More

    ಶಿಕ್ಷಣದ ಹರಿಕಾರ ಸಂಗನಬಸವ ಶ್ರೀಗಳು

    ವಿಜಯಪುರ: ಶೈಕ್ಷಣಿಕ ಬರವನ್ನು ಎದುರಿಸುತ್ತಿದ್ದ ೨೦ನೇ ಶತಮಾನದ ಪೂರ್ವಾರ್ಧದಲ್ಲಿ ಹತ್ತಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದರ ಮೂಲಕ ಸಂಗನಬಸವ ಶಿವಯೋಗಿಗಳು ಶಿಕ್ಷಣದ ಹರಿಕಾರ, ಮಹಾನ್ ತಪಸ್ವಿ, ಕರ್ಮಯೋಗಿ ಎನಿಸಿಕೊಂಡಿದ್ದಾರೆ ಎಂದು ಯರನಾಳ ವಿರಕ್ತಮಠದ ಶ್ರೀ ಗುರು ಸಂಗನಬಸವ ಸ್ವಾಮೀಜಿ ಹೇಳಿದರು.

    ನಗರದ ವೇದ ಅಕಾಡೆಮಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಂಥನಾಳದ ಶ್ರೀಸಂಗನಬಸವ ಶಿವಯೋಗಿಗಳ ೧೨೨ನೇ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

    ವಿದ್ಯಾರ್ಥಿಗಳೇ ಜೀವಂತ ದೇವರು, ಶಾಲೆಯೇ ದೇವಾಲಯ ಎಂದು ನಂಬಿದ್ದ ಶ್ರೀಗಳು ತಮ್ಮ ಪ್ರಖರ ಪ್ರವಚನ ಮೂಲಕ ಶಿಕ್ಷಣ, ರಾಷ್ಟ್ರೀಯತೆ, ವ್ಯಸನಮುಕ್ತ ಸಮಾಜ ನಿರ್ಮಾಣದಲ್ಲಿ ಹಗಲಿರುಳು ಶ್ರಮಿಸಿದರು. ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಜ್ಞಾನ ಜೋಳಿಗೆಯ ಮೂಲಕ ಸಂಗ್ರಹಿಸಿದ ಪ್ರತಿ ಪೈಸೆಯನ್ನು ಸಮಾಜಕ್ಕೆ ಮೀಸಲಿಟ್ಟರು. ಹಾಗಾಗಿ ಹತ್ತಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಸಾಧ್ಯವಾಯಿತು ಎಂದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೇದ ಅಕಾಡೆಮಿ ಅಧ್ಯಕ್ಷ ಶಿವಾನಂದ ಕೆಲೂರ ಮಾತನಾಡಿ, `ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬುದನ್ನು ಬಂಥನಾಳ ಶ್ರೀಗಳು ಬಾಲ್ಯದಲ್ಲಿಯೇ ಸಮಾಜಕ್ಕೆ ತೋರಿಸಿಕೊಟ್ಟರು. ಕೇವಲ ೮ ವರ್ಷದ ಬಾಲಕನಿದ್ದಾಗ ಹಸಿವಿನಿಂದ ಅಳುತ್ತಿದ್ದ ಒಬ್ಬ ಮಗುವಿಗೆ ತಮ್ಮ ತಂದೆ-ತಾಯಿಗಾಗಿ ಒಯ್ಯುತ್ತಿದ್ದ ಬುತ್ತಿಯನ್ನು ಸ್ವತಃ ಧರಿಸಿದ್ದ ಅಂಗಿಯನ್ನು ಕೊಡುವುದರ ಮೂಲಕ ಆ ಮಗುವನ್ನು ಸಂತೈಸಿದರು. ಹೀಗೆ ಸಮಾಜಕ್ಕಾಗಿ ಮನಸ್ಸು ತೆರೆದುಕೊಳ್ಳಬೇಕು. ಇನ್ನೊಬ್ಬರ ಕಷ್ಟಗಳಿಗೆ ಸ್ಪಂದಿಸುವ ಗುಣವನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.

    ಶಂಕರಗೌಡ ಪಾಟೀಲ, ದಯಾನಂದ ಕೆಲೂರ, ಜ್ಯೋತಿ ದೇಸಾಯಿ, ನಂದಬಸಪ್ಪ ಯರನಾಳ, ನೀತಾ ಉಪಾಧ್ಯ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts