More

    ನಂಬಿ ಬಂದವರನ್ನು ನೆರಳಾಗಿ ಕಾಪಾಡುವ ಶ್ರೀ ಹುಚ್ಚರಾಯಸ್ವಾಮಿ

    ಶಿಕಾರಿಪುರ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮತ್ತು ಕುಟುಂಬದ ಸದಸ್ಯರು ಮಹಾಲಯ ಅಮಾವಾಸ್ಯೆಯ ಪ್ರಯುಕ್ತ ಶನಿವಾರ ಕ್ಷೇತ್ರಾಧಿಪತಿ ಶ್ರೀ ಹುಚ್ಚರಾಯಸ್ವಾಮಿ ದರ್ಶನಾಶೀರ್ವಾದ ಪಡೆದರು. ನಂತರ ಶ್ರೀ ಗುರುರಾಘವೇಂದ್ರ ಸ್ವಾಮಿಗಳ ವೃಂದಾವನ ದರ್ಶನ ಮಾಡಿ ಫಲ ಮಂತ್ರಾಕ್ಷತೆ ಪಡೆದರು.

    ಈ ವೇಳೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಅವರು, ಭಗವಂತ ಅವ್ಯಕ್ತ. ಆದರೆ ಆತನ ಇರುವಿಕೆಯ ಅನುಭವ ನಮಗೆಲ್ಲರಿಗೂ ಆಗುತ್ತಲೇ ಇರುತ್ತದೆ. ಶಿಕಾರಿಪುರ ಕ್ಷೇತ್ರಾಧಿಪತಿ ಶ್ರೀ ಹುಚ್ಚರಾಯಸ್ವಾಮಿ ಅತ್ಯಂತ ಜಾಗೃತನಾಗಿದ್ದು ಅವನ ನಂಬಿ ಬಂದವರ ಇಷ್ಟಾರ್ಥಗಳನ್ನು ಪೂರೈಸುತ್ತಿದ್ದಾನೆ ಎಂದರು.
    ನಾನು ಶಿಕಾರಿಪುರಕ್ಕೆ ಬಂದಾಗಿನಿಂದಲೂ ನನ್ನನ್ನು ಮತ್ತು ನನ್ನ ಕುಟುಂಬವನ್ನು ನೆರಳಾಗಿ ಕಾಪಾಡುತ್ತಿದ್ದಾನೆ. ಶ್ರೀ ಸ್ವಾಮಿಯ ಅನುಗ್ರಹ ಮತ್ತು ಆಶೀರ್ವಾದದ ಬಲದಿಂದ ಕೇವಲ ಸಾಮಾನ್ಯ ರೈತನ ಮಗನಾಗಿದ್ದ ನಾನು ಪುರಸಭೆ ಸದಸ್ಯನಾಗಿ, ಶಾಸಕನಾಗಿ, ವಿಪಕ್ಷ ನಾಯಕನಾಗಿ, ಬಿಜೆಪಿ ರಾಜ್ಯಾಧ್ಯಕ್ಷನಾಗಿ, ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಜನಸೇವೆ ಮಾಡಿದ್ದೇನೆ. ಇದೀಗ ಅತಿ ದೊಡ್ಡ ರಾಜಕೀಯ ಪಕ್ಷದ ಸಂಸದೀಯ ಮಂಡಳಿಯ ಸದಸ್ಯರಾಗಿ ಪ್ರಧಾನಿ, ಗೃಹ ಸಚಿವ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸೇರಿದಂತೆ ಗಣ್ಯರ ಜತೆಗೆ ಕೆಲಸ ಮಾಡುವ ಅವಕಾಶವನ್ನು ಶ್ರೀ ಹುಚ್ಚರಾಯಸ್ವಾಮಿ ನೀಡಿದ್ದಾನೆ ಎಂದು ಹೇಳಿದರು.
    ಶ್ರೀ ಹುಚ್ಚರಾಯಸ್ವಾಮಿಯನ್ನು ನಂಬಿ ಕೆಟ್ಟವರಿಲ್ಲ. ಬಿ.ವೈ.ರಾಘವೇಂದ್ರ ಪುರಸಭೆಯಿಂದ ಲೋಕಸಭೆಗೆ ಹೋಗಿ ದೇಶದಲ್ಲಿಯೇ ಅತಿ ಹೆಚ್ಚು ಅನುದಾನ ತಂದು ಅಭಿವೃದ್ಧಿ ಕಾರ್ಯ ಮಾಡುತ್ತಿರುವ ಸಂಸದರಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಬಿ.ವೈ.ವಿಜಯೇಂದ್ರ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಶ್ರೀ ಹುಚ್ಚರಾಯಸ್ವಾಮಿ ಮತ್ತು ರಾಯರ ಅನುಗ್ರಹದ ಫಲವಾಗಿ, ತಾಲೂಕಿನ ಜನತೆಯ ಆಶೀರ್ವಾದದ ಬಲದಿಂದ ಶಿಕಾರಿಪುರದ ಶಾಸಕರಾಗಿದ್ದಾರೆ. ಇದು ದೈವಾನುಗ್ರಹದ ಫಲ ಎಂದರು.
    ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಬರಗಾಲವಿದ್ದರು ಸಂಪ್ರದಾಯ ಮತ್ತು ಆಚಾರ ವಿಚಾರಗಳಿಗೆ ಧಕ್ಕೆ ಬಾರದಂತೆ ಈ ಬಾರಿಯ ದಸರಾ ಸರಳವಾಗಿದ್ದರೂ ಸಂಭ್ರಮದಿಂದ ನಡೆಯಲಿ. ಲೋಕ ಕಲ್ಯಾಣಾರ್ಥವಾದ ಈ ಧಾರ್ಮಿಕ ಆಚರಣೆಯಿಂದ ತಾಲೂಕಿನ ಜನತೆಗೆ ಯಾವದೇ ರೋಗ ರುಜಿನಗಳಿಲ್ಲದೇ ಸಂತಸ ಮೂಡಲಿ. ಶ್ರೀ ಹುಚ್ಚರಾಯಸ್ವಾಮಿ ಹಾಗೂ ಪರಿವಾರ ದೇವತೆಗಳ ಆಶೀರ್ವಾದ ಜನತೆಯ ಮೇಲಿರಲಿ. ನಮ್ಮ ರೈತಾಪಿ ಬಂಧುಗಳ ಸಂಕಷ್ಟಗಳು ದೂರವಾಗಿ ಅವರ ಮೊಗದಲ್ಲಿ ನಗು ಚೆಲ್ಲಲಿ ಎಂದು ಹೇಳಿದರು.
    ತೇಜಸ್ವಿನಿ ರಾಘವೇಂದ್ರ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ, ವಸಂತಗೌಡ, ಕಾನೂರು ಬಸವೇಶ್ವರ ದೇವಸ್ಥಾನ ಸಮಿತಿಯ ನಾಗರಾಜಗೌಡ, ವೀರಣ್ಣಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts