More

    ಪಂಚಪೀಠಗಳೂ ಯಡಿಯೂರಪ್ಪ ಅವರ ಪರ ಇವೆ: ಶ್ರೀಶೈಲ ಜಗದ್ಗುರು

    ದಾವಣಗೆರೆ: ಸಿಎಂ ಬಿ.ಎಸ್​. ಯಡಿಯೂರಪ್ಪ ಅವರಿಗೆ ಬೆಂಬಲವಾಗಿ ಶ್ರೀಶೈಲ ಜಗದ್ಗುರು ಪೀಠವಿದೆ, ಇದರಲ್ಲಿ ಎರಡು ಮಾತಿಲ್ಲ. ಜತೆಗೆ ವೀರಶೈವ ಮಹಾಸಭೆ, ಪಂಚಪೀಠಗಳು ಸೇರಿ ಎಲ್ಲವೂ ಅವರ ಪರ ಇವೆ ಎಂದು ದಾವಣಗೆರೆಯಲ್ಲಿ ಶ್ರೀಶೈಲ ಜಗದ್ಗುರು ಪೀಠದ ಡಾ. ಶ್ರೀ ಚನ್ನಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

    ಸದ್ಯ ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರಿಯುವುದು ಸೂಕ್ತ. ಬಿಜೆಪಿ ಹೈಕಮಾಂಡ್ ಬಿಎಸ್​ವೈ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ರಾಜ್ಯದ ಜನರು ಯಡಿಯೂರಪ್ಪ ಅವರನ್ನು ಒಬ್ಬ ಜನನಾಯಕ ಎಂದು ಒಪ್ಪಿಕೊಂಡಿದ್ದಾರೆ. ಕಾರಣ ಅವರು ಸಿಎಂ ಆದ ಬಳಿಕ ನಡೆದ ಚುನಾವಣೆ ಫಲಿತಾಂಶಗಳೇ ಇದಕ್ಕೆ ಉತ್ತರ ಎಂದು ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಸಿಎಂ ಬದಲಾವಣೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಅವರದ್ನೆನ್ನಲಾದ ಆಡಿಯೋ ಸಹ ಬಿಡುಗಡೆ ಆಗಿದೆ‌. ಅದು ತಮ್ಮದಲ್ಲ ಎಂದು ಅವರೇ ಹೇಳಿದ್ದಾರೆ. ಹೀಗೆ ತೆರೆಮರೆಯಲ್ಲಿ ಕೆಲವು ಚಟುವಟಿಕೆಗಳು ನಡೆಯುತ್ತಿವೆ. ಎಲ್ಲವೂ ಅಸ್ಪಷ್ಟವಾಗಿವೆ. ಇದರ ಬಗ್ಗೆ ಇನ್ನಷ್ಟು ದಿನ ಕಾದು ಸಮ ಪೀಠಾಧಿಪತಿಗಳೊಂದಿಗೆ ಸಮಾಲೋಚನೆ ನಡೆಸಿ ಪ್ರತಿಕ್ರಿಯೆ ನೀಡಲಾಗುವುದು ಎಂದಿದ್ದಾರೆ. ಗುರುಪೂರ್ಣಿಮೆ ಪ್ರಯುಕ್ತ ಬುಧವಾರ ಬೆಂಗಳೂರಿಗೆ ಹೋಗುತ್ತಿದ್ದೇವೆ. ಅಗತ್ಯ ಬಿದ್ದರೆ ನಾಳೆ ಯಡಿಯೂರಪ್ಪ ಅವರನ್ನು ಭೇಟಿ ಮಾಡಲಾಗುವುದು ಎಂದೂ ಅವರು ಹೇಳಿದರು.

    ಸಿಎಂ ಬಿಎಸ್​ವೈ ವಿರುದ್ಧ ಸ್ವಪಕ್ಷದಲ್ಲೇ ಸಂಚು? ರಾಜಕೀಯ ಆಟ ಆಡ್ತಿರೋ ಕಾಣದ ಕೈ ಯಾವುದು?

    ವಧುವಿಗೆ ಹತ್ತನೇ ಕ್ಲಾಸು, ವರನಿಗೆ 30 ವರ್ಷ; ಬಾಲ್ಯವಿವಾಹ ಮಾಡಿಸಿದವರೆಲ್ಲರ ಬಂಧನ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts