More

    ಡಾ.ಅರುಣ್ ಉಳ್ಳಾಲ್‌ಗೆ ಶ್ರೀ ನಾರಾಯಣಗುರು ಸಂಶೋಧನಾ ಪ್ರಶಸ್ತಿ ಪ್ರದಾನ

    ಉಳ್ಳಾಲ: ಭಾರತ ಕಂಡ ಮಹಾನ್ ಅಧ್ಯಾತ್ಮ ಸಾಧಕರಾದ ನಾರಾಯಣಗುರುಗಳ ಹೃದಯದಲ್ಲಿ ಕವಿ, ಚಿಂತಕ, ಸಮಾಜಸೇವಕ, ಹೋರಾಟಗಾರ, ನಾಯಕ ಇದ್ದ ಕಾರಣ ಅವರಿಂದ ಸಾಮಾಜಿಕ ಬದಲಾವಣೆ ಸಾಧ್ಯವಾಯಿತು ಎಂದು ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಅಭಿಪ್ರಾಯಪಟ್ಟರು.


    ಮಂಗಳೂರು ವಿಶ್ವವಿದ್ಯಾಲಯದ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ವತಿಯಿಂದ ಶುಕ್ರವಾರ 2021ರ ಸಾಲಿನ ಶ್ರೀ ನಾರಾಯಣಗುರು ಸಂಶೋಧನಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.


    ಸಂಶೋಧಕ, ಯುವ ವಾಗ್ಮಿ ಡಾ.ಅರುಣ್ ಉಳ್ಳಾಲ್ ಅವರಿಗೆ 2021ರ ಸಾಲಿನ ಶ್ರೀ ನಾರಾಯಣಗುರು ಸಂಶೋಧನಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಸಾರಾಂಗದ ಪ್ರಕಟಣೆಯ ಪ್ರಶಸ್ತಿ ವಿಜೇತ ಕೃತಿ ‘ಗುರುತತ್ವ ದರ್ಶನ’ ಬಿಡುಗಡೆಗೊಳಿಸಲಾಯಿತು.


    ಮಂಗಳೂರು ವಿವಿ ಕುಲಪತಿ ಪ್ರೊ.ಸುಬ್ರಹ್ಮಣ್ಯ ಯಡಪಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ವಕೀಲ ಮೋಹನ್‌ಚಂದ್ರನ್ ನಂಬಿಯಾರ್ ವಿಶೇಷ ಉಪನ್ಯಾಸ ನೀಡಿದರು. ಮಂಗಳೂರು ವಿವಿ ಕುಲಸಚಿವ ಡಾ.ಕಿಶೋರ್ ಕುಮಾರ್ ಸಿ.ಕೆ., ಕಾಟಿಪಳ್ಳ ನಾರಾಯಣಗುರು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪಿ.ದಯಾಕರ್, ಪ್ರಸಾರಾಂಗದ ನಿರ್ದೇಶಕ ಡಾ.ಧನಂಜಯ ಕುಂಬಳೆ, ಅಧ್ಯಯನ ಪೀಠದ ಸದಸ್ಯೆ ನಮಿತಾ ಶ್ಯಾಮ್, ಸಂಶೋಧನಾ ಸಹಾಯಕ ಡಾ.ರವಿರಾಜ್ ಬಿ.ವಿ. ಉಪಸ್ಥಿತರಿದ್ದರು. ಅಧ್ಯಯನ ಪೀಠದ ನಿರ್ದೇಶಕ ಡಾ.ಗಣೇಶ್ ಅಮೀನ್ ಸಂಕಮಾರ್ ಸ್ವಾಗತಿಸಿದರು. ಉಪನ್ಯಾಸಕಿ ಅನು ಅಭಿನಂದನಾ ಪತ್ರ ವಾಚಿಸಿದರು. ಡಾ.ಧನಂಜಯ ಕುಂಬಳೆ ವಂದಿಸಿದರು. ಉಪನ್ಯಾಸಕ ಡಾ.ಯಶು ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

    ಅಧ್ಯಯನ ಪೀಠಗಳು ಯುವಜನಾಂಗವನ್ನು ಬೌದ್ಧಿಕ ವಿಕಸನಕ್ಕೆ ತೆರೆದುಕೊಳ್ಳುವ ಜತೆಗೆ ಸಮಾಜಮುಖಿ ಕಾರ್ಯ ಕ್ರಿಯಾಶೀಲವಾಗಿ ಮಾಡಿದಾಗ ವಿಶ್ವವಿದ್ಯಾಲಯಕ್ಕೆ ನಿಜಾರ್ಥ ಬರುತ್ತದೆ. ನಾರಾಯಣಗುರು ಪೀಠ ಈ ಕೆಲಸವನ್ನು ಅರ್ಥಪೂರ್ಣವಾಗಿ ಮಾಡುತ್ತಿದೆ.
    – ಪ್ರೊ.ಸುಬ್ರಹ್ಮಣ್ಯ ಯಡಪಡಿತ್ತಾಯ ಮಂಗಳೂರು ವಿವಿ ಕುಲಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts