More

    ಧನ್ವೀರ್ ಜತೆಗೆ ಶ್ರೀಲೀಲಾ: ದುಬಾರಿ ಆಯ್ತು, ಈಗ ಬೈ ಟು ಲವ್ ಲವ್..

    ಬೆಂಗಳೂರು: ಧ್ರುವ ಸರ್ಜಾ ಅಭಿನಯದ ‘ದುಬಾರಿ’ ಚಿತ್ರಕ್ಕೆ ಇತ್ತೀಚೆಗಷ್ಟೇ ನಾಯಕಿಯಾಗಿದ್ದ ಶ್ರೀಲೀಲಾ, ಈಗ ಇನ್ನೊಂದು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದು, ಈ ಬಾರಿ ಧನ್ವೀರ್​ಗೆ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಜನವರಿಯಿಂದ ಈ ಚಿತ್ರ ಪ್ರಾರಂಭವಾಗಲಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಧನ್ವೀರ್ ಅಭಿನಯದ ‘ಬಂಪರ್’ ಚಿತ್ರವು ಹೊಸ ವರ್ಷಕ್ಕೆ ಶುರುವಾಗಬೇಕಿತ್ತು. ಕಾರಣಾಂತರಗಳಿಂದ ಆ ಚಿತ್ರ ಸ್ವಲ್ಪ ಮುಂದಕ್ಕೆ ಹೋಗಿದ್ದು, ಅದರ ಬದಲು ಅದೇ ತಂಡದೊಂದಿಗೆ ಇನ್ನೊಂದು ಚಿತ್ರ ಮಾಡಲಿದ್ದಾರೆ ಧನ್ವೀರ್.

    ಈ ಚಿತ್ರವನ್ನೂ ಹರಿ ಸಂತೋಷ್ ನಿರ್ದೇಶಿಸಲಿದ್ದು, ಸುಪ್ರೀತ್ ನಿರ್ಮಾಣ ಮಾಡಲಿದ್ದಾರೆ. ಇದೊಂದು ಲವ್​ಸ್ಟೋರಿಯಾಗಿದ್ದು, ಈ ತಲೆಮಾರಿನ ಮದುವೆ ಮತ್ತು ಜೀವನದ ಸುತ್ತ ಸುತ್ತಲಿದೆ ಎನ್ನುತ್ತಾರೆ ಹರಿ ಸಂತೋಷ್. ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಅವರು, ‘ಈ ತಲೆಮಾರಿನವರಿಗೆ ಮದುವೆ ಮತ್ತು ಮಕ್ಕಳ ಕುರಿತಾಗಿ ಹಿಂಜರಿಕೆ ಇದೆ. ಯಾಕೆ ಹೀಗಾಗುತ್ತಿದೆ ಎನ್ನುವುದನ್ನು ಮನರಂಜನಾತ್ಮಕವಾಗಿ ಹೇಳುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡುತ್ತಿದ್ದೇವೆ’ ಎನ್ನುತ್ತಾರೆ.

    ಲಗ್ನ ಪತ್ರಿಕೆ ಜತೆ ವೈನ್​ ಬಾಟಲ್​, ಸ್ನಾಕ್ಸ್​ ಫ್ರೀ! ಮದುವೆ ಬೇಡ ಲಗ್ನ ಪತ್ರಿಕೆ ಬೇಕೆಂದ ಜನರು!

    21 ವರ್ಷ ರೇಪ್​ ಮಾಡಿ ಕೊನೆಗೂ ಕೊಂದೇ ಬಿಟ್ಟ ಪಾಗಲ್​ ಪ್ರೇಮಿ! ಅಮ್ಮನ ಬಾಯಿಯಿಂದಲೇ ಹೊರಬಿತ್ತು ಮಗಳ ನೋವಿನ ಕಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts