More

    ಆತ್ಮಾವಲೋಕನದ ಸಮಯ ಮುಗಿದಿದೆ- ಪರ್ಯಾಯ ಪಕ್ಷವಾಗಿ ಕಾಂಗ್ರೆಸ್ ಉಳಿದಿಲ್ಲ – ಕಪಿಲ್ ಸಿಬಲ್ ಅಭಿಮತ

    ನವದೆಹಲಿ: ಬಿಹಾರ ಚುನಾವಣೆ ಫಲಿತಾಂಶ ಬಂದ ನಂತರದಲ್ಲಿ ಕಾಂಗ್ರೆಸ್ ಪಕ್ಷದೊಳಗೆ ನಾಯಕತ್ವದ ವಿಚಾರದಲ್ಲಿ ಮತ್ತೊಂದು ಸುತ್ತಿನ ಅಸಮಾಧಾನ, ಭಿನ್ನಮತ ಭುಗಿಲೇಳುವ ಲಕ್ಷಣಗಳು ಗೋಚರಿಸಿವೆ. ಹಿರಿಯ ನಾಯಕ ಕಪಿಲ್ ಸಿಬಲ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಆತ್ಮಾವಲೋಕದ ಸಮಯ ಮುಕ್ತಾಯವಾಗಿದೆ. ಪರ್ಯಾಯ ಪಕ್ಷವನ್ನಾಗಿ ಜನ ಪರಿಗಣಿಸುವುದಕ್ಕೆ ತಕ್ಕ ಯೋಗ್ಯತೆಯನ್ನು ಕಾಂಗ್ರೆಸ್ ಉಳಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.

    ಪರಿಣಾಮಕಾರಿ ಪರ್ಯಾಯ ಆಡಳಿತ ನೀಡಬಲ್ಲ ಪಕ್ಷ ಕಾಂಗ್ರೆಸ್ ಎಂಬುದನ್ನು ಬಿಹಾರದ ಜನರಷ್ಟೇ ಅಲ್ಲ, ದೇಶದ ಜನರೂ ಒಪ್ಪಿಕೊಳ್ಳುತ್ತಿಲ್ಲ. ಎಲ್ಲೆಲ್ಲಿ ಉಪಚುನಾವಣೆಗಳು ನಡೆದಿವೆಯೋ ಅಲ್ಲೆಲ್ಲ ಕಾಂಗ್ರೆಸ್ ಸೋಲು ಅನುಭವಿಸಿದೆ. ಬಿಹಾರದ ಫಲಿತಾಂಶ ನೋಡಿ ಅಲ್ಲಿ ಪರ್ಯಾಯವಾಗಿ ಜನರಿಗೆ ಕಾಣಿಸಿದ್ದು ಆರ್​ಜೆಡಿಯೇ ಹೊರತು ಕಾಂಗ್ರೆಸ್ ಪಕ್ಷವಲ್ಲ. ಗುಜರಾತ್ ನೋಡಿ ಅಲ್ಲಿ ಉಪಚುನಾವಣೆಯಲ್ಲಿ ಗೆಲ್ಲಲಾಗಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ಒಂದೇ ಒಂದು ಸೀಟೂ ಸಿಗಲಿಲ್ಲ ಎಂದು ಖೇದ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ:  ನಿತೀಶ್​ ಕುಮಾರ್​ ಪದಗ್ರಹಣಕ್ಕೆ ಕ್ಷಣಗಣನೆ: ಈ ಬಾರಿ ಬಿಹಾರ ಸರ್ಕಾರದಲ್ಲಿರಲಿದೆ ಹೊಸ ಬದಲಾವಣೆ

    ಕಾಂಗ್ರೆಸ್ ಪಕ್ಷ ಆತ್ಮಾವಲೋಕ ಮಾಡಲಿದೆ ಎಂಬ ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸದಸ್ಯ ತಾರೀಕ್ ಅನ್ವರ್ ಅವರ ಸಲಹೆಯನ್ನು ಉಲ್ಲೇಖಿಸಿದ ಸಿಬಲ್​, ಕಳೆದ ಆರು ವರ್ಷಗಳಲ್ಲಿ ಕಾಂಗ್ರೆಸ್ ಆತ್ಮಾವಲೋಕ ಮಾಡಿಲ್ಲ ಎಂದಾದರೆ, ಈಗ ಆತ್ಮಾವಲೋಕನ ಮಾಡುವುದರಲ್ಲಿ ಯಾವ ಭರವಸೆಯನ್ನು ನಾವು ಇಟ್ಟುಕೊಳ್ಳಬಹುದು ಎಂದು ಸಿಬಲ್ ಪ್ರಶ್ನಿಸಿದ್ದಾರೆ. ಸಿಬಲ್ ಅವರು ಇಂಡಿಯನ್ ಎಕ್ಸ್​ ಪ್ರೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದರು. (ಏಜೆನ್ಸೀಸ್)

    ಜಮ್ಮು-ಕಾಶ್ಮೀರ ಡಿಡಿಸಿ ಚುನಾವಣೆ- ಗುಪ್ಕರ್ ಮೈತ್ರಿ ದೇಶ ವಿರೋಧಿ, ಕಾಂಗ್ರೆಸ್​ಗೆ “ರಾಷ್ಟ್ರೀಯತೆ”ಯ ಸವಾಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts