More

    ಬೆಚ್ಚಿ ಬೀಳಿಸುವ ಅಂಬುಜಾ; ಶುಭಾ ಪೂಂಜಾ, ರಜಿನಿ ನಟಿಸಿರುವ ಮಹಿಳಾ ಪ್ರಧಾನ ಚಿತ್ರ

    ಬೆಂಗಳೂರು: ಶುಭಾ ಪೂಂಜಾ ಮತ್ತು ‘ಅಮೃತವರ್ಷಿಣಿ’ ಧಾರಾವಾಹಿ ಖ್ಯಾತಿಯ ರಜಿನಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಮಹಿಳಾ ಪ್ರಧಾನ ಸಿನಿಮಾ ‘ಅಂಬುಜಾ’. ಇತ್ತೀಚೆಗಷ್ಟೆ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಯಿತು.

    ನಿರ್ದೇಶಕ ಶ್ರೀನಿ ಹನುಮಂತರಾಜು, ‘ಈ ಹಿಂದೆ ನಾನು, ಶುಭಾ ಪೂಂಜಾ ಒಂದು ಸಿನಿಮಾ ಮಾಡಿದ್ದೆವು. ಇದು ಎರಡನೇ ಚಿತ್ರ. ಈ ಕಥೆ ನೀವೆಲ್ಲೂ ನೋಡಿರುವುದಿಲ್ಲ, ಕೇಳಿರುವುದಿಲ್ಲ. ಚಿತ್ರ ನೋಡುವಾಗ ಖಂಡಿತ ಬೆಚ್ಚಿ ಬೀಳುತ್ತೀರ. ಸುಮ್ಮನೇ ಹೇಳುತ್ತಿಲ್ಲ. ಭರವಸೆ ನೀಡುತ್ತಿದ್ದೇವೆ. ಸಿನಿಮಾ ನೋಡಿ ನೀವೇ ಶಾಕ್ ಆಗುತ್ತೀರ. ಸಿನಿಮಾ ನೋಡಿದ ಕೆಲ ಪ್ರೇಕ್ಷಕರು ನಡುಗಿಬಿಟ್ಟೆವು ಎಂದರು’ ಎಂದು ಮಾಹಿತಿ ನೀಡಿದರು. ಎತ್ತರ ಎಂದರೆ ಭಯ ಪಡುವ ಶುಭಾ ಕೂಡ ಹಾಡಿನ ಶೂಟಿಂಗ್‌ಗೆ ಬೆಟ್ಟವನ್ನೇರಿದ್ದರಂತೆ. ಪಾತ್ರದ ಬಗ್ಗೆ ಅವರು, ‘ನಾನು ಕ್ರೈಮ್ ರಿಪೋರ್ಟರ್ ಪಾತ್ರದಲ್ಲಿ ನಟಿಸಿದ್ದೇನೆ. ಹಲವು ಶೇಡ್‌ಗಳಿವೆ. ನನಗೆ ತುಂಬ ಇಷ್ಟವಾದ ಪಾತ್ರ. ಕ್ರೈಮ್, ಹಾರರ್, ಸಸ್ಪೆನ್ಸ್, ಕಾಮಿಡಿ, ಸೆಂಟಿಮೆಂಟ್ ಎಲ್ಲ ಅಂಶಗಳೂ ಚಿತ್ರದಲ್ಲಿವೆ’ ಎಂದರು. ಕಾಲು ನೋವಿನ ನಡುವೆಯೇ 25 ಕೆಜಿ ತೂಕದ ಕಾಸ್ಟ್ಯೂಮ್ ಧರಿಸಿ ನಟಿಸಿದ್ದ ರಜಿನಿ, ‘ಇದು ನನ್ನ ಮೊದಲ ಸಿನಿಮಾ. ಡೆಬ್ಯೂನಲ್ಲೇ ಅದ್ಭುತ ಪಾತ್ರ ಸಿಕ್ಕಿದೆ. ಎಲ್ಲರನ್ನೂ ಕಾಡುವಂತ ಪಾತ್ರ. ನಾನು ಹೇಳುವುದಕ್ಕಿಂತ ಜನ ನೋಡಿ ಮೆಚ್ಚಿಕೊಂಡರೆ ಅದೇ ಖುಷಿ’ ಎಂದರು.

    ದೀಪಕ್ ಸುಬ್ರಮಣ್ಯ ಚಿತ್ರದ ನಾಯಕನಾಗಿದ್ದು, ಪದ್ಮಜಾ ರಾವ್, ಜಗದೀಶ್ ಹಲ್ಕುಡೆ, ಶರಣಯ್ಯ, ಗೋವಿಂದೇಗೌಡ, ಸಂದೇಶ್ ಶೆಟ್ಟಿ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಮುರಳೀಧರ್ ಛಾಯಾಗ್ರಹಣ, ವಿಜಯ್ ಕುಮಾರ್ ಸಂಕಲನವಿರಲಿದೆ. ಕ್ರೈಮ್ ಹಾರರ್ ಥ್ರಿಲ್ಲರ್ ಜಾನರ್‌ನ ಅಂಬುಜಾ ಇದೇ ತಿಂಗಳ 21ರಂದು ರಿಲೀಸ್ ಆಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts