More

    ಟ್ವಿಟರ್‌ನಲ್ಲಿ ಟ್ರೆಂಡಿಂಗ್‌ಗೆ ಬಂದ ಬಾಯ್ಕಾಟ್-ಚೈನೀಸ್ ಐಪಿಎಲ್!

    ಬೆಂಗಳೂರು: ಕರೊನಾ ಹಾವಳಿಯ ನಡುವೆಯೂ ಐಪಿಎಲ್ 13ನೇ ಆವೃತ್ತಿಯನ್ನು ಕೊನೆಗೂ ಈ ವರ್ಷವೇ ಯುಎಇಯಲ್ಲಿ ಆಯೋಜಿಸಲು ಬಿಸಿಸಿಐ ಸಿದ್ಧವಾಗಿದೆ. ಇದರೊಂದಿಗೆ ಭಾನುವಾರ ನಡೆದ ಐಪಿಎಲ್ ಆಡಳಿತ ಮಂಡಳಿಯ ಮಹತ್ವದ ಸಭೆಯಲ್ಲಿ ಎಲ್ಲ ಹಾಲಿ ಪ್ರಾಯೋಜಕತ್ವಗಳನ್ನೂ ಮುಂದುವರಿಸಲು ನಿರ್ಧರಿಸಲಾಗಿದೆ. ಇದರಿಂದ ಚೀನಾ ಕಂಪನಿಗಳ ಪ್ರಾಯೋಜಕತ್ವವೂ ಸೇರಿದೆ. ಇದು ಈಗ ಕ್ರಿಕೆಟ್ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

    ಇದನ್ನೂ ಓದಿ: PHOTO | ರಕ್ಷಾ ಬಂಧನದ ಸಂಭ್ರಮದಲ್ಲಿ ಕ್ರೀಡಾತಾರೆಯರು

    ಡಿ ವಿವಾದಕ್ಕೆ ಸಂಬಂಧಿಸಿದಂತೆ ಚೀನಾ ಅತಿಕ್ರಮಣಕ್ಕೆ ಭಾರತೀಯ ಯೋಧರ ಬಲಿದಾನವಾದ ನಡುವೆಯೂ ಐಪಿಎಲ್ ಟೂರ್ನಿಗೆ ಚೀನಾ ಪ್ರಾಯೋಜಕತ್ವವನ್ನು ಉಳಿಸಿಕೊಳ್ಳಲಾಗಿದೆ. ಬಿಸಿಸಿಐನ ಈ ನಿರ್ಧಾರ ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ತೀವ್ರ ಅಸಮಾಧಾನ ತಂದಿದೆ. ಇದರ ಬೆನ್ನಲ್ಲೇ ಟ್ವಿಟರ್‌ನಲ್ಲಿ ‘ಬಾಯ್ಕಾಟ್ ಐಪಿಎಲ್’ ಮತ್ತು ‘ಚೈನೀಸ್ ಐಪಿಎಲ್’ ಹ್ಯಾಷ್‌ಟ್ಯಾಗ್‌ಗಳು ಭರ್ಜರಿ ಟ್ರೆಂಡಿಂಗ್‌ಗೆ ಬಂದಿವೆ.

    ಇವೆರಡು ಹ್ಯಾಷ್‌ಟ್ಯಾಗ್‌ಗಳ ಮೂಲಕ ಐಪಿಎಲ್ ಟೂರ್ನಿಯನ್ನು ಅಭಿಮಾನಿಗಳು ಕರೆ ನೀಡಿದ್ದು, ವಿವಿಧ ರೀತಿಯ ಮೀಮ್ಸ್, ಟ್ರೋಲ್‌ಗಳ ಮೂಲಕವೂ ಬಿಸಿಸಿಐ ಮತ್ತು ಐಪಿಎಲ್ ವಿರುದ್ಧ ಆಕ್ರೋಶಗಳನ್ನು ಹೊರಹಾಕುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts