More

    ಮಾತೆಯರು ಜಗತ್ತಿನ ಸರ್ವ ಶಕ್ತಿ, ಮಂಗಳೂರು ವಿಶ್ವವಿದ್ಯಾಲಯದ ರಾಣಿ ಅಬ್ಬಕ್ಕ ಅಧ್ಯಯನ ಪೀಠ ಹಮ್ಮಿಕೊಂಡ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಬಾಲಚಂದ್ರ ಕೆ. ಅಭಿಪ್ರಾಯ

    ಮಂಗಳೂರು: ಮಹಿಳೆಯರಿಗಿಂತ ಮಿಗಿಲಾದ ಶಕ್ತಿ ಇನ್ನೊಂದಿಲ್ಲ. ಪುರುಷನಿಗೆ ಪ್ರತಿಯೊಂದು ಸಂದರ್ಭ ಆಧಾರವಾಗಿ ನಿಂತವರು ಮಹಿಳೆಯರು. ಮಾತೆಯರು ಜಗತ್ತಿನ ಸರ್ವ ಶಕ್ತಿಯಾಗಿದ್ದಾರೆ ಎಂದು ಅನುದಾನಿತ ವಿದ್ಯಾದಾಯಿನಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಬಾಲಚಂದ್ರ ಕೆ. ಅಭಿಪ್ರಾಯಪಟ್ಟರು.

    ಮಂಗಳೂರು ವಿಶ್ವವಿದ್ಯಾಲಯದ ರಾಣಿ ಅಬ್ಬಕ್ಕ ಅಧ್ಯಯನ ಪೀಠ ಹಮ್ಮಿಕೊಂಡ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಣಿ ಅಬ್ಬಕ್ಕ ಸ್ವಾಭಿಮಾನಕ್ಕೆ ಹೆಸರಾದ ಮಹಿಳೆ, ಪ್ರಥಮ ಸ್ವಾತಂತ್ರೃ ಹೋರಾಟಗಾರ್ತಿಯಾಗಿ ತುಳುನಾಡಿನ ಮಣ್ಣಿಗೆ ಕೀರ್ತಿ ತಂದವರು ಎಂದರು.

    ಸ್ವಾಭಿಮಾನದ ಸಂಕೇತ ರಾಣಿ ಅಬ್ಬಕ್ಕ ವಿಷಯದ ಕುರಿತು ಮಾತನಾಡಿದ ಗೋವಿಂದದಾಸ ಕಾಲೇಜಿನ ಉಪನ್ಯಾಸಕಿ ಅಕ್ಷತಾ ನವೀನ್ ಶೆಟ್ಟಿ, ಮಾತೃ ಮೂಲ(ಅಳಿಯಕಟ್ಟು) ಕುಟುಂಬ ಪದ್ಧತಿಯ ತುಳುನಾಡಿನ ಬದುಕಿನಲ್ಲಿ ಪುರುಷ ಪ್ರಧಾನ ವ್ಯವಸ್ಥೆಯನ್ನು ಮೆಟ್ಟಿನಿಂತು ವಿದೇಶಿಯರೊಂದಿಗೆ ಹೋರಾಡಿದ ವೀರ ವನಿತೆ ಎಂದರು.

    ಗೋವಿಂದದಾಸ ಪದವಿಪೂರ್ವ ಕಾಲೇಜಿನ ಆಂಗ್ಲ ಉಪನ್ಯಾಸಕಿ ಜಯಂತಿ ಸಂಕಮಾರ್ ಉಪಸ್ಥಿತರಿದ್ದರು. ವಿದ್ಯಾದಾಯಿನಿ ಪ್ರೌಢಶಾಲೆ ಪ್ರಾಧ್ಯಾಪಕಿ ಸುಜಾತಾ ಕಾರ್ಯಕ್ರಮ ನಿರ್ವಹಿಸಿದರು. ಅಬ್ಬಕ್ಕ ಅಧ್ಯಯನ ಪೀಠದ ನಿರ್ದೇಶಕ ಡಾ.ಗಣೇಶ್ ಅಮೀನ್ ಸಂಕಮಾರ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts