೀಯ ಜನತಾ ಪಕ್ಷ ಪ್ರಕಟಿಸಿರುವ‌ ಪರಿಷ್ಕೃತ ಮೀಸಲಾತಿ ನೀತಿಯಲ್ಲಿ ಮುಸ್ಲಿಂಮರ ವಿರುದ್ಧದ ದ್ವೇಷದ ರಾಜಕೀಯ ದುರುದ್ದೇಶ ಇತ್ತೇ ಹೊರತು, ಪ್ರಾಮಾಣಿಕತೆ ಇರಲಿಲ್ಲ. ಯಾವುದೇ ಸಮೀಕ್ಷೆ- ಅಂಕಿಅಂಶದ ಆಧಾರವಿಲ್ಲದ ಈ ಮೀಸಲಾತಿ ಸಹಜ ಸಾವಿಗೀಡಾಗುವುದು ಖಂಡಿತ.

    ಈಗಲೂ ಕಾಲ ಮಿಂಚಿಲ್ಲ. ರಾಜ್ಯ ಬಿಜೆಪಿ ಸರ್ಕಾರ ತಕ್ಷಣ ಮುಸ್ಲಿಂ ಮೀಸಲಾತಿ ರದ್ದತಿಯ ಆದೇಶವನ್ನು ಹಿಂದೆಗೆದುಕೊಂಡು ತನ್ನ ತಪ್ಪನ್ನು ಒಪ್ಪಿಕೊಳ್ಳಬೇಕು. ಮೀಸಲಾತಿಯನ್ನು ರಾಜಕೀಯದಾಟದ ದಾಳವನ್ನಾಗಿ ಮಾಡಬಾರದು ಎಂದು ಸರಣಿ ಟ್ವೀಟ್​ ಮಾಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts