More

    ತಡಗವಾಡಿ ಗ್ರಾಪಂ ಸದಸ್ಯರಿಂದ ಪ್ರತಿಭಟನೆ

    ಶ್ರೀರಂಗಪಟ್ಟಣ: ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಭ್ರಷ್ಟಾಚಾರ ಹಾಗೂ ಉಲ್ಲೇಖಿಸಿರುವ ಕಾರ್ಯಸೂಚಿಗಳ ಬಗ್ಗೆ ಸಾಮಾನ್ಯ ಸಭೆಯಲ್ಲಿ ಗ್ರಾಪಂನ ಸದಸ್ಯರು ಪ್ರಶ್ನಿಸಲು ಅವಕಾಶ ನೀಡದೆ ಅಭಿವೃದ್ಧಿ ಅಧಿಕಾರಿ ಕರ್ತವ್ಯ ಲೋಪ ಎಸಗಿದ್ದು, ಇವರೊಂದಿಗೆ ಉಪಾಧ್ಯಕ್ಷ ಸಹ ದುಂಡಾವರ್ತನೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ತಡಗವಾಡಿ ಗ್ರಾಮ ಪಂಚಾಯಿತಿ ಸದಸ್ಯರು ಪ್ರತಿಭಟನೆ ನಡೆಸಿದರು.

    ತಾಲೂಕಿನ ತಡಗವಾಡಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಅಧ್ಯಕ್ಷೆ ಶಶಿಕಲಾ ನೇತೃತ್ವದಲ್ಲಿ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಹಾಗೂ ಆಡಳಿತದ ನಡುವೆ ಗದ್ದಲ ನಡೆಯಿತು. ಸದಸ್ಯರಾದ ಜಿ.ಎನ್.ಮಧುಗೌಡ, ವೆಂಕಟಮ್ಮ, ಶಾಂತಮ್ಮ, ಸುಕನ್ಯಾ ಸಭೆಯಿಂದ ಹೊರಬಂದು ಪ್ರತಿಭಟಿಸಿದರು.

    ಪ್ರತಿಭಟನೆಯ ನೇತೃತ್ವ ವಹಿಸಿದ್ದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಮಧುಗೌಡ ಮಾತನಾಡಿ, ಪಂಚಾಯಿತಿ ಪಿಡಿಒ ನಾಗೇಂದ್ರ 2021-2022ನೇ ಸಾಲಿನಲ್ಲಿ ಬೀದಿ ದೀಪಗಳನ್ನು ಹಾಕಲು ಪಂಚಾಯಿತಿ ಖರೀದಿಸಿರುವ ಹೈಮಾಸ್ಟ್ ದೀಪಗಳಿಗೆ 50 ಸಾವಿರದ ಬದಲು 1 ಲಕ್ಷ ರೂ.ಹೆಚ್ಚುವರಿ ಬಿಲ್ ಮಾಡಿ ಭ್ರಷ್ಟಾಚಾರ ಎಸಗಿದ್ದು, ಇದಕ್ಕೆ ಪಂಚಾಯಿತಿಯ ಕೆಲ ಸದಸ್ಯರು ಶಾಮೀಲಾಗಿದ್ದಾರೆ. ತಡಗವಾಡಿ ಗ್ರಾಮದ ಮುಜರಾಯಿ ದೇವಸ್ಥಾನ ಸೇರಿದಂತೆ ಗ್ರಾಪಂ ವ್ಯಾಪ್ತಿಯ ಗ್ರಾಮೀಣ ಜನರಿಗೆ ಖಾತೆ, ಇ-ಸ್ವತ್ತುಗಳನ್ನು ನಿಗದಿತ ಸಮಯದಲ್ಲಿ ಮಾಡಿಕೊಡದೆ 7-8 ತಿಂಗಳು ಸತಾಯಿಸಿ ಅಲೆದಾಡಿಸುವುದು, ನರೇಗಾದಲ್ಲಿ ಸಮುದಾಯ ಕಾಮಗಾರಿ ನಡೆಸಿದ ರೈತರಿಗೆ ಕೂಲಿ ಹಣ ಪಾವತಿ ಮಾಡದೆ ಜನಪ್ರತಿನಿಧಿಗಳ ಗಮನಕ್ಕೂ ತಾರದೆ ಶ್ರಮಿಕರ ಹಣವನ್ನು ಏಕಾಏಕಿ ರದ್ದುಗೊಳಿಸಿ ತೊಂದರೆ ನೀಡಿರುವುದು. 15ನೇ ಹಣಕಾಸು ಯೋಜನೆಯಲ್ಲಿ ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಲು ಸಂಬಂಧಪಟ್ಟ ಇಲಾಖೆ ಇಂಜಿನಿಯರ್‌ಗಳು ತಿಳಿಸಿದ್ದರು. ಕಮಿಷನ್ ನೀಡದ ಕಾರಣಕ್ಕೆ ದುರುದ್ದೇಶದಿಂದ ಈಗಲೂ ತಡೆಹಿಡಿದಿರುವುದು. ಈ ಹಿಂದಿನ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರ ಸಮ್ಮತಿಯೊಂದಿಗೆ ಆಡಳಿತ ಕೈಗೊಂಡ ನಿರ್ಣಯಗಳನ್ನು ಅಂಗೀಕರಿಸದೆ ಕರ್ತವ್ಯಲೋಪ ಸೇರಿದಂತೆ ಹಲವು ಅನಾಚಾರ ನಡೆಸಿದ್ದಾರೆ ಎಂದು ಆರೋಪಿಸಿದರು.

    ಈ ಎಲ್ಲವನ್ನೂ ಪ್ರಶ್ನಿಸುತ್ತಾರೆ ಎಂಬ ಕಾರಣಕ್ಕೆ ನಾವು ಅಧಿಕಾರದಲ್ಲಿದ್ದ ಹಿಂದಿನ ಸಾಮಾನ್ಯ ಹಾಗೂ ಗ್ರಾಮ ಸಭೆಗಳನ್ನು ಮುಂದೂಡುವುದು ಮತ್ತು ಸಭೆ ಕರೆದ ವೇಳೆ ಗೈರಾಗುತ್ತಿದ್ದ ಇವರು, ಪಂಚಾಯಿತಿಯಲ್ಲಿ ಆಡಳಿತ ಬದಲಾದ ಬಳಿಕ ಇಂದಿನ ಸಭೆಯಲ್ಲಿ ಈ ಎಲ್ಲ ಲೋಪಗಳ ಬಗ್ಗೆ ಪ್ರಶ್ನಿಸಲು ಅಜೆಂಡಾದಲ್ಲಿ ಉಲ್ಲೇಖಿಸಿದ್ದರೂ ಸದಸ್ಯರಿಗೆ ಉತ್ತರ ಕೊಡದೆ, ಸಭೆಯಲ್ಲಿ ಕಾನೂನಿನಡಿ ವಿಡಿಯೋ ಮಾಡಲು ಅವಕಾಶ ನೀಡದೆ ದಬ್ಬಾಳಿಕೆ ನಡೆಸಿ, ಗ್ರಾಮೀಣ ಜನರಿಗೆ ವಂಚನೆ ಮಾಡುತ್ತಿದ್ದಾರೆ. ಈ ಬಗ್ಗೆ ಇಲಾಖೆಯ ಮೇಲಾಧಿಕಾರಿಗಳಿಗೆ ಅಗತ್ಯ ದಾಖಲೆಗಳ ಸಮೇತ ಸಾಕಷ್ಟು ದೂರು ನೀಡಿದ್ದರು, ಏನೂ ಪ್ರಯೋಜನವಾಗಿಲ್ಲ. ಈ ಬಗ್ಗೆ ದೂರು ನೀಡಿದ ನಮ್ಮ ಮೇಲೆ ಪಿಡಿಒ ಧಮಕಿ ಹಾಕುತ್ತಾರೆ ಎಂದು ಆರೋಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts