More

    ರಾಷ್ಟ್ರ ಮಟ್ಟದ ಅಂಗವಿಕಲರ ಕ್ರಿಕೆಟ್ ಟೂರ್ನಿಗೆ ಚಾಲನೆ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಅಖಿಲ ಭಾರತ ದೈಹಿಕ ಅಂಗವಿಕಲರ ಕ್ರಿಕೆಟ್ ಸಂಸ್ಥೆ, ಕರ್ನಾಟಕ ಜಿಮ್ಾನಾ ಅಸೋಸಿಯೇಶನ್ ಸಹಯೋಗದೊಂದಿಗೆ ಆಯೋಜಿಸಿರುವ ಶ್ರೀ ಅಜಿತ ವಾಡೇಕರ್ ಟ್ರೋಫಿ-ರಾಷ್ಟ್ರ ಮಟ್ಟದ ದೈಹಿಕ ಅಂಗವಿಕಲರ ಟ್ವೆಂಟಿ 20 ಕ್ರಿಕೆಟ್ ಟೂರ್ನಿಗೆ ಇಲ್ಲಿಯ ರಾಜನಗರ ಕೆಎಸ್​ಸಿಎ ಮೈದಾನದಲ್ಲಿ ಭಾನುವಾರ ಚಾಲನೆ ನೀಡಲಾಯಿತು.

    ಅಖಿಲ ಭಾರತ ದೈಹಿಕ ಅಂಗವಿಕಲರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ, ಮಾಜಿ ಕ್ರಿಕೆಟಿಗ ಕರ್ಸನ್ ಘಾರ್ವಿ ಚಾಲನೆ ನೀಡಿ, ನಿಮ್ಮನ್ನು ನೀವು ದೈಹಿಕವಾಗಿ ಅಸಮರ್ಥರು ಎಂದು ತಿಳಿದುಕೊಳ್ಳಬೇಡಿ. ನಿಮ್ಮಲ್ಲೂ ವಿಶೇಷವಾದ ಪ್ರತಿಭೆ ಇದೆ. ಇಂಥ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಲು ಪ್ರಯತ್ನಿಸಿ. ದೈಹಿಕ ಅಂಗವಿಕಲರ ಕ್ರಿಕೆಟ್ ಚಟುವಟಿಕೆಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು, ಹೆಚ್ಚೆಚ್ಚು ಪಂದ್ಯಗಳನ್ನು ಆಯೋಜಿಸಲು ಸಂಸ್ಥೆಯ ವತಿಯಿಂದ ಪ್ರಯತ್ನಿಸಲಾಗುವುದು ಎಂದು ಹೇಳಿದರು.

    ಕರ್ನಾಟಕ ಜಿಮ್ಾನಾ ಅಸೋಸಿಯೇಶನ್ ಅಧ್ಯಕ್ಷ ಎಚ್.ಎನ್. ನಂದಕುಮಾರ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಧಾರವಾಡ ವಲಯ ಅಧ್ಯಕ್ಷ ವೀರಣ್ಣ ಸವಡಿ ಮಾತನಾಡಿ, ಆಟಗಾರರಿಗೆ ಶುಭ ಹಾರೈಸಿದರು. ವಿನೋದ ದೇಶಪಾಂಡೆ, ಪ್ರಸಾದ ದೇಸಾಯಿ, ದೀಪಕ ಜಾಧವ, ಬ್ರಿಜೇಶ ಸೋಲ್ಕರ್, ಶಿವಾನಂದ ಗುಂಜಾಳ ಇದ್ದರು.

    ಪಂದ್ಯಾವಳಿಯಲ್ಲಿ 8 ತಂಡಗಳು ಭಾಗವಹಿಸಿದ್ದು, ಹುಬ್ಬಳ್ಳಿಯ ರಾಜನಗರ ಕೆಎಸ್​ಸಿಎ, ದೇಶಪಾಂಡೆನಗರ ಕೆಜಿಎ ಹಾಗೂ ರೈಲ್ವೆ ಮೈದಾನಗಳಲ್ಲಿ ಪಂದ್ಯಗಳು ನಡೆಯಲಿವೆ. ಏ. 3 ರಂದು ಫೈನಲ್ ಪಂದ್ಯ ನಿಗದಿಯಾಗಿದೆ. ಭಾರತ ಅಂಗವಿಕಲರ ತಂಡವನ್ನು ಪ್ರತಿನಿಧಿಸಿದ ಅನೀಶ್ ರಾಜನ್, ನರೇಂದ್ರ ಮಂಗೋರೆ, ರಮೇಶ ನಾಯ್ಡು, ಅವನೀಶ ತಿವಾರಿ ಸೇರಿ ಸುಮಾರು 130 ಆಟಗಾರರು ಪಾಲ್ಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts