More

    ಹಸಿದವರಿಗೆ ಶ್ರುತಿ ನಾಯ್ಡು ಉಚಿತ ಆಹಾರ … ಮೈಸೂರಿನಲ್ಲಿ ನಿವೃತ್ತಿ ಜೀವನ ನಡೆಸುತ್ತಿರುವವರಿಗೆ ಮಾತ್ರ

    ಕರೊನಾ ವೈರಸ್‌ನಿಂದಾಗಿ ಬಡಜನರು ಊಟ ಇಲ್ಲದೆ ಪರದಾಡುತ್ತಿರುವಾಗ, ಅವರ ನೆರವಿಗೆ ಹಲವು ಸಿನಿಮಾ ಕಲಾವಿದರು ಧಾವಿಸಿದ್ದಾರೆ. ಈಗಾಗಲೇ ಮೈಸೂರಿನಲ್ಲಿ ದರ್ಶನ್ ಅಭಿಮಾನಿಗಳು ಹಸಿದವರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಸುದೀಪ್ ಅಭಿಮಾನಿಗಳು, ಕೊರಟಗೆರೆಯಲ್ಲಿ ಜಗ್ಗೇಶ್ ಅಭಿಮಾನಿಗಳು ಇದೇ ಕೆಲಸ ಮಾಡುತ್ತಿದ್ದಾರೆ. ಈಗ ನಟಿ-ನಿರ್ಮಾಪಕಿ ಶ್ರುತಿ ನಾಯ್ಡು ಸಹ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ.

    ಕೆಲವು ತಿಂಗಳುಗಳ ಹಿಂದೆ ಮೈಸೂರಿನಲ್ಲಿ ‘ಮೈಸೂರು ಮಿರ್ಚಿ’ ಎಂಬ ಹೋಟೆಲ್ ಪ್ರಾರಂಭಿಸಿದ್ದರು ಶ್ರುತಿ ನಾಯ್ಡು. ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಈ ಹೋಟೆಲ್ ಉದ್ಘಾಟಿಸಿ ಶ್ರುತಿ ಮತ್ತು ತಂಡಕ್ಕೆ ಶುಭ ಹಾರೈಸಿದ್ದರು. ಈಗ ಮೈಸೂರಿನಲ್ಲಿ ಆಹಾರದ ಅಗತ್ಯವಿರುವವರೆಗೆ, ಅದೇ ಹೋಟೆಲ್ ಮೂಲಕ ಆಹಾರವನ್ನು ಉಚಿತವಾಗಿ ತಲುಪಿಸುವುದಕ್ಕೆ ಶ್ರುತಿ ನಾಯ್ಡು ಮುಂದಾಗಿದ್ದಾರೆ. ಅದರಲ್ಲೂ ಮೈಸೂರನ್ನು ‘ಪೆನ್ಶನರ್ಸ್‌ ಪ್ಯಾರಡೈಸ್’ (ನಿವೃತ್ತರ ಸ್ವರ್ಗ) ಎಂದೇ ಕರೆಯಲಾಗುತ್ತದೆ. ಆಹಾರಕ್ಕೆ ಕಷ್ಟಪಡುತ್ತಿರುವ ನಿವೃತ್ತರಿಗೆ ಸಹಾಯಹಸ್ತ ಚಾಚುತ್ತಿದ್ದಾರೆ ಶ್ರುತಿ.

    ಈ ಕುರಿತು ಮಾತನಾಡುವ ಅವರು, ‘ಮೈಸೂರಿನಲ್ಲಿ ನಿವೃತ್ತಿ ಜೀವನ ನಡೆಸುತ್ತಿರುವ ಅದೆಷ್ಟೋ ಜನ ವಾಸವಾಗಿದ್ದಾರೆ. ಕೆಲವರು ಒಂಟಿಯಾಗಿ ಬದುಕುತ್ತಿದ್ದಾರೆ. ಅಡುಗೆಯವರು ಬಾರದೇ ಹಸಿವಿನಿಂದ ಅವರು ದಿನಗಳನ್ನು ದೂಡುತ್ತಿದ್ದಾರೆ. ಅಲ್ಲದೆ ಅನಾಥರು, ಕೂಲಿ ಕಾರ್ಮಿಕರು ಕರೊನಾ ಪರಿಣಾಮದಿಂದಾಗಿ ಹಸಿವಿನಿಂದ ಬಳಲುವಂತಾಗಿದೆ. ಅಂಥವರಿಗೆ ಅನ್ನ ನೀಡುವ ಯೋಜನೆ ಹಾಕಿದ್ದೇನೆ. ಆಹಾರದ ಅಗತ್ಯ ಇರುವವರು ೆನ್ ಕರೆ ಮಾಡಿದರೆ, ನಮ್ಮ ಸಿಬ್ಬಂದಿಯೇ ಆಹಾರವನ್ನು ತಲುಪಿಸುತ್ತಾರೆ’ ಎಂದು ಶ್ರುತಿ ನಾಯ್ಡು ಹೇಳುತ್ತಾರೆ.

    ಡಂಗೂರ ಹೊಡೆದು ಕೆಲಸ ಮಾಡಲ್ಲ … ಜಗ್ಗೇಶ್ ಹೀಗೆ ಹೇಳಿದ್ದು ಯಾಕೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts