More

    ಹುಡುಗಿಯ ಹುಚ್ಚಿನಲ್ಲಿ ಗೆಳೆಯನಿಗೇ ಚಾಕು ಇರಿದವನಿಗೆ 10 ವರ್ಷ ಜೈಲು

    ಕಾರವಾರ:ಯುವತಿಯ ಮೊಬೈಲ್ ನಂಬರ್ ಕೊಟ್ಟಿಲ್ಲ ಎಂದು ಯುವಕೊಬ್ಬನಿಗೆ ಚಾಕು ಇರಿದು ಕೊಲೆಗೆ ಯತ್ನಿಸಿದ ಯುವಕನಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 14 ಸಾವಿರ ರೂ. ದಂಡ ವಿಧಿಸಿ ಶಿರಸಿಯ 1 ನೇ ಅಧಿಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯವು ತೀರ್ಪು ನೀಡಿದೆ.
    ಸಿದ್ದಾಪುರದ ಅಕ್ಕುಂಜಿ ಹುರಳಿಕೊಪ್ಪ ನಿವಾಸಿ ಸುಮನ್ ಶಂಕ್ರಪ್ಪ ಗೌಡರ್ ಶಿಕ್ಷೆಗೊಳಗಾದ ಅಪರಾಧಿ. ದಂಡದ 14 ಸಾವಿರ ರೂ.ಗಳಲ್ಲಿ 10 ಸಾವಿರ ರೂ.ಗಳನ್ನು ಗಾಯಾಳು ಪವನ ನಾಯ್ಕನಿಗೆ ನೀಡುವಂತೆ ಶಿರಸಿಯ 1 ನೇ ಅಧಿಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶರಾದ ಕಿರಣ ಕಿಣಿ ಅವರು ಆದೇಶಿಸಿದ್ದಾರೆ.
    ಪವನ ನಾಯ್ಕ ಹಾಗೂ ಸುಮನ್ ಗೆಳೆಯರಾಗಿದ್ದರು. ಒಮ್ಮೆ ಪವನ್ ತಂಗಿಯನ್ನು ನೋಡಿದ ಸುಮನ್ ಆಕೆಯ ಮೇಲೆ ಮನಸ್ಸಾಗಿ, ಅವಳ ಮೊಬೈಲ್ ನಂಬರ್ ಕೊಡುವಂತೆ ಒತ್ತಾಯ ಮಾಡುತ್ತಿದ್ದ ಎನ್ನಲಾಗಿದೆ. ಆದರೆ, ಅಣ್ಣ ಜವಾಬ್ದಾರಿ ನಿರ್ವಹಿಸಿದ ಪವನ್‌ ಮೊಬೈಲ್ ನಂಬರ್ ಕೊಟ್ಟಿರಲಿಲ್ಲ. ಕಾರಣ ಪವನ್‌ನನ್ನು ಅವರಗುಪ್ಪ ಕಾಲೇಜ್ ಹಿಂಬದಿ ಕರೆಸಿಕೊಂಡ ಸುಮನ್ ಗೌಡರ್ ತನ್ನ ಇನ್ನಿಬ್ಬರು ಸ್ನೇಹಿತರ ಜತೆ ಸೇರಿ ಆತನ ಹೊಟ್ಟೆಗೆ ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ್ದ.
    ಸಿದ್ದಾಪುರ ಪೊಲೀಸ್ ಠಾಣೆಯ ಸಬ್‌ ಇನ್ಸ್ಪೆಕ್ಟರ್ ಮಂಜೇಶ್ವರ ಚಂದಾವರ ಅವರು ಪ್ರಕರಣ ದಾಖಲಿಸಿಕೊಂಡು ಸುಮನ್‌ನನ್ನು ಬಂಧಿಸಿ, ವಿಚಾರಣೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸಿದ್ದಾಪುರ ಹೆಡ್ ಕಾನ್ಸ್ಟೇಬಲ್ ಎ.ಎಚ್.ಸಯ್ಯದ್ ಅಮಯೋಚಿತ ದಾಖಲೆ ಒದಗಿಸಿದ್ದರು. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ ಎಂ.ಮಳಗೀಕರ್ ವಾದ ಮಂಡಿಸಿದ್ದರು.

    ಇದನ್ನೂ ಓದಿ: ಲಂಚ ಪಡೆಯುವಾಗ ಸಿಕ್ಕಿ ಬಿದ್ದ ಎಫ್‌ಡಿಸಿಗೆ ಜೈಲು ಶಿಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts