More

    ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್‌ನಲ್ಲಿ ಶತಕ ಸಿಡಿಸಿ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ದಾಖಲೆ ಸರಿಗಟ್ಟಿದ ಶ್ರೇಯಸ್ ಅಯ್ಯರ್

    ಮುಂಬೈ: ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (117 ರನ್, 113 ಎಸೆತ, 9 ಬೌಂಡರಿ, 2 ಸಿಕ್ಸರ್) ಏಕದಿನ ಕ್ರಿಕೆಟ್‌ನ 50ನೇ ಶತಕ ಹಾಗೂ ಶ್ರೇಯಸ್ ಅಯ್ಯರ್ (105 ರನ್, 70 ಎಸೆತ, 4 ಬೌಂಡರಿ, 8 ಸಿಕ್ಸರ್) ಸತತ 2ನೇ ಶತಕದ ಸಾಹಸ ಮತ್ತು ವೇಗಿ ಮೊಹಮದ್ ಶಮಿ (57ಕ್ಕೆ 7) ಮಾರಕ ದಾಳಿಯ ನೆರವಿನಿಂದ ಭಾರತ ತಂಡ ಏಕದಿನ ವಿಶ್ವಕಪ್‌ನ ಮೊದಲ ಸೆಮಿೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು 70 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ.
    ಐಸಿಸಿ ವಿಶ್ವಕಪ್‌ನಲ್ಲಿ ಸತತ 2ನೇ ಶತಕ ಸಿಡಿಸಿದ ಶ್ರೇಯಸ್ ಅಯ್ಯರ್ ನೂತನ ದಾಖಲೆ ಬರೆದಿದ್ದಾರೆ
    ಈ ಕೆಳಗಿನಂತಿವೆ:

    1: ಶ್ರೇಯಸ್ ಅಯ್ಯರ್ ಏಕದಿನ ವಿಶ್ವಕಪ್‌ನಲ್ಲಿ 4 ಅಥವಾ ಅದಕ್ಕಿಂದ ಕೆಳ ಕ್ರಮಾಂಕದಲ್ಲಿ 500 ರನ್ ಪೂರೈಸಿದ ಮೊದಲ ಬ್ಯಾಟರ್ ಎನಿಸಿದರು. ಕಿವೀಸ್‌ನ ಸ್ಕಾಟ್ ಸ್ಟೈರಿಸ್ 499 ರನ್ ಗಳಿಸಿದ್ದು ಹಿಂದಿನ ದಾಖಲೆ.

    2: ಶ್ರೇಯಸ್ ಅಯ್ಯರ್ ಏಕದಿನ ವಿಶ್ವಕಪ್‌ನಲ್ಲಿ ಸತತ 2 ಶತಕ ಸಿಡಿಸಿದ ರಾಹುಲ್ ದ್ರಾವಿಡ್ (1999) ಸಾಧನೆ ಸರಿಗಟ್ಟಿದರು. ರೋಹಿತ್ ಶರ್ಮ ಸತತ 3 ಶತಕ ಸಿಡಿಸಿದ ದಾಖಲೆ ಹೊಂದಿದ್ದಾರೆ.
    3: ಕೊಹ್ಲಿ, ಶ್ರೇಯಸ್ ಶತಕದೊಂದಿಗೆ ಏಕದಿನ ವಿಶ್ವಕಪ್ ಸೆಮೀಸ್‌ನಲ್ಲಿ ಭಾರತದ ಶತಕವೀರರ ಸಂಖ್ಯೆ 3ಕ್ಕೇರಿದೆ. ಸೌರವ್ ಗಂಗೂಲಿ (2003) ಇದುವರೆಗಿನ ಏಕೈಕ ಸಾಧಕರಾಗಿದ್ದರು.

    1. ಶ್ರೇಯಸ್ ಅಯ್ಯರ್ (8) ಏಕದಿನ ವಿಶ್ವಕಪ್‌ನ ಇನಿಂಗ್ಸ್‌ನಲ್ಲಿ ಭಾರತದ ಪರ ಗರಿಷ್ಠ ಸಿಕ್ಸರ್ ಸಿಡಿಸಿದ ಸೌರವ್ ಗಂಗೂಲಿ (7) ದಾಖಲೆ ಮುರಿದರು.

    163: ವಿರಾಟ್ ಕೊಹ್ಲಿ-ಶ್ರೇಯಸ್ ಅಯ್ಯರ್ ಜೋಡಿ ಏಕದಿನ ವಿಶ್ವಕಪ್ ನಾಕೌಟ್ ಪಂದ್ಯಗಳಲ್ಲಿ ಭಾರತ ಪರ 100 ಪ್ಲಸ್ ಜತೆಯಾಟ ನೀಡಿದ 5ನೇ ಜೋಡಿ ಎನಿಸಿತು. ಜತೆಗೆ 2015ರಲ್ಲಿ ಬಾಂಗ್ಲಾದೇಶ ಎದುರು ರೋಹಿತ್ ಶರ್ಮ-ಸುರೇಶ್ ರೈನಾ (122) ಜತೆಯಾಟವನ್ನು ಹಿಂದಿಕ್ಕಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts