More

    ಸ್ಟಾರ್ ಷಟ್ಲರ್ ಪಿವಿ ಸಿಂಧು ಈಗ ಪೇಂಟರ್!

    ಹೈದರಾಬಾದ್: ಲಾಕ್‌ಡೌನ್ ಸಮಯದಲ್ಲಿ ಕ್ರೀಡಾ ಚಟುವಟಿಕೆಗಳೆಲ್ಲ ಸ್ತಬ್ಧಗೊಂಡ ಕಾರಣ ಕ್ರೀಡಾಪಟುಗಳೆಲ್ಲ ಮನೆಯಲ್ಲೇ ಬಂಧಿಯಾದರು. ಈ ವೇಳೆ ಕ್ರೀಡಾಪಟುಗಳು ಕ್ರೀಡೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ತಮ್ಮ ಇತರ ಪ್ರತಿಭೆಗಳನ್ನೂ ಅನಾವರಣಗೊಳಿಸುತ್ತಿದ್ದಾರೆ. ವಿಶ್ವ ಚಾಂಪಿಯನ್ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಕೂಡ ತಮ್ಮಲ್ಲಿನ ಇತರ ಪ್ರತಿಭೆಗಳನ್ನು ಪರಿಚಯಿಸಿದ್ದಾರೆ. ಅದರಲ್ಲಿ ಚಿತ್ರಕಲೆ ಪ್ರಮುಖವಾದುದು.

    ಟೇಬಲ್ ಟೆನಿಸ್ ಆಟಗಾರ ಮುಡಿತ್ ಡ್ಯಾನಿ ಜತೆಗಿನ ಚಾಟ್ ಶೋ ಒಂದರಲ್ಲಿ ಪಿವಿ ಸಿಂಧು ಲಾಕ್‌ಡೌನ್ ಸಮಯದ ತಮ್ಮ ದಿನಚರಿಗಳ ಬಗ್ಗೆ ವಿವರಿಸಿದ್ದು, ತಮ್ಮ ಕಲಾತ್ಮಕತೆಯನ್ನು ಪರಿಚಯಿಸಿದ್ದಾರೆ. ‘ಲಾಕ್‌ಡೌನ್ ಸಮಯದಲ್ಲಿ ನಾನು ಕೆಲ ಹೊಸ ವಿಷಯಗಳನ್ನು ಕಲಿತೆ. ಅದರಲ್ಲಿ ಪೇಂಟಿಂಗ್ ಕೂಡ ಒಂದು. ಈಗಿನ ದಿನಗಳಲ್ಲಿ ನಾನು ಹೆಚ್ಚಾಗಿ ಪೇಟಿಂಗ್‌ಗಳನ್ನು ಮಾಡುತ್ತಿರುತ್ತೇನೆ. ನಾನು ಅಡುಗೆಯನ್ನೂ ಮಾಡುತ್ತಿರುತ್ತೇನೆ. ಈ ಹಿಂದೆಯೂ ನನಗೆ ಇವುಗಳಲ್ಲಿ ಆಸಕ್ತಿ ಇತ್ತು. ಆದರೆ ಬ್ಯಾಡ್ಮಿಂಟನ್‌ನಿಂದ ಬಿಡುವು ಸಿಗುತ್ತಿರಲಿಲ್ಲ.  ಆದರೆ ಈಗ ಸೃಜನಾತ್ಮಕವಾದ ಹೊಸ ಹೊಸ ವಿಷಯಗಳನ್ನು ಕಲಿತುಕೊಳ್ಳಲು ಸಮಯ ಲಭಿಸಿದೆ’ ಎಂದು ಪಿವಿ ಸಿಂಧು ಹೇಳಿದ್ದಾರೆ.

    ಇದನ್ನೂ ಓದಿ: ಟ್ವಿಟರ್‌ನಲ್ಲಿ ಟ್ರೆಂಡಿಂಗ್‌ಗೆ ಬಂದ ಬಾಯ್ಕಾಟ್-ಚೈನೀಸ್ ಐಪಿಎಲ್!

    2016ರ ರಿಯೋ ಒಲಿಂಪಿಕ್ಸ್‌ನಲ್ಲಿ ರಜತ ಪದಕ ಜಯಿಸಿದ್ದ ಪಿವಿ ಸಿಂಧುಗೆ ಆ ಕ್ರೀಡಾಕೂಟದ ಬಳಿಕ ಹೈದರಾಬಾದ್‌ಗೆ ಮರಳಿದಾಗ ಅಭಿಮಾನಿಯೊಬ್ಬ ತನ್ನ ತಿಂಗಳ ವೇತನವನ್ನು ಬಹುಮಾನವಾಗಿ ನೀಡಲು ಬಂದಿದ್ದನಂತೆ. ‘ನನಗೆ ಅದೊಂದು ಹೃದಯಸ್ಪರ್ಶಿ ಕ್ಷಣವಾಗಿತ್ತು. ನನಗೆ ಈಗಲೂ ಆ ಕ್ಷಣ ನೆನಪಿದೆ. ಬಳಿಕ ನಾನು ಆತನಿಗೆ ಪತ್ರ ಬರೆದು ಧನ್ಯವಾದ ತಿಳಿಸಿದ್ದೆ ಮತ್ತು ಸ್ವಲ್ಪ ಹಣವನ್ನೂ ವಾಪಸ್ ಕಳುಹಿಸಿಕೊಟ್ಟಿದ್ದೆ’ ಎಂದು 25 ವರ್ಷದ ಸಿಂಧು ಹೇಳಿದ್ದಾರೆ.

    ಬಿಕಿನಿ ಚಿತ್ರಗಳಿಗೆ ಟೀಕೆ, ದಿಟ್ಟ ತಿರುಗೇಟು ನೀಡಿದ ಟೆನಿಸ್​ ತಾರೆ ನವೊಮಿ ಒಸಾಕಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts