More

    ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸಿ

    ಸಿದ್ದಾಪುರ: ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಇತ್ತೀಚಿಗೆ ನಡೆದ ಪ್ರಾಥಮಿಕ ಶಾಲಾ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಸಮೀಪದ ಬೆನ್ನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರ ತಂಡ ತೃತೀಯ ಸ್ಥಾನ ಪಡೆದಿದೆ. ಗ್ರಾಮಸ್ಥರು ಸೋಮವಾರ ತಂಡವನ್ನು ಸನ್ಮಾನಿಸಿ, ಕಲಿಕಾ ಸಾಮಗ್ರಿ ವಿತರಿಸಿದರು.


    ಇದನ್ನೂ ಓದಿ: ಯೋಗ, ಕಬಡ್ಡಿ ಪಂದ್ಯಾವಳಿಗೆ ತಂಡ ಆಯ್ಕೆ


    ಗ್ರಾಪಂ ಅಧ್ಯಕ್ಷ ಶರಣಪ್ಪ ಸಾಹುಕಾರ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಭಾಗವಹಿಸಿರುವುದೇ ದೊಡ್ಡ ಸಾಧನೆ. ಮುಂದಿನ ದಿನಗಳಲ್ಲಿ ಶಾಲೆ ಮತ್ತು ಗ್ರಾಮದ ಕೀರ್ತಿ ಹೆಚ್ಚಿಸಲು ಕಾರ್ಯ ಪ್ರವೃತ್ತರಾಗಬೇಕು. ಶಿಕ್ಷಕರು ಪ್ರತಿಭೆಗಳನ್ನು ಗುರುತಿಸಿ, ಉನ್ನತ ಮಟ್ಟದ ಸಾಧನೆಗೆ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.


    ಗ್ರಾಪಂ ಸದಸ್ಯರಾದ ಶಿವಪುತ್ರಯ್ಯ ಸ್ವಾಮಿ, ಹಿರಿಯ ಮುಖಂಡರಾದ ರಾಮಣ್ಣ ಐದು ಗುಡ್ಡೆಪ್ಪ, ಯುವ ಮುಖಂಡರಾದ ಮಹೇಂದ್ರ ಸಾಹುಕಾರ, ರಮೇಶ್, ಮುದಿಯಪ್ಪ ನಾಯಕ, ಎಸ್‌ಡಿಎಂಸಿ ಅಧ್ಯಕ್ಷ ವೀರೇಶ ನಾಯಕ, ಸದಸ್ಯರಾದ ಬಸವರಾಜ ದರೋಜಿ, ಬಾಲೇಸಾಬ್, ಮಂಜುನಾಥ ಕಂಪ್ಲಿ, ಶಾಲೆಯ ಮುಖ್ಯ ಶಿಕ್ಷಕ ಪ್ರಕಾಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts